ಹಾವೇರಿ

ಡಾ. ಭೋಜರಾಜಗೆ ಸರ್ವಜ್ಞಶ್ರೀ ಪ್ರಶಸ್ತಿ

Published On :

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಜ.21
ತಾಲೂಕಿನ ರಟ್ಟಿಹಳ್ಳಿ ಕಬ್ಬಿಣ ಕಂಥಿಮಠದಿಂದ ಪ್ರಸಕ್ತ ಸಾಲಿನಿಂದ ಕೊಡ ಮಾಡುವ ಸರ್ವಜ್ಞ ಶ್ರೀ ಪ್ರಶಸ್ತಿಗೆ ತಾಲೂಕಿನ ಹಂಸಬಾವಿ ಗ್ರಾಮದ ಹಿರಿಯ ಸಾಹಿತಿ, ಸಂಶೋಧಕ, ವಿಶ್ರಾಂತ ಪ್ರಾದ್ಯಾಪಕ ಡಾ೤ ಭೋಜರಾಜ ಪಾಟೀಲ್ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ವಿಧಾನಸಭಾ ಮಾಜಿ ಸಭಾಪತಿ ಮತ್ತು ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಬಿ.ಜಿ. ಬಣಕಾರ ತಿಳಿಸಿದರು.
ರಟ್ಟಿಹಳ್ಳಿ ಕಬ್ಬಿಣ ಕಂಥಿಮಠದಲ್ಲಿ ಭಾನುವಾರ ಜರುಗಿದ ಸರ್ವಜ್ಞ ಶ್ರೀ ಪ್ರಶಸ್ತಿ ಆಯ್ಕೆ ಸಮಿತಿ ಸಭೆ ಉದ್ದೇಶಿಸಿ ಮಾತನಾಡಿದರು.
ಶ್ರೀಮಠದ ಕಾರ್ಯ ಶ್ಲಾಘನೀಯ: ಹಿರೇಕೆರೂರು ತಾಲೂಕು ವರಕವಿ ಸರ್ವಜ್ಞನ ಜನ್ಮಭೂಮಿ ಹಾಗೂ ಕರ್ಮಭೂಮಿಯಾಗಿದ್ದು, ರಾಜ್ಯದಲ್ಲಿಯೇ ಹಿರೇಕೆರೂರು ತಾಲೂಕನ್ನು ಸ್ಮರಣೆಗೆ ತರುವ ಕೆಲಸವನ್ನು ನಾಡು ಕಂಡ ಅಪರೂಪದ ಕವಿ ಸರ್ವಜ್ಞ ಮಾಡಿರುವುದರಿಂದ ಅವರ ಹೆಸರಿನಲ್ಲಿ ಕೊಡ ಮಾಡುವ ಪ್ರಶಸ್ತಿ ಮೂಲಕ ಆತನಿಗೆ ಗೌರವ ನೀಡುವ ಕಾರ್ಯವನ್ನು ಶ್ರೀಮಠ ಮಾಡುತ್ತಿರುವುದು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು.
ಸಾಹಿತ್ಯ ಕೃಷಿಗೈದ ಡಾ೤ ಭೋಜರಾಜ: ತಾಲೂಕಿನಲ್ಲಿ ಹಲವಾರು ವ್ಯಕ್ತಿಗಳು ಉತ್ತಮ ಸಾಹಿತ್ಯ ಸೇವೆಗೈದಿದ್ದಾರೆ. ಅವರೆಲ್ಲರಿಗೂ ಪ್ರಶಸ್ತಿ ನೀಡಲು ಸಾಧ್ಯವಿಲ್ಲ. ತಾಲೂಕಿನ ಹಿರಿಯ ಸಾಹಿತಿ ಭೋಜರಾಜ ಪಾಟೀಲ್ ಸಾಹಿತ್ಯ ಕ್ಷೇತ್ರದಲ್ಲಿ ಎಲ್ಲ ರೀತಿಯ ಸಂಶೋಧನೆ ಮಾಡಿರುವ ಹಿನ್ನಲೆಯಲ್ಲಿ ಸರ್ವಜ್ಞ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು.
ಕಬ್ಬಿಣ ಕಂಥಿಮಠದ ಮಠಾಧೀಶ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರಸಕ್ತ  ವರ್ಷದಿಂದ ಸರ್ವಜ್ಞ ಶ್ರೀ ಪ್ರಶಸ್ತಿ ಕೊಡುವ ಮೂಲಕ ನಾಡಿನ ಎಲ್ಲವನ್ನು ತಿಳಿಯುವ ಮೂಲಕ ಸರ್ವಜ್ಞ ನಾಮಾಂಕಿತನಾಗಿರುವ ಸರ್ವಜ್ಞನಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ರು. 10 ಸಾವಿರ ಮೊತ್ತದ ಪ್ರಶಸ್ತಿಯನ್ನು ಡಾ೤ ಭೋಜರಾಜ ಪಾಟೀಲರಿಗೆ ಮಠದಿಂದ ಫೆ. 4 ಹಾಗೂ 5ರಂದು ಜರುಗಲಿರುವ ಸರ್ವಜ್ಞ ಸ್ಫೂರ್ತಿ ಉತ್ಸವ -2013, ನೂತನ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದೆಂದು ತಿಳಿಸಿದರು.
ಶ್ರೀ ಮಠದ ಆಯ್ಕೆ ಸಮಿತಿ ಉಪಾಧ್ಯಕ್ಷ ನಾಗನಗೌಡರು, ಸರ್ವಜ್ಞ ಸ್ಮಾರಕ ಸಮಿತಿ ಉಪಾಧ್ಯಕ್ಷ ಲಿಂಗರಾಜ ಚೆಪ್ಪರದಳ್ಳಿ, ತಾಪಂ ಸದಸ್ಯ ಆರ್.ಎನ್. ಗಂಗೋಳ, ಜಿಪಂ ಮಾಜಿ ಸದಸ್ಯೆ ಪಿ.ಡಿ. ಬಸನಗೌಡರ, ಮಾಜಿ ತಾಪಂ ಅಧ್ಯಕ್ಷೆ ಸುಮಿತ್ರಮ್ಮ ಪಾಟೀಲ, ಹೇಮಣ್ಣ ಮುದಿರೆಡ್ಡೇರ, ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಪಿ. ಪಾಟೀಲ್, ಮಾಜಿ ಸದಸ್ಯ ಆನಂದಪ್ಪ ಹಾದಿಮನಿ, ನ್ಯಾ. ಸುರೇಶ ಬೆಣ್ಣಿ, ಬಿ.ಎಂ. ಮೆಣಸಿನಕಾಯಿ, ದಾನೇಶ ಅಂಗಡಿ, ಸಾಹಿತಿ ನಿಂಗಪ್ಪ ಚಳಗೇರಿ, ನಾಗರಾಜ ಹಿರೇಮಠ, ಮಂಜುನಾಥ ತಳವಾರ, ಚೆನ್ನವೀರ ಚಕ್ರಸಾಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.