ಹಾವೇರಿ

ಶೀಘ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ: ಬಳ್ಳಾರಿ

Published On :

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜ.23
ಕಾಂಗ್ರೆಸ್ ಹಿಂದೂಗಳ ಮತ ಪಡೆದಿಲ್ಲವೇ.. ಜವಾಬ್ದಾರಿ ಸ್ಥಾನದಲ್ಲಿದ್ದು, ಆಧಾರ ರಹಿತ ಹೇಳಿಕೆ ನೀಡುತ್ತಿರುವ ಕೇಂದ್ರ ಗೃಹ ಸಚಿವ ಶಿಂಧೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ 100 ಕೋಟಿ ಹಿಂದೂಗಳ ಕ್ಷಮೆಯಾಚಿಸುವಂತೆ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಭಯೋತ್ಪಾದನೆ ದೇಶಕ್ಕೆ ಮಾರಕ ಎನ್ನುವ ಮಾತುಗಳಲ್ಲಿ ಇನ್ಯಾರನ್ನೋ ತೃಪ್ತಿಗೊಳಿಸುವ ಹುನ್ನಾರ ನಡೆದಿದೆ.
ಕಾಂಗ್ರೆಸ್‌ನ ಚಿಂತನ ಶಿಬಿರದಲ್ಲಿ ದೇಶದ ಅಭಿವೃದ್ಧಿ ಚರ್ಚೆಯಾಗಬೇಕು. ಆದರೆ, ಹಿರಿಯ ಮುಖಂಡರೊಬ್ಬರು ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವುದು ಇಡೀ ಶಿಬಿರವನ್ನೇ ಸಂಶಯಾಸ್ಪದವಾಗಿ ನೋಡುವಂತಾಗಿದೆ. ಕೂಡಲೇ ಗೃಹ ಸಚಿವ ಶಿಂಧೆ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡುವಂತೆ ಆಗ್ರಹಿಸಿದರು.
ಮುಸ್ಲಿಮರು ಕಾಂಗ್ರೆಸ್ ಸ್ವತ್ತಲ್ಲ: ದೇಶದಲ್ಲಿರುವ ಮುಸ್ಲಿಮರೇನು ಕಾಂಗ್ರೆಸ್ ಪಕ್ಷದ ಸ್ವತ್ತಲ್ಲ. 60 ವರ್ಷಗಳಿಂದ ಮತಬ್ಯಾಂಕ್ ಮಾಡಿಕೊಳ್ಳಲು ಯತ್ನಿಸುತ್ತಿರುವ ಕಾಂಗ್ರೆಸ್‌ನ ತೆರೆಮರೆಯ ಹುನ್ನಾರಗಳ ಬಗ್ಗೆ ಮುಸ್ಲಿಂ ಸಮುದಾಯಕ್ಕೆ ಅರಿವಾಗಿದ್ದು, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿನ ಮುಸ್ಲಿಂ ಸಮುದಾಯ ಸುಭೀಕ್ಷವಾಗಿದ್ದಾರೆ.
ಈ ಕುರಿತು ಮುಸ್ಲಿಂರಲ್ಲಿ ತಪ್ಪಿನ ಅರಿವಾಗಿದ್ದು, ಬರುವ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.
ಭಯೋತ್ಪಾದನೆ ವಿಶ್ವಕ್ಕೆ ಮಾರಕ: ಎಪಿಎಂಸಿ ಸದಸ್ಯ ಶಂಕರಗೌಡ ಪಾಟೀಲ ಮಾತನಾಡಿ, ಭಯೋತ್ಪಾದನೆ ಇಡೀ ವಿಶ್ವಕ್ಕೆ ಮಾರಕ. ಯಾವುದೇ ಭಯೋತ್ಪಾದನೆ ಘಟನೆಗಳಿರಲಿ ಎಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕು. ದೇಶ ಹಾಗೂ ಸಮುದಾಯಕ್ಕೆ ಸೀಮಿತಗೊಳಿಸುವ ಅಗತ್ಯವಿಲ್ಲ. ಹಿಂದೂ ಭಯೋತ್ಪಾದನೆ ಸಮರ್ಥಿಸಿಕೊಳ್ಳುವುದಾದರೆ ಉಗ್ರ ಕಸಬ್ ಹಾಗೂ ಅಫ್ಜಲ್‌ಗುರು ಕಾಂಗ್ರೆಸ್‌ಗೆ ಆದರ್ಶಪ್ರಾಯವಾಗಬಲ್ಲರೇ.. ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ರಾಮಣ್ಣ ಉಕ್ಕುಂದ, ಎಪಿಎಂಸಿ ನಿರ್ದೇಶಕ ಮೌಲಾಸಾಬ್ ಶಿಡೇನೂರ, ತಾಪಂ ಮಾಜಿ ಅಧ್ಯಕ್ಷ ಜಯಣ್ಣ ಮಲ್ಲಿಗಾರ, ಪುರಸಭೆ ಸದಸ್ಯರಾದ ಶಂಭಣ್ಣ ಬಿದರಿ, ಹೊನ್ನೂರಪ್ಪ ಕಾಡಸಾಲಿ, ವಿಷ್ಣು ಬೆನ್ನೂರ, ವಿರೇಂದ್ರ ಶೆಟ್ಟರ್, ಸಂತೋಷ ಮೂಲಿಮನಿ, ವೀರಭದ್ರಗೌಡ ಹೊಂಬರಡಿ ಶಂಕ್ರಪ್ಪ ಹಾವನೂರ, ಶಿವಪುತ್ರಪ್ಪ ಅಗಡಿ, ಬಿಜೆಪಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು, ಇತರ ಗಣ್ಯರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.