ಸಾರ್ವಜನಿಕರ ಸಂಚಾರಕ್ಕೆ ಸೂಕ್ತ ಸಾರಿಗೆ
ಹಿರೇಕೆರೂರು: ತಾಲೂಕಿನ ಕಡೂರು ಗ್ರಾಮದಿಂದ ಪಟ್ಟಣದ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡಲು ದಿನನಿತ್ಯ ಬರಲು ಹಾಗೂ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರಿಗೆ ಪ್ರಯಾಣಕ್ಕೆ ಅನುಕೂಲವಾಗುವಂತೆ ಹಿರೇಕೆರೂರು ಸಾರಿಗೆ ಸಂಸ್ಥೆಯಿಂದ ಕಡೂರ ಗ್ರಾಮದವರೆಗೆ ಬಸ್ ಆರಂಭಿಸಲಾಗಿದೆ. ಕಡೂರ ಸೇರಿದಂತೆ ಸುತ್ತಲಿನ ಗ್ರಾಮಗಳ ಜನತೆ ಸದುಪಯೋಗಪಡಿಸಿಕೊಳ್ಳಬೇಕೆಂದು ಶಾಸಕ ಯು.ಬಿ. ಬಣಕಾರ ಕರೆ ನೀಡಿದರು.
ಪಟ್ಟಣದ ವಾಯವ್ಯ ಸಾರಿಗೆ ಬಸ್ ನಿಲ್ದಾಣದಲ್ಲಿ ನೂತನವಾಗಿ ಆರಂಭಿಸಿ ಬಸ್ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ಉತ್ತಮ ವಿದ್ಯಾಸಂಸ್ಥೆಗಳು ತಾಲೂಕು ಕೇಂದ್ರದಲ್ಲಿ ಉತ್ತಮವಾಗಿ ಶಿಕ್ಷಣ ನೀಡುತ್ತಿರುವುದರಿಂದ ಹಾಗೂ ವಿಜ್ಞಾನ ತರಗತಿಗಳು ಪಟ್ಟಣದ ಕಾಲೇಜುಗಳಲ್ಲಿರುವುದರಿಂದ ಬಹುತೇಕ ವಿದ್ಯಾರ್ಥಿಗಳು ಪಟ್ಟಣದ ಕಾಲೇಜುಗಳಿಗೆ ಬರುತ್ತಾರೆ. ಈ ಕಾರಣದಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಬೇಡಿಕೆ ಮೆರೆಗೆ ಈ ನೂತನ ಬಸ್ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಉತ್ತಮ ಶೈಕ್ಷಣ ಪಡೆದು ಸದೃಢರಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭ ಹಿರೇಕೆರೂರು ಘಟಕ ವ್ಯವಸ್ಥಾಪಕ ಎಂ. ನಂಜುಂಡಸ್ವಾಮಿ, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರು ಅಣ್ಣಪ್ಪನವರ, ಪಟ್ಟಣ ಪಂಚಾಯಿತಿ ಸದಸ್ಯ ಮಹೇಂದ್ರ ಬಡಳ್ಳಿ, ನ್ಯಾಯವಾದಿ ಸಂಜೀವ ಕಬ್ಬಿಣಕಂಥಿಮಠ, ಮುಖಂಡರಾದ ಬಿ.ಎಸ್. ಕಾರಗಿ, ಸಾರಿಗೆ ಘಟಕದ ನಿರೀಕ್ಷಕರಾದ ಗಣೇಶ ವೆರ್ಣೇಕರ, ಎಂ.ಎಚ್. ತಳವಾರ, ಕೆ.ವೈ. ಒಂಟಕರ, ಜಿ.ಎಂ. ಬೆಟಗೇರಿ, ಎಂ.ಪಿ. ನಾಯಕ, ಅಲ್ಲಾಭಕ್ಷ ಎಚ್, ಎ.ಎ. ಕುಪ್ಪಲೂರ, ವಿ.ವಿ. ಬೆಲ್ಲಾಳು, ಎಸ್.ವೈ. ಹೊರಕೇರಿ, ಸತೀಶ ಬಿಸೆಂಬ್ಲಿ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

