ಹಾವೇರಿ

ಹಾವೇರಿ: ಶೇ. 90ರಷ್ಟು ಬಿತ್ತನೆ ಪೂರ್ಣ

Published On :

ಹಾವೇರಿ: ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಈವರೆಗೆ ಶೇ. 90ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಕರಿಯಲ್ಲಪ್ಪ ಕೊರಚರ ತಿಳಿಸಿದರು.
ತಾಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾಹಿತಿ ನೀಡಿದರು.
ಬೆಳವಗಿ ಗ್ರಾಮದಲ್ಲಿ ಮಳೆ ಕೊರತೆಯಿಂದ ಶೇ. 10ರಷ್ಟು ಮಾತ್ರ ಬಿತ್ತನೆ ಕಾರ್ಯವಾಗಬೇಕಾಗಿದ್ದು, ತಾಲೂಕಿನಲ್ಲಿಯ ಗೋವಿನ ಜೋಳ, ಹತ್ತಿ, ಶೇಂಗಾ, ಹೆಸರು, ಅಲಸಂದಿ ಬೆಳೆಗಳು ಈಗಾಗಲೇ 1 ತಿಂಗಳ ಬೆಳೆಗಳಾಗಿವೆ ಎಂದು ವಿವರಿಸಿದರು.
ಸಮರ್ಪಕ ಗೊಬ್ಬರ: ಬಿತ್ತನೆ ಹಂಗಾಮು ಮುಕ್ತಾಯದ ಹಂತಕ್ಕೆ ಬಂದಿದೆ. ಯಾವುದೇ ಭಾಗದಲ್ಲಿಯೂ ಗೊಬ್ಬರದ ಕೊರತೆ ಕಂಡು ಬಂದಿಲ್ಲ. ಡಿಎಪಿ ಗೊಬ್ಬರದ ಬೇಡಿಕೆ ಕಡಿಮೆಯಾಗಿದೆ. 4,700 ಟನ್ ಡಿಎಪಿ ಗೊಬ್ಬರ ಸಂಗ್ರಹವಿದ್ದು, ಬಹುತೇಕ ಬಿತ್ತನೆ ಕಾರ್ಯ ಪೂರ್ಣಗೊಂಡಿರುವುದರಿಂದ ರೈತರು ಡಿಎಪಿ ಸೇರಿದಂತೆ ಕಾಂಪ್ಲೆಕ್ಸ್ ಗೊಬ್ಬರವನ್ನು ಕೇಳುತ್ತಿಲ್ಲ ಎಂದರು.
ಬೇಡಿಕೆಗಣುಗುಣವಾಗಿ ಗೊಬ್ಬರ ವಿತರಣೆ: ಅಧ್ಯಕ್ಷತೆ ವಹಿಸಿದ್ದ ಉಪಾಧ್ಯಕ್ಷ ಬಸಪ್ಪ ಕಳಸೂರು, ರೈತರು ಹೊಲಗಳಲ್ಲಿ ಕಳೆ ತೆಗೆಯುವ ಎಡೆ ಹೊಡೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಬೆಳೆಗಳಿಗೆ ಯೂರಿಯಾ ಹಾಕಲು ಮುಂದಾಗುತ್ತಾರೆ. ಯೂರಿಯಾ ಗೊಬ್ಬರದ ಅವಶ್ಯಕತೆ ಬೀಳುತ್ತದೆ. ರೈತರ ಬೇಡಿಕೆಗನುಗುಣವಾಗಿ ಯುರಿಯಾ ಪೂರೈಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಹೆಚ್ಚುವರಿ ಗೊಬ್ಬರಕ್ಕೆ ಮನವಿ:  ಇದಕ್ಕೆ ಉತ್ತರಿಸಿದ ಕೃಷಿ ಅಧಿಕಾರಿ, ತಾಲೂಕಿನಲ್ಲಿ 5000 ಟನ್ ಯೂರಿಯಾ ಸಂಗ್ರಹವಿದೆ. ರೈತರ ಬೇಡಿಕೆಗನುಗುಣವಾಗಿ ಸೊಸೈಟಿಗಳ ಮೂಲಕ ಯುರಿಯಾ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚುವರಿ ಗೊಬ್ಬರಕ್ಕೂ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಬೆಳೆವಿಮೆ: ಹಾವೇರಿ ತಾಲೂಕಿಗೆ ಕಳೆದ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆ ರು. 101 ಲಕ್ಷ ಬಿಡುಗಡೆಯಾಗಿದ್ದು, ರಾಷ್ಟ್ರೀಯ ಕೃಷಿ ವಿಮೆಯಲ್ಲಿ ರು. 18 ಕೋಟಿಗೂ ಹೆಚ್ಚು ಹಣ ಬಿಡುಗಡೆಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ಸಭೆಯಲ್ಲಿ ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.