ಕೃಷಿಕರೇ ರಾಜ್ಯ ಆಳುವಂತಾಗಲಿ: ಶ್ರೀ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜು. 12
ಕೃಷಿಕರೆ ಮುಂದಿನ ಸಾರ್ವಭೌಮ ವ್ಯಕ್ತಿಯಾಗಿ ಅವರೆ ರಾಜ್ಯವನ್ನು ಆಳುವಂತಾಗಬೇಕು ಎಂದು ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮಿಗಳು ಹೇಳಿದರು.
ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಜರುಗಿದ ನೇಗಿಲಯೋಗಿ ಅಭಿಮಾನಿಗಳ ಸಂಘದ ರೈತನ ರಂಟೆಗೆ ಪೂಜೆ ಸಲ್ಲಿಸಿ ಉದ್ಘಾಟಿಸಿ ಮಾತನಾಡಿದರು.
ಬಸವಜಯಮೃತ್ಯುಂಜಯ ಸ್ವಾಮಿಗಳು ರೈತರು ಇಂದು ಸ್ವಾಭಿಮಾನದಿಂದ ಕೃಷಿಯನ್ನು ಮಾಡುವ ಮೂಲಕ ಎಲ್ಲ ರಂಗಗಳಲ್ಲಿಯೂ ರೈತರು ಮುಂದೆಬರಬೇಕಾಗಿದೆ.
ಯುದ್ಧ ಮಾಡುವ ಸ್ಥಿತಿ: ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಿದಾಗ ಭೂತಾಯಿಯು ಎಂದಿಗೂ ನಮ್ಮನ್ನು ಕೈಬಿಡುವುದಿಲ್ಲ. ಆಹಾರದ ಕೊರತೆಯು ಜಾಸ್ತಿಯಾಗುತ್ತದೆ. ಬರುವ ದಿನದಲ್ಲಿ ಭೂಮಿ ಮತ್ತು ಅನ್ನಕ್ಕಾಗಿ ಯುದ್ಧ ಮಾಡುವಂತಾದ ಪರಿಸ್ಥಿತಿ ಬರಬಹುದು ಎಂದರು.
ನೇಗಿಲಯೋಗಿ ಅಭಿಮಾನಿಗಳ ಸಂಘದ ಸಂಸ್ಥಪಕ ರಾಜೇಶ್ವರಿ ಪಾಟೀಲ, ವೃತ್ತಿಯಿಂದ ಕೃಷಿಕರು ರೈತರ ಹಾಗೂ ಕೃಷಿಕಾರ್ಮಿಕರ ಸಂಕಷ್ಟಗಳ ಕುರಿತು ಹೆಚ್ಚಿನ ಪರಿಣಿತಿಯನ್ನು ಹೊಂದಿದವರಾಗಿದ್ದಾರೆ. ರೈತರ ಸಂಕಷ್ಟಗಳಿಗೆ, ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಸಂಘದ ಸದಸ್ಯತ್ವವನ್ನು ಪಡೆದು ಸಂಘದ ಅಭಿವೃದ್ಧಿಗೆ ಮುಂದಾಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ನೇಗಿಯೋಗಿ ಅಭಿಮಾನಿಗಳ ಸಂಘದ ಸಂಸ್ಥಾಪಕ ರಾಜೇಶ್ವರಿ ಪಾಟೀಲ ಮಾತನಾಡಿ, ರೈತರು ತಂತ್ರಜ್ಞಾನ ಬಳಸಿ ಕೃಷಿಯನ್ನು ಮಾಡುವ ಪ್ರಗತಿಪರ ರೈತರಿಂದ ತರಬೇತಿ ನೀಡುವದು, ರೈತರ ಸಮಸ್ಯೆಗಳ ಕುರಿತು ಪರಿಹಾರದ ವ್ಯವಸ್ಥೆ, ಕೃಷಿಕರ, ಕೃಷಿ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಹಾಗೂ ಹಲವಾರು ಯೋಜನೆಗಳ ಕುರಿತು ತಿಳಿವಳಿಕೆ ನೀಡವದರ ಜೊತೆ ಸರ್ಕಾರದ ಸೌಲಭ್ಯಗಳನ್ನು ಪಡೆಯುವ, ಸರ್ಕಾರವು ಕೊಡಮಾಡಿದ ಕೃಷಿಯಲ್ಲಿ ರೈತಪರ ಯೋಜನೆಗಳನ್ನು ರೂಪಿಸುವುದು.
ರೈತ ಸಂಘ: ಇಂದು ಮಹಿಳೆಯರೆ ಹೆಚ್ಚಿನ ಪ್ರಮಾಣದಲ್ಲಿ ಸೇರಿದ್ದು ನೂರಾರು ರೈತರು ಸಂಘದ ಸದಸ್ಯತ್ವ ಪಡೆದಿದ್ದಾರೆ. ಬರುವ ದಿನಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ ಒಂದು ರೈತರು ಸಂಘದ ಸದಸ್ಯತ್ವ ಪಡೆಯುತ್ತಾರೆ. ಈ ಸಂಘವು ಕಳೆದ 6 ತಿಂಗಳು ಹಿಂದೆಯೇ ಸ್ಥಾಪನೆಯಾಗಬೇಕಾಗಿತ್ತು. ಆದರೆ, ಕೆಲ ಕಾರಣಾಂತರದಿಂದ ತಡವಾಗಿದೆ ಎಂದರು. ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎನ್.ಡಿ. ಮರಿಗೌಡ್ರ, ಶಿವಪುತ್ರಪ್ಪ ಸಾಂಬ್ರಾಯಿ ಮಾತನಾಡಿದರು. ಕಾಶೀನಾಥ ರಾಯ್ಕರ್, ಶಂಕರಗೌಡ್ರ ಪಾಟೀಲ, ರಾಜು ಮಾಮ್ಲೆದೇಸಾಯಿ, ಕಲ್ಲಪ್ಪ ಕರಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

