ಅವ್ಯವಸ್ಥೆ ಆಗರ ಬಂಕಾಪುರ ಶಾಲೆ
ಶಿಗ್ಗಾಂವಿ: ಸ್ವಚ್ಛತೆ ಇಲ್ಲದ ಮೂತ್ರಾಲಯ, ಉಪಯೋಗಕ್ಕೆ ಬಾರದ ಶೌಚಾಲಯ, ಗೋಡೆ ಉದ್ದಕ್ಕೂ ಬೆಳೆದು ನಿಂತ ಕಂಟಿಗಳು, ಸೊಳ್ಳೆಗಳ ಕಾಟ... ಇದು ತಾಲೂಕಿನ ಬಂಕಾಪುರದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ಪರಿಸ್ಥಿತಿ.
ಈ ಶಾಲೆಯಲ್ಲಿ ಗಮನ ಸೆಳೆಯುವ ಗ್ರಂಥಾಲಯದ ವ್ಯವಸ್ಥೆ ಇದೆ. ಗ್ರಂಥಾಲಯಕ್ಕೆ ಬಂದು ಪುಸ್ತಕ ಓದುವ ವಿದ್ಯಾರ್ಥಿಗೆ, ಆಟಕ್ಕಿಂತ ಪುಸ್ತಕದತ್ತ ಗಮನ ಸೆಳೆಯುವಂತಿದೆ. ಆದರೆ, ಗ್ರಂಥಾಲಯದ ಮೇಲ್ಛಾವಣಿ ಮಳೆ ಬಂದರೆ ಸೋರುತ್ತದೆ. ಪುಸ್ತಕ ಓದುವ ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಕಲ್ಪಿಸಿದ ಶಿಕ್ಷಕರ ಸಾಧನೆ ಸ್ವಾಗತಾರ್ಹ. ಇಲ್ಲಿ ಪುಸ್ತಕ ಪಡೆದುಕೊಳ್ಳುವ ವಿದ್ಯಾರ್ಥಿಗಳು, ಪಡೆದುಕೊಂಡ ಪುಸ್ತಕದ ಹೆಸರು ದಾಖಲಿಸುವ ರಜಿಸ್ಟ್ರರ್ ಚಾಲ್ತಿಯಲ್ಲಿದೆ. ಈ ವ್ಯವಸ್ಥೆ ವಿದ್ಯಾರ್ಥಿ ಜ್ಞಾನ ಭಂಡಾರ ಹೆಚ್ಚಿಸಲು ಕೈಗನ್ನಡಿಯಾಗಿದೆ. ಕೊಠಡಿ ಸುಧಾರಣೆಗೊಳ್ಳಬೇಕಷ್ಟೇ.
ಸೊಳ್ಳೆಗಳ ಕಾಟ: ಶಾಲೆಯಲ್ಲಿ ಪ್ರತ್ಯೇಕ ಪ್ರಯೋಗಾಲಯ ಇದ್ದರೂ, ಕೊಠಡಿ ಮೇಲ್ಛಾವಣಿ ಬಿರುಕು ಬಿಟ್ಟಿದೆ. ಮಳೆ ಬಂದರೆ, ಇಲ್ಲಿರುವ ಸಾಮಗ್ರಿಗಳು ನೆನೆಯತ್ತಿವೆ. ಕ್ಲಾಸ್ ನಡೆಯವ ಕೊಠಡಿ ಗೋಡೆ ಉದ್ದಕ್ಕೂ ಕಸದ ಗಿಡ-ಕಂಟೆ ಹಬ್ಬಿಕೊಂಡಿವೆ. ಮಳೆಗಾಲದ ದಿನದಲ್ಲಿ ಹರಿದಾಡುವ ಸೊಳ್ಳೆಗಳಿಂದ ವಿದ್ಯಾರ್ಥಿ ಅಭ್ಯಾಸಕ್ಕೆ ತೊಂದರೆ. ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಗೆ ಶಿಕ್ಷಕರು ತಲೆ ಕೆಡಿಸಿಕೊಂಡಿಲ್ಲ. ಸೊಳ್ಳೆ ಕಡಿಸಿಕೊಳ್ಳುತ್ತ ವಿದ್ಯಾರ್ಥಿಗಳು ಕ್ಲಾಸ್‌ನಲ್ಲಿ ಕಾಲ ಕಳೆಯತ್ತಾರೆ. ಇಲ್ಲಿ ಕ್ಲಾಸ್ ನಡೆಯವ ಕೊಠಡಿಗೆ ಅಂಟಿಕೊಂಡಿರುವ ಮೂತ್ರಾಲಯವೂ ಅಸ್ವಚ್ಛತೆ. ಇದ್ದ ಶೌಚಾಲಯದ ಬಾಗಿಲು ಕಿತ್ತಿದೆ. ಇದನ್ನು ದುರಸ್ತಿಗೊಳಿಸುವ ಗೋಜಿಗೆ ಶಾಲೆ ಸುಧಾರಣಾ ಸಮಿತಿ ತಲೆ ಕೆಡಿಸಿಕೊಂಡಿಲ್ಲ. ಶಾಲೆ ಸಮಯದಲ್ಲಿ ಮಲ ವಿಸರ್ಜನೆಗೆ ವಿದ್ಯಾರ್ಥಿಗಳು ಕ್ಲಾಸ್‌ಗೆ ಕೈಕೊಟ್ಟು ಮನೆಗೆ ಬರುವಂತ ಸ್ಥಿತಿ.
ನಿರ್ಲಕ್ಷ್ಯ: ಶಿಕ್ಷಣಾಧಿಕಾರಿಗಳು ಶಾಲೆಯತ್ತ ಹೆಚ್ಚು ಗಮನಿಸಿಲ್ಲ. ಸ್ಥಳೀಯ ಸರ್ಕಾರ ಪುರಸಭೆ ಪಕ್ಕದಲ್ಲಿದ್ದರೂ, ಶಾಲೆ ಅಭಿವೃದ್ಧಿ ಮತ್ತು ಪರಿಸರ ಸ್ವಚ್ಛತೆಗೆ ಮುಂದಾಗುತ್ತಿಲ್ಲ. ಇನ್ನಾದರೂ ಸ್ವಚ್ಛತೆಗೆ ಮುಂದಾಗಲಿ ಎನ್ನುವುದು ಶಿಕ್ಷಣ ಪ್ರೇಮಿಗಳದ್ದಾಗಿದೆ. ಸುಮಾರು ಎರಡು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಆಟದ ಮೈದಾನವಿಲ್ಲ. ಇದ್ದ ಆಟದ ಮೈದಾನವೂ ವ್ಯಾಜ್ಯದಲ್ಲಿರುವುದರಿಂದ ವಿದ್ಯಾರ್ಥಿಗಳಿಗೆ ಪಾಠವೊಂದೆ, ಆಟವಿಲ್ಲ. ಜನಪ್ರತಿನಿಧಿಗಳ ಇಚ್ಚಾಶಕ್ತಿ ಮತ್ತು ಅಧಿಕಾರಿ, ಶಿಕ್ಷಕರ ಬೇಜವಾಬ್ದಾರಿಯಿಂದ ಅವ್ಯವಸ್ಥೆಯ ಆಗರವಾಗುತ್ತಿರುವ ಶಾಲೆಯ ಅಭಿವೃದ್ಧಿಗೆ ಕ್ರಮಕೈಗೊಂಡಲ್ಲಿ ಮಾತ್ರ ಶೈಕ್ಷಣಿಕ ಪ್ರಗತಿ ಸಾಧಿಸಲು ಸಾಧ್ಯ.
ಇನ್ನು ಬೇಕಾಗಿರುವ ಕೆಲ ಸೌಲಭ್ಯ ಪಡೆದುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಶೌಚಾಲಯ-ಮೂತ್ರಾಲಯ ಸ್ವಚ್ಛತೆಗೆ ಕ್ರಮಕೈಗೊಳ್ಳುತ್ತೇವೆ. ಆಟದ ಮೈದಾನ ವ್ಯಾಜ್ಯದಲ್ಲಿದೆ. ಅಧಿಕಾರಿಗಳ ಜತೆ ಮಾತನಾಡಿ, ತಾತ್ಕಾಲಿಕ ಪರಿಹಾರ ಕಂಡುಕೊಳ್ಳುತ್ತೇವೆ.
- ಮಾರುತಿ ಕುರವತ್ತಿ,
ಎಸ್‌ಡಿಎಂಸಿ ಅಧ್ಯಕ್ಷ.
ಬಂಕಾಪುರ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳಿಗೆ ಆಟದ ಮೈದಾನ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಸ್ವಚ್ಛತೆಗೂ ಆದ್ಯತೆ ನೀಡುತ್ತೇವೆ. ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳುತ್ತೇವೆ.
- ಹೊನ್ನಪ್ಪ ಹೂಗಾರ,
ಪುರಸಭೆ ಸದಸ್ಯ, ಬಂಕಾಪುರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

