ಸಂಪರ್ಕ ರಸ್ತೆ ದುರಸ್ತಿಗೆ ಆಗ್ರಹ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಜು. 19
ತಾಲೂಕಿನ ಕಾಲ್ವಿಹಳ್ಳಿ ಗ್ರಾಮದ ಸಂಪರ್ಕ ರಸ್ತೆಯನ್ನು ದುರಸ್ತಿಗೊಳಿಸಿ ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಉಪ ವಿಭಾಗದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭ ರಾಜಶೇಖರ್ ಆರಿಕಟ್ಟಿ ಮಾತನಾಡಿ, ಕಳೆದ 60 ವರ್ಷಗಳಿಂದಲೂ ಗ್ರಾಮಕ್ಕೆ ಸಂಪರ್ಕ ನೀಡುವ ಮುಖ್ಯರಸ್ತೆ ದುರಸ್ತಿ ಕಾಣದೆ ಕೆಸರು ಗದ್ದೆಯಂತಾಗಿದೆ. ಹಿರೇಕೆರೂರು ಪಟ್ಟಣಕ್ಕೆ ಹೋಗಬೇಕಾದರೆ ಹರಸಾಹಸ ಪಡುವಂತಾಗಿದೆ. ಕಳೆದ ಹಲವಾರು ವರ್ಷಗಳಿಂದ ಆಡಳಿತ ನಡೆಸಿದ ಜನಪ್ರತಿನಿಧಿಗಳು ನಮ್ಮೂರ ರಸ್ತೆ ದುರಸ್ತಿಗೆ ನಿರ್ಲಕ್ಷ್ಯ ವಹಿಸಲಾಗಿದೆ.
ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಸಂಪರ್ಕ ರಸ್ತೆ ಕಾಲುವೆಯಂತಾಗಿದ್ದು, ಮಳೆಗಾಲದಲ್ಲಿ ನೀರು ಹಾಗೂ ಕೆಸರಿನಲ್ಲಿ ನಡೆದಾಡುವಂತಾಗಿದೆ. ತಕ್ಷಣ ರಸ್ತೆ ದುರಸ್ತಿಗೊಳಿಸಬೇಕು ಎಂದು ಪಟ್ಟು ಹಿಡಿದರು. ಈ ಕುರಿತ ಮನವಿಯನ್ನು ಕಾರ್ಯನಿರ್ವಾಹಕರಿಗೆ ಸಲ್ಲಿಸಿದರು.
ಭರವಸೆ: ಪ್ರತಿಭಟನೆ ವಾಪಸ್
ಈ ಸಂದರ್ಭ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಟಿ. ಸುಭಾಸಚಂದ್ರ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಶನಿವಾರ ಗ್ರಾಮಕ್ಕೆ ಬಂದು ಪರಿಶೀಲಿಸಿ ತಾತ್ಕಲಿಕವಾಗಿ ಕಡಿ ಹಾಗೂ ಉಸುಕು ಹಾಕಿ ಸುಲಭ ಸಂಚಾರಕ್ಕೆ ದುರಸ್ತಿ ಮಾಡಿಕೊಡಲಾಗುವುದು, ಬೇಸಿಗೆಯಲ್ಲಿ ರಸ್ತೆ ಕಾಮಗಾರಿಯ ಸಂಪೂರ್ಣ ಯೋಜನೆ ತಯಾರಿಸಿ ಮಂಜೂರಾತಿ ಪಡೆಯಲಾಗಿದೆ. ರಸ್ತೆ ಇಕ್ಕೆಲಗಳಲ್ಲಿ ಪಕ್ಕಾ ಗಟಾರ್, ಕಡಿಕರಣ ಮತ್ತು ಡಾಂಬರೀಕರಣ ಮಾಡಿಕೊಡುವ ಮೂಲಕ ಉತ್ತಮ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಭರವಸೆ ಹಿನ್ನೆಲೆಯಲ್ಲಿ ಸಾರ್ವಜನಿಕರು, ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆಯನ್ನು ವಾಪಸ್ ಪಡೆದರು.
ಪ್ರತಿಭಟನೆಯಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಬಸನಗೌಡ ಗಂಗಪ್ಪನವರ, ಕಾರ್ಯಾಧ್ಯಕ್ಷ ಸೋಮಶೇಖರಪ್ಪ ಚಪ್ಪರದಳ್ಳಿ, ಗ್ರಾಮಸ್ಥರಾದ ಕೊಟ್ರೇಶ ಅಂಗಡಿ, ಶಿವಪುತ್ರಪ್ಪ ಆರಿಕಟ್ಟಿ ನಂದಪ್ಪ ಜೋಗಿಹಳ್ಳಿ, ರೇವಣಪ್ಪ ಜೋಗಿಹಳ್ಳಿ, ಶಂಭುಲಿಂಗಪ್ಪ ತಡಸನಹಳ್ಳಿ, ನಾಗಪ್ಪ ದೊಡ್ಡಣ್ಣನವರ, ಶಂಕ್ರಪ್ಪ ಕೊಪ್ಪದ, ಬಸನಗೌಡ ಕೊಪ್ಪದ, ಶಿವಪ್ಪ ಜೋಗಿಹಳ್ಳಿ, ಹನುಮಗೌಡ ಜೋಗಿಹಳ್ಳಿ, ಹೇಮಪ್ಪ ಮಾದಕ್ಕಳವರ, ಈರಪ್ಪ ಮುದಳ್ಳವರ, ಸುಭಾಸ ಆರಿಕಟ್ಟಿ, ಸಂತೋಷ ಜಡಿಯಣ್ಣನವರ, ರಾಮಪ್ಪ ಆರಿಕಟ್ಟಿ, ಚಂದ್ರು ಪೂಜಾರ, ಕುಮಾರ ತಡಸನಹಳ್ಳಿ, ಹಾಲಪ್ಪ ಸುಣ್ಣದಕೊಪ್ಪ, ಲೋಕಪ್ಪ ಆರಿಕಟ್ಟಿ, ರಾಜು ತಡಸನಹಳ್ಳಿ, ಶಿವಲಿಂಗಯ್ಯ ಮಠದ, ಮಲ್ಲಿಕಾರ್ಜುನ ಪೂಜಾರ, ಶಿವಪ್ಪ ಜೋಗಿಹಳ್ಳಿ, ರಾಜಪ್ಪ ವಡ್ಡಿನಕಟ್ಟಿ ಇನ್ನಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

