ಹಾವೇರಿ

ಶಿಗ್ಗಾಂವಿ ತಾಲೂಕು ಪ್ರಗತಿಗೆ ಆದ್ಯತೆ ನೀಡಿ

Published On :

ಶಿಗ್ಗಾಂವಿ: ಶಿಗ್ಗಾಂವಿ ಹಿಂದುಳಿದ ತಾಲೂಕಾಗಿದ್ದು, ತಾಲೂಕು ಕೇಂದ್ರಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕೆಂದು ಶಾಸಕ ಬಸವರಾಜ ಬೊಮ್ಮಾಯಿ ಅವರಿಗೆ ಭಾರತ ವಿದ್ಯಾರ್ಥಿ ಫೆಡರೇಷನ್ ಶಿಗ್ಗಾಂವಿ ತಾಲೂಕು ಸಮಿತಿ ಮನವಿ ಸಲ್ಲಿಸಿ ಆಗ್ರಹಿಸಿತು. ಶಿಗ್ಗಾಂವಿ ತಾಲೂಕಿನಲ್ಲಿ 200ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿದ್ದು, ಸರ್ಕಾರಿ, ಖಾಸಗಿ, ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜು, ವೃತ್ತಿಪರ ಕೋರ್ಸ್ಗಳ ಕಾಲೇಜು ಸೇರಿ) ಪ್ರತಿನಿತ್ಯ 5,000 ಸಾವಿರಕ್ಕೂ ಹೆಚ್ಚಿಗೆ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆಂದು ತಾಲೂಕು ಕೇಂದ್ರಕ್ಕೆ ಬರುತ್ತಿದ್ದಾರೆ. ಡಾ೤ ನಂಜುಂಡಪ್ಪ ವರದಿಯಂತೆ ಶೈಕ್ಷಣಿಕವಾಗಿ ವಿದ್ಯಾರ್ಥಿಗಳು ಪ್ರತಿನಿತ್ಯ ಪರಿತಪಿಸುವಂತಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಇಲ್ಲದೆ, ಹಾಸ್ಟೆಲ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ನರಳುವಂತಾಗಿದೆ. ತಕ್ಷಣ ಹೆಚ್ಚಿನ ಅನೂಕುಲತೆ ಮಾಡಬೇಕು, ನಂಜುಂಡಪ್ಪ ವರದಿಯನ್ನು ವಿವರಿಸಿದಂತೆ ಹಿಂದೂಳಿದ ತಾಲೂಕಾದ ಶಿಗ್ಗಾಂವಿ ನಗರಕ್ಕೆ ಅಗತ್ಯ ಸೌಲಭ್ಯಗಳನ್ನು ಇನ್ನು 15 ದಿನದೊಳಗಾಗಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳ ಹಿತ ಕಾಪಾಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ ಶಿಗ್ಗಾಂವಿ ತಾಲೂಕು ಸಮಿತಿ ಮನವಿಯಲ್ಲಿ ತಿಳಿಸಲಾಗಿದೆ. ಶಿಗ್ಗಾಂವಿ ತಾಲೂಕು ಕೇಂದ್ರಕ್ಕೆ ಪಿಯುಸಿ ಮತ್ತು ಡಿಗ್ರಿ ಕಾಲೇಜು ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಮತ್ತು ಬಿಸಿಎಂ ಇಲಾಖೆಯ ಪ್ರತ್ಯೇಕ ಬಾಲಕರ-ಬಾಲಕಿಯರ ಕಾಲೇಜು ಹಾಸ್ಟೆಲ್ ಆರಂಭಿಸಬೇಕು. ತಾಲೂಕಿನಲ್ಲಿ ವೃತ್ತಿಪರ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕಾಲೇಜು ಹಾಸ್ಟೆಲ್ ಆರಂಭಿಸಬೇಕು. ತಾಲೂಕಿನಲ್ಲಿರುವ ಬಿಸಿಎಂ ಇಲಾಖೆ ಹಾಸ್ಟೆಲ್ಗಳಿಗೆ ಸ್ವಂತ ಕಟ್ಟಡ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ಬಾಲಕರ ಕಾಲೇಜು ಹಾಸ್ಟೆಲ್ಗೆ ಸ್ವಂತ ಕಟ್ಟಡ, ಇತರೆ ಮೂಲ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಲಾಯಿತು. ಸರ್ಕಾರಿ ಪ್ರೌಢಶಾಲೆಗೆ ಈಗಿರುವ ಕಟ್ಟಡ ಅವೈಜ್ಞಾನಿಕ ರೀತಿಯಿಂದ ಕೂಡಿದ್ದು, ಹೆಚ್ಚುವರಿ ಕೂಠಡಿ ಸೇರಿದಂತೆ ಇತರೆ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ನಗರದ ಎಸ್ಆರ್ಜೆವಿ ಕಾಲೇಜಿಗೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕೆಎಸ್ಆರ್ಟಿಸಿ ಬಸ್ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸುವ್ಯವಸ್ಥಿತ ರಸ್ತೆ ಮತ್ತು ಆಟದ ಮೈದಾನ ಒದಗಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಸುಭಾಸ ಮಾದರ, ಮಲ್ಲೇಶ ಗೋಟನವರ, ಜ್ಯೋತಿ ದೊಡ್ಮನಿ, ಫಕ್ಕಿರೇಶ ವಡ್ಡರ, ವಿದ್ಯಾರ್ಥಿ ಸಂಘಟನೆಯ ಪಂಪಾನಂದ ವೈ, ಸುಭಾನ ಸೈಯ್ಯದ, ಹನುಮಂತ ದುರ್ಗದ, ಎಸ್ಎಫ್ಐ ಮುಖಂಡರು ಉಪಸ್ಥಿತರಿದ್ದರು.

ಸಮಾಜ ಸೇವೆಯಲ್ಲಿ ತೊಡಗಿ
ಹಾವೇರಿ: ವಿದ್ಯಾರ್ಥಿಗಳು ಎನ್ಎಸ್ಎಸ್ ಘಟಕದೊಂದಿಗೆ ಗುರುತಿಸಿಕೊಳ್ಳುವ ಮೂಲಕ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕುಣಿಮೆಳ್ಳಿಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜ್ನ ಪ್ರಾಚಾರ್ಯ ಕೆ.ಎಸ್. ಕಮಡೊಳ್ಳಿ ಹೇಳಿದರು. ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ 2013-14ನೇ ಸಾಲಿನ ದೈನಂದಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎನ್ಎಸ್ಎಸ್ ಘಟಕ ಹಮ್ಮಿಕೊಳ್ಳುವ ಎಲ್ಲ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದರು. ಶಿಕ್ಷಕ ಎಂ.ಎಸ್. ಹಿರೇಮಠ, ಎನ್ಎಸ್ಎಸ್ ಮಹತ್ವ ವಿವರಿಸಿದರು. ಸಂಯೋಜನಾಧಿಕಾರಿ ಜಿ.ಎಚ್. ವಾಲ್ಮೀಕಿ ಪ್ರಾಸ್ತಾವಿಕ ಮಾತನಾಡಿದರು. ಶಿವಗಂಗಾ ನಡುವಿನಮಠ, ಎ.ಎಂ. ಬಡ್ನಿಮಠ, ಎಸ್.ಎಂ. ಸುಣಗಾರ, ಶೇಖವ್ವ ಯಲಗಚ್ಚ, ಭಾಗ್ಯಶ್ರೀ ಪಾಟೀಲ, ಶಂಭು ಹಡಪದ ಮತ್ತಿತರರು ಪಾಲ್ಗೊಂಡಿದ್ದರು.

ಕಾಗಿನೆಲೆ: ಇಂದು ಸಂವಾದ 
ಹಾವೇರಿ:  ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಯೋಗದಿಂದ ಕಾಗಿನೆಲೆಯಲ್ಲಿ 2013ರ ಜು. 18ರಿಂದ 21ರ ವರೆಗೆ ಕನಕ ಚಿತ್ರಕಲಾ ಶಿಬಿರ ಏರ್ಪಡಿಸಿದೆ.
 ಕನಕದಾಸರು ಸುಮಾರು 270ರಷ್ಟು ಕೀರ್ತನೆಗಳ ಜತೆಗೆ ಮೋಹನ ತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ, ರಾಮಧಾನ್ಯ ಚರಿತ್ರೆ ಎಂಬ ನಾಲ್ಕು ಕಾವ್ಯಗಳನ್ನು ರಚಿಸಿದರು. ಅನುಭವ ಮತ್ತು ಅಭಿವ್ಯಕ್ತಿ ಕನಕದಾಸರಲ್ಲಿ ಏಕವಾದರೂ ಹಲವು ಕನಕರು ವಿವಿಧ ನೆಲೆಗಳಲ್ಲಿ ನಮಗೆ ಕಾಣಿಸಿಕೊಳ್ಳುವುದು ಅವರ ವಿಶೇಷ.  ಕನಕದಾಸರು  ನೀಡಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ದರ್ಶನ ಅನನ್ಯವಾದುದು. ಕನಕದಾಸರ ಜೀವನದ ಸ್ವಾರಸ್ಯಕರ ಸನ್ನಿವೇಶಗಳನ್ನು ದೃಶ್ಯ ಮಾಧ್ಯಮದಲ್ಲಿ ಪ್ರಸ್ತುತಪಡಿಸುವುದು ಈ ಶಿಬಿರದ ಆಶಯವಾಗಿದೆ. ನಾಲ್ಕು ದಿನಗಳ ಈ ಕನಕ ಚಿತ್ರಕಲಾ ಶಿಬಿರದಲ್ಲಿ ರಾಜ್ಯದ ಖ್ಯಾತ ಹಿರಿಯ ಹಾಗೂ ಕಿರಿಯ ಚಿತ್ರಕಲಾವಿದರು ಭಾಗವಹಿಸಿದ್ದಾರೆ. ಕಲಾವಿದರಾದ ಡಾ೤ ಎಂ.ಎಸ್. ಮೂರ್ತಿ, ವಿ.ಜಿ. ಅಂದಾನಿ, ನಾ. ರೇವಣ್ಣ, ಎಮ್.ಸಿ. ಚೆಟ್ಟಿ, ಕರಿಯಪ್ಪ  ಹಂಚಿನಮನೆ ಮೊದಲಾದ ಕಲಾವಿದರು ಸಕ್ರಿಯವಾಗಿ ಚರ್ಚೆಯಲ್ಲಿ ಭಾಗವಹಿಸಿದ್ದರು.
 ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಸ್.ವೈ. ಬಸವರಾಜಪ್ಪ ಉಪಸ್ಥಿತರಿದ್ದರು. 21ರಂದು ಹಾವೇರಿ ಜಿಲ್ಲೆಯ ಸಾಹಿತಿ ಹಾಗೂ ಕಲಾವಿದರಾದ ಸತೀಶ ಕುಲಕರ್ಣಿ, ಹನುಮಂತಗೌಡ ಹೊಲ್ಲರ್, ಕೊರಗಲ್ಲು ವಿರೂಪಾಕ್ಷಪ್ಪ, ಗಂಗಾಧರ ನಂದಿ, ಟಿ.ಎಂ. ಭಾಸ್ಕರ್, ಮುದೆನೂರು ಲಿಂಗಪ್ಪ, ಶಂಕಮ್ಮ ಸಂಕಣ್ಣನವರ, ವಿ.ಎಂ. ಪತ್ರಿ, ಹರೀಶ ಮಾಳಪ್ಪನವರ, ಕುಮಾರ್ ಕಾಟೇನಹಳ್ಳಿ, ಅಶೋಕ ಎಣ್ಣಿ ಇತರರು ಸಂವಾದದಲ್ಲಿ ಭಾಗವಹಿಸಲಿದ್ದಾರೆಂದು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸಮನ್ವಯಾಧಿಕಾರಿ ಕಾ.ತ. ಚಿಕ್ಕಣ್ಣ ತಿಳಿಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.