ರಾಷ್ಟ್ರ ಪ್ರಗತಿಗೆ ವೈಜ್ಞಾನಿಕ ಚಿಂತನೆ ಅಗತ್ಯ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜು. 20
ವೈಜ್ಞಾನಿಕ ಚಿಂತನೆ, ಹೊಸ ಆವಿಷ್ಕಾರಗಳು ಪ್ರಗತಿಗೆ ಅವಶ್ಯಕ. ಜಾಗತಿಕ ಮಟ್ಟದಲ್ಲಿ ದೇಶ ಪ್ರಗತಿ ಸಾಧಿಸಲು ಆಧುನಿಕ ತಂತ್ರಜ್ಞಾನಗಳೇ ಅಂತಿಮ ಪರಿಹಾರ. ಹೀಗಾಗಿ ಇದೊಂದು ಪ್ರಶ್ನಾತೀತ ಸಿದ್ಧಾಂತವಾಗಿದೆ ಎಂದು ಕಾಗಿನೆಲೆ ಕನಕದಾಸ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಂ. ಬಸವರಾಜಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಎಸ್ಪಿಎಫ್ ದೊಡ್ಡಗೌಡ್ರ ಪೌಢಶಾಲೆಯಲ್ಲಿ ಏರ್ಪಡಿಸಿದ್ದ ವಿಜ್ಞಾನ ಘಟಕ ಹಾಗೂ ಶಾಲಾ ಸಂಸತ್ತು ಉದ್ಘಾಟಿಸಿ ಅವರು ಮಾತನಾಡಿದರು.
ಒಳ್ಳೆಯದಕ್ಕೆ ವಿಜ್ಞಾನ ಬಳಕೆಯಾಗಲಿ: ತಾಂತ್ರಿಕತೆ ಮುಂದುವರಿದಂತೆ ಜಗತ್ತು ಕೂಡ ವೇಗದಲ್ಲಿ ಬೆಳೆಯುವುದಕ್ಕೆ ಕಾರಣವಾಗಲಿದ್ದು, ಈ ಕುರಿತಂತೆ ಈಗಾಗಲೇ ದೇಶ-ದೇಶಗಳ ನಡುವೆ ಪೈಪೋಟಿ ಆರಂಭವಾಗಿದೆ. ಆದರೆ, ಉತ್ತಮ ಉದ್ದೇಶಗಳಿಗೆ ವಿಜ್ಞಾನವನ್ನು ಬಳಸಿಕೊಂಡಲ್ಲಿ ಜೀವ ಸಂಕುಲ ಹಾಗೂ ನಾಗರಿಕತೆಯನ್ನು ಶಾಶ್ವತವಾಗಿ ಮುಂದುವರಿಸಿಕೊಂಡು ಹೋಗಲು ಸಾಧ್ಯವೆಂದರು.
ವೈಜ್ಞಾನಿಕ ಚಿಂತನೆ ಮೂಡಿಸಿ: ಜಾಗತಿಕ ಮಟ್ಟದಲ್ಲಿ ಏರ್ಪಟ್ಟಿರುವ ಪೈಪೋಟಿಗೆ ಸರಿಸಾಟಿಯಾಗಿ ನಿಲ್ಲಲು ವೈಜ್ಞಾನಿಕ ಚಿಂತನೆ ಅವಶ್ಯ. ಈ ದಿಸೆಯಲ್ಲಿ ಆಸಕ್ತಿ ತೋರುವಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರಾಥಮಿಕ ಹಂತದಿಂದಲೇ ವೈಜ್ಞಾನಿಕ ವಿಚಾರಗಳನ್ನು ಅವರಲ್ಲಿ ಮೂಡಿಸುವ ಮಹತ್ವದ ಕಾರ್ಯವನ್ನು ಸರ್ಕಾರಗಳು ಮಾಡಬೇಕಾಗಿದೆ ಎಂದರು.
ನಾಯಕತ್ವ ಗುಣ ಸೇರಿದಂತೆ ಬದುಕನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿ ಹಂತವೇ ಸೂಕ್ತ ಕಾಲವಾಗಿದೆ. ಈ ನಿಟ್ಟಿನಲ್ಲಿ ದುಶ್ಚಟಗಳಿಗೆ ಬಲಿಯಾಗದೇ ಪ್ರತಿಯೊಬ್ಬರು ಆದರ್ಶ ಪ್ರಜೆಯಾಗಿ ದೇಶದ ಪ್ರಗತಿಗೆ ಕೈಜೋಡಿಸುವಂತೆ ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶಿಕ್ಷಕ ಡಿ.ಎಸ್. ಲಮಾಣಿ, ಸಂಸತ್ತು ರಚಿಸುವ ಉದ್ದೇಶ, ಕಾರ್ಯ ಚಟುವಟಿಕೆ ವ್ಯಾಪ್ತಿ, ಸಂಸತ್ತಿಗೆ ಆಯ್ಕೆಯಾದವರು ನಿರ್ವಹಿಸಬೇಕಾದ ಜವಾಬ್ದಾರಿಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರಲ್ಲದೇ ಚುನಾಯಿತ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಎಸ್.ಎಸ್. ಮರಿಗೌಡ್ರ ವಹಿಸಿದ್ದರು. ವಿಜ್ಞಾನ ಘಟಕದ ಸಂಚಾಲಕ ಎಸ್.ಬಿ. ಮುದ್ದಪ್ಪಳವರ, ಶಿಕ್ಷಕರಾದ ಪಿ.ವಿ. ಗಂಗಮ್ಮನವರ, ಸಿ.ಎಸ್. ಪಾಟೀಲ, ಪಿ.ಎಸ್. ಕೊರಟಗೇರಿ, ಕೆಂಡದಮಠ ಇನ್ನಿತರರು ವೇದಿಕೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

