ಹಾವೇರಿ

ಸುದ್ದಿ ಸಂಕ್ಷೇಪ

Published On :

ಇಂದು ಕಾರ್ಗಿಲ್ ವಿಜಯೋತ್ಸವ ಸ್ಮರಣೆ
ನರಗುಂದ: 
ತಾಲೂಕಿನ ಭೈರನಹಟ್ಟಿ ಗ್ರಾಮದ ಗುರು ಬ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆ, ದೊರೆಸ್ವಾಮಿ ಜನಕಲ್ಯಾಣ ಹಾಗೂ ಶಿಕ್ಷಣ ಟ್ರಸ್ಟ್ ದೊರಸ್ವಾಮಿ ವಿರಕ್ತಮಠದ ಇವುಗಳ ಆಶ್ರಯದಲ್ಲಿ ಜು. 26ರಂದು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಹಾಗೂ ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.  ದೊರಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀ, ಹೆಬ್ಬಾಳದ ವೀರೇಶ್ವರ ದೇವರು ಸಾನ್ನಿಧ್ಯವಹಿಸುವರು. ಮಾಜಿ ಸೈನಿಕರ ತಾಲೂಕು ಅಧ್ಯಕ್ಷ ಪಿ.ಬಿ. ವಿರಕ್ತಮಠ, ಮಾಜಿ ಸೈನಿಕ ಜಿ.ಬಿ. ಕಂಟೆನ್ನವರ, ಪಿ.ಟಿ. ಸೂರ್ಯವಂಶಿ, ಎಚ್.ಜಿ. ಅಂಗಡಿ, ಮಹೇಶ್ವರಯ್ಯ ಸುರೇಬಾನ, ಅಶೋಕ ಮೊರಬ, ಉಳಿವೆಪ್ಪ ಬದ್ನಿಕಾಯಿ, ಬಸವರಾಜ ನೇಸರಗಿ, ಗುರಪ್ಪ ಅಂಬಗೇರ,  ರಾಘವೇಂದ್ರ ಗುಜಮಾಗಡಿ, ಅಧ್ಯಕ್ಷ ಚನ್ನು ನಂದಿ, ಸೋಮಲಿಂಗಪ್ಪ ಅಪೋಜಿ, ವೈ.ಆರ್. ಬಸಿಡೋಣೆ ಮತ್ತಿತರರು ಆಗಮಿಸುವರೆಂದು ಪ್ರಕಟಣೆ ತಿಳಿಸಿದೆ.

ಶಿರೋಳ ಗ್ರಾಪಂ ಭಾರಿಅವ್ಯವಹಾರ: ಡಾ. ಚೌಕಮಠ
ನರಗುಂದ
: ತಾಲೂಕಿನ ಶಿರೋಳ ಗ್ರಾಮದ ಗ್ರಾಪಂನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯದರ್ಶಿ ಡಾ. ಎಸ್.ಬಿ. ಚೌಕಮಠ ಆರೋಪಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, 2010-11ನೇ ಸಾಲಿನ ವರ್ಗ-1(ನಿಧಿ-1) ಸರಕಾರಿ 6 ಲಕ್ಷ ಯೋಜನೆ ಕಾಮಗಾರಿ ಖರ್ಚಿನ ವಿವರದಲ್ಲಿ ಶಿರೋಳ ಗ್ರಾಮದ ಅಯ್ಯಪ್ಪನ ಬಾವಿ ಸ್ವಚ್ಛಗೊಳಿಸಿದ್ದೇವೆಂದು ರು. 16,852 ಖರ್ಚಿನ ಬಾಬತ್ತಿನಲ್ಲಿ ತೋರಿಸಿರುವರು. ಆ ನಂತರ ಕಾಮಗಾರಿಯ ಬಗ್ಗೆ ಸಂಪೂರ್ಣ ಕಡತಗಳನ್ನು ಹಾಗೂ ಪೋಟೋಗ್ರಾಫಿಗಳನ್ನು ಮಾಹಿತಿ ಹಕ್ಕಿನಡಿ ಕೇಳಿದಾಗ ಯಾವುದೇ ರೀತಿಯಲ್ಲಿ ಈ ಕಾಮಗಾರಿ ನಡೆದಿಲ್ಲ ಹಾಗೂ ಹಣವನ್ನು ಬಳಸಿರುವುದಲ್ಲಿ ಎಂದು ಈ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಂಬಂಧವಿಲ್ಲದ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾನೆ. ಆದ್ದರಿಂದ ಈ ಗ್ರಾಪಂನಲ್ಲಿ ಉದ್ಯೋಗ ಖಾತರಿ ಸೇರಿದಂತೆ ಕೃಷಿ ಹೊಂಡ, ನೀರು ಪೂರೈಕೆ, ಚರಂಡಿ, ರಸ್ತೆ, ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ ಭಾರೀ ಅವ್ಯವಹಾರ ಆಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ವೃತ್ತಿ ಶಿಕ್ಷಣ ಶಿಕ್ಷಕರ ಸಭೆ
ಗದಗ:
ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ವೃತ್ತಿ ಶಿಕ್ಷಣ ಶಿಕ್ಷಕರ ಸಂಘ (ರಿ) ಬೆಂಗಳೂರು, ಜಿಲ್ಲಾ ಘಟಕ ಗದಗ ವತಿಯಿಂದ ಈಚೆಗೆ ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆ ನಂ. 6ರಲ್ಲಿ ವೃತ್ತಿ ಶಿಕ್ಷಣ ಶಿಕ್ಷಕರ ಸಭೆ ಜರುಗಿತು. ಸಭೆ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ಕೆ. ನಿಂಬನಗೌಡರ ಅವರ ಅನುಪಸ್ಥಿತಿಯಲ್ಲಿ ಪ್ರಧಾನ ಕಾರ್ಯದರ್ಶಿ ಜಿ.ಟಿ. ನರಗುಂದ ವಹಿಸಿದ್ದರು.

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಬೆಟಗೇರಿ:
ದೇವಾಂಗ ಸಮಾಜದ ಹಿರಿಯ ಸಹಕಾರಿ ಧುರೀಣ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದಿ. ಎಫ್.ಎಂ. ಬರದ್ವಾಡರವರ ಸ್ಮರಣಾರ್ಥ ದೇವಾಂಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೇ, ಜೂ, 2013ರಲ್ಲಿ ಜರುಗಿದ ಯಾವುದೇ ವಿಶ್ವವಿದ್ಯಾಲಯದ ಬಿಎ, ಬಿಕಾಂ, ಬಿಎಸ್‌ಸಿ ಅಂತಿಮ ವರ್ಷದಲ್ಲಿ ಶೇ. 60ಕ್ಕಿಂತಲೂ ಹೆಚ್ಚು ಅಂಕಗಳನ್ನು ಪಡೆದಿರುವ ದೇವಾಂಗ ಸಮಾಜದ ವಿದ್ಯಾರ್ಥಿಗಳು ಅರ್ಹತೆ ಪಡೆಯಲಿದ್ದು, ಅತಿ ಹೆಚ್ಚು ಅಂಕಗಳನ್ನು ಪಡೆದಿರುವ 3 ವಿದ್ಯಾರ್ಥಿಗಳಿಗೆ ಪ್ರತ್ಯೇಕ 3 ವಿಭಾಗಗಳಿಗೆ ನಗದು ಪಾರಿತೋಷಕಗಳನ್ನು ನೀಡಲಾಗುವುದು. ವಿದ್ಯಾರ್ಥಿಗಳು ಅರ್ಜಿಯನ್ನು ಆ. 31, 2013ರ ಒಳಗಾಗಿ ರಾಜೇಂದ್ರ ಎಫ್. ಬರದ್ವಾಡ, ಮಲ್ಲರಾಯನ ಕಟ್ಟಿ ಓಣಿ, ಟೆಂಗಿನಕಾಯಿ ಬಜಾರ ಹತ್ತಿರ ಪೋಸ್ಟ್ ಬೆಟಗೇರಿ-ಗದಗ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

28ರಂದು ನೈಸರ್ಗಿಕ ಕೃಷಿಕರ ರಾಜ್ಯ ಸಮಾವೇಶ
ಗದಗ:
ನೈಸರ್ಗಿಕ ಕೃಷಿಕರ ರಾಜ್ಯ ಮಟ್ಟದ ಒಂದು ದಿನದ ಸಮಾವೇಶವನ್ನು ಗದಗ ಜಿಲ್ಲೆಯ ಹುಲಕೋಟಿಯ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜು. 28ರಂದು ಬೆಳಗ್ಗೆ 9 ಗಂಟೆಗೆ ಏರ್ಪಡಿಸಲಾಗಿದೆ.
ಮಾಜಿ ಶಾಸಕ ಡಿ.ಆರ್. ಪಾಟೀಲ ನೇತೃತ್ವದ ಈ ಸಮಾವೇಶದಲ್ಲಿ ಸುಭಾಷ ಪಾಳೇಕರ, ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಹಾಗೂ ಹಸಿರು ಸೇನೆ ಕರ್ನಾಟಕ ಘಟಕದ ಸಂಯೋಜಕಿ ಚುಕ್ಕಿ ನಂಜುಡಸ್ವಾಮಿ ಇತರರು ಭಾಗವಹಿಸುವರು. ನೈಸರ್ಗಿಕ ಕೃಷಿ ಆಂದೋಲನದ ಮುಂದಿನ ರೂಪರೇಷೆಗಳನ್ನು ನಿರ್ಣಯಿಸುವ ಕುರಿತು ಸಮಾಲೋಚನೆ ನಡೆಯಲಿದೆ. ಈಗಾಗಲೇ ನೈಸರ್ಗಿಕ ಕೃಷಿ ಅನುಷ್ಠಾನಗೊಳಿಸಿರುವ ರೈತರು ಮಾತ್ರ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಂಕರಣ್ಣ ದೊಡ್ಡಣ್ಣವರ: 9448916370 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.