ಮಕ್ಕಳಲ್ಲಿ ರಾಷ್ಟ್ರಾಭಿಮಾನ ಬೆಳೆಸಿ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಜು. 25
ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ಮಕ್ಕಳ ಪಾತ್ರ ಬಹು ಮುಖ್ಯವಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ರಾಷ್ಟ್ರಾಭಿಮಾನ ಬೆಳೆಸಬೇಕು. ಮನುಷ್ಯ ಇಂದು ಸ್ವಾರ್ಥಕ್ಕಾಗಿ ಮಾಡಬಾರದ್ದನ್ನೆಲ್ಲ ಮಾಡುತ್ತಿದ್ದಾನೆ. ಸ್ವಾರ್ಥ ಚಿಂತನೆಯಿಂದ ದೂರವಿದ್ದು, ನಿಸ್ವಾರ್ಥ ಸೇವೆ ಮಾಡಬೇಕು ಎಂದು ಹಾನಗಲ್ಲ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಎಚ್.ಜಿ. ಸಣ್ಣಗೌಡ್ರ ಹೇಳಿದರು.
ತಾಲೂಕಿನ ಅರಳೇಶ್ವರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿವೇಕಾನಂದ ಯುವ ಸ್ವಯಂ ಸೇವಾ ಸಂಘ ನಡೆಸಿದ 'ಮಕ್ಕಳಲ್ಲಿ ದೇಶ ಪ್ರೇಮ' ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ವಿದ್ಯಾರ್ಥಿಗಳು ಸಾಹಿತ್ಯದಿಂದ ವಿಮುಖವಾಗಿ ದೂರದರ್ಶನದ ಮುಂದೆ ಕುಳಿತು ಸಮಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಹೆಚ್ಚಾಗಿ ಸಾಹಿತ್ಯದ ಜೊತೆಗೆ ರಾಷ್ಟ್ರ ನಾಯಕರ ಜೀವನ ಚರಿತ್ರೆಗಳನ್ನು ಓದುವ ಹವ್ಯಾಸ ಬೆಳೆಸಬೇಕು. ಇದಕ್ಕೆ ಪಾಲಕರು ಮತ್ತು ಶಿಕ್ಷಕರು ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು. ಈ ಸಂದರ್ಭ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆಗಳ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಾದ ಅಂಜನಾ ಹಂಚಿನಮನಿ, ಭೂಮಿಕಾ ಹನುಮಗೌಡ್ರ, ಈರಮ್ಮ ವಡ್ಲಣ್ಣನವರ್ಗೆ ವಿವೇಕಾನಂದ ಯುವ ಸ್ವಯಂ ಸಂಘದ ವತಿಯಿಂದ ಬಹುಮಾನ ವಿತರಿಸಲಾಯಿತು.
ವಿವೇಕಾನಂದ ಯುವ ಸ್ವಯಂ ಸಂಘದ ಸದಸ್ಯರಾದ ಲಕ್ಷ್ಮೀಜನಗೇರಿ, ಗುತ್ತೆಮ್ಮ ಎಚ್, ದೀಪಾ ಚಿಕ್ಕೇರಿ, ವಿಮಲಾ ಶಿವನಗೌಡ್ರ ನೀಲಮ್ಮ ಗೂಳಿಯವರ್ ಶ್ವೇತಾ ಎಸ್.ಜಿ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆಗಳನ್ನು ಹೇಳಿಕೊಟ್ಟರು
ಶಾಲಾ ಮುಖ್ಯೋಪಾಧ್ಯಾಯ ಟಿ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರಳೇಶ್ವರ, ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿ ಪಿ.ಎಂ. ಚಲವಾದಿ ಶಿಕ್ಷಕರಾದ ಅನೀಲ್ ಕುಮಾರ್. ಜಿ., ಬಿ.ಎಂ. ಉದ್ದೇಗೌಡ್ರ, ದೀಪಾ.ಜೆ. ಗಾಯತ್ರಿ ಕೆ.ಎಸ್. ಪ್ರಭಾ ಪಾಂಡುರಂಗ, ವಿವೇಕಾನಂದ ಯುವ ಸ್ವಯಂ ಸೇವಾ ಸಂಘದ ಅಧ್ಯಕ್ಷ ಟಿಪ್ಪುಸುಲ್ತಾನ್ ನಾಯ್ಕ ವಾಡಿ, ಕಾರ್ಯದರ್ಶಿ ಗುಡ್ಡಪ್ಪ ಜಿಗಳಿಕೊಪ್ಪ, ಸದಸ್ಯರಾದ ಜ್ಞಾನೇಶ್ವರ ಸುಭಾಂಜಿ, ಮಂಜುನಾಥ ಗೊಲ್ಲರ, ನಾಗರಾಜ ಕ್ಯಾಲ್ಕೊಂಡ, ಮಂಜುನಾಥ ಹೊಂಡದಕಟ್ಟಿ, ಗುತ್ತೆಮ್ಮ ಎಚ್. ಮುಂತಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

