ಕರವೇಯಿಂದ ನಾಡು-ನುಡಿ ರಕ್ಷಣೆ: ಕರಬಸಯ್ಯ
ಹಿರೇಕೆರೂರು: ನಾಡು, ನುಡಿ, ನೆಲ-ಜಲ ರಕ್ಷಣೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನಾತ್ಮಕವಾಗಿ ನಿರಂತರ ಹೋರಾಟ ಮಾಡುವಲ್ಲಿ ರಕ್ಷಣಾ ವೇದಿಕೆ ಸದಾ ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳ ಪ್ರತಿಯೊಂದು ಹಳ್ಳಿಗಳಲ್ಲಿ ಸಂಘಟನೆ ಪ್ರಬಲಗೊಳ್ಳುತ್ತಿರುವುದು ಸಂಘಟನೆ ಬೆಳವಣಿಗೆ ಹಾಗೂ ನಾಡಿನ ಸೇವೆಗೆ ಯುವ ಜನತೆ ಸಿದ್ದಗೊಳ್ಳುವುದನ್ನು ಎತ್ತಿ ತೋರಿಸುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕರಬಸಯ್ಯ ಬಸರಿಹಳ್ಳಿಮಠ ಕರೆ ನೀಡಿದರು.
ತಾಲೂಕಿನ ಹಳ್ಳೂರ ಗ್ರಾಮದ ಆರಾಧ್ಯ ದೇವತೆ ಲಕ್ಷ್ಮೀ-ರಂಗನಾಥ ದೇವಾಲಯ ಅವರಣದಲ್ಲಿ ಜರುಗಿದ ಕರವೇ ಹಳ್ಳೂರು ಗ್ರಾಮ ಘಟಕವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಗಡಿ ಸಮಸ್ಯೆ, ಕಾವೇರಿ ನದಿ ನೀರು ಸಮಸ್ಯೆಗಳು ಬಗೆಹರಿಯದೆ ಸಮಸ್ಯೆಗಳಾಗಿ ಉಳಿದಿವೆ.
ಒಂದಿಲ್ಲೊಂದು ಕಾರಣ ಹಾಗೂ ಹಾರಿಕೆ ಉತ್ತರ ಇಲ್ಲಸಲ್ಲದ ನೆಪಗಳನ್ನು ಹೇಳಿ ರಾಜಕಾರಣಿಗಳು ತಮ್ಮ ಕೆಲಸ ಪೂರೈಸಿ ಅಧಿಕಾರವನ್ನು ಮಾತ್ರ ಅನುಭವಿಸುತ್ತಾರೆ. ಈ ಎರಡೂ ಸಮಸ್ಯೆಗಳ ಬಗ್ಗೆ ಯಾವೊಬ್ಬ ರಾಜಕಾರಣಿಯೂ ತಲೆ ಕೆಡಿಸಿಕೊಳ್ಳದಿರುವುದು ರಾಜ್ಯದ ದುರಂತವಾಗಿದೆ. ಕಾರಣ ಇಂದಿನ ಯುವಜನತೆ ಸಂಘಟನಾತ್ಮಕವಾಗಿ ಹೋರಾಟ ಮಾಡುವ ಅನಿವಾರ್ಯತೆಯನ್ನು ರಾಜಕಾರಣಿಗಳು ತಂದಿಟ್ಟಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಹಳ್ಳೂರು ಲಕ್ಷ್ಮೀ-ರಂಗನಾಥ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಎಂ. ಮೆಣಸಿನಕಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಅಧ್ಯಕ್ಷ ಗಿರೀಶ ಬಾರ್ಕಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕರವೇ ರಾಜಕೀಯ ರಹಿತವಾಗಿದ್ದು, ಗ್ರಾಮದ ಯಾವುದೇ ಸಮಸ್ಯೆಗಳಿದ್ದರೂ ಹೋರಾಟದ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಈ ಸಂಘಟನೆಯಲ್ಲಿರುವರು ಆದರ್ಶ ಗುಣಗಳನ್ನು ಅಳವಡಿಸಿಕೊಂಡು ಸಮಾಜ ಸೇವೆಗೆ ಸಿದ್ಧರಾಗಬೇಕು. ಗ್ರಾಮದ ಯುವಕರು ಸಕ್ರೀಯವಾಗಿ ನಾಡ ಸೇವೆಗೆ ಪಣ ತೊಡಬೇಕು ಎಂದು ಕರೆ ನೀಡಿದರು.
ಕರವೇ ಜಿಲ್ಲಾ ವಕ್ತಾರ ಶಿವಾನಂದ ಪೂಜಾರ, ಹಳ್ಳೂರ ಗ್ರಾಮ ಘಟಕ ನೂತನ ಅಧ್ಯಕ್ಷ ಬಸವರಾಜ ಕಿಟ್ಟದಳ್ಳಿ, ಕಾರ್ಯಕರ್ತರಾದ ಮಂಜುನಾಥ ಹೊಸಕಟ್ಟಿ, ವೀರನಗೌಡ ಬಣಕಾರ, ಕೆಂಚಪ್ಪ ಕುರುಬರ, ಹಿರೇಮತ್ತೂರು ಗ್ರಾಮ ಕರವೇ ಅಧ್ಯಕ್ಷರು ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

