ಬಾಲಕನ ಚಿಕಿತ್ಸೆಗೆ ನೆರವು ನೀಡಿ
ಶಿಗ್ಗಾಂವಿ: ಅಪಘಾತದಲ್ಲಿ ಸಿಲುಕಿ ನರಳುತ್ತಿರುವ ಮಗುವಿನ ಚಿಕಿತ್ಸೆಗೆ ಹಣವಿಲ್ಲದೆ ತಾಲೂಕಿನ ಚಂದಾಪುರ ಗ್ರಾಮದ ಜಗದೀಶ ಮನ್ನಂಗಿ ಸಹಾಯ ಹಸ್ತ ಬೇಡಿದ್ದಾರೆ.
ರಸ್ತೆ ಪಕ್ಕದಲ್ಲಿ ಸೈಕಲ್ ಓಡಿಸಿಕೊಂಡು ಬರುತ್ತಿರುವಾಗ ಟ್ಯಾಕ್ಸಿ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಚಂದ್ರಶೇಖರ ತೀವ್ರ ಗಾಯಗೊಂಡಿದ್ದು, ಮೂತ್ರವಿಸರ್ಜನೆ ಮಾಡುವುದು ತ್ರಾಸದಾಯಕವಾಗಿದೆ.
ಹೀಗಾಗಿ ಮೂತ್ರವಿಸರ್ಜನೆಗೆ ಸೊಂಟದಲ್ಲಿ ಪೈಪ್ ಜೋಡಿಸಲಾಗಿದೆ. ಅದನ್ನು ಸರಿಪಡಿಸುವ ಚಿಕಿತ್ಸೆಗಾಗಿ ಅಲೆದಾಡುತ್ತಿದ್ದಾರೆ. ಧಾರವಾಡ ಎಸ್ಡಿಎಂ ಆಸ್ಪತ್ರೆಯಲ್ಲಿ ಈಗಾಗಲೆ ಚಿಕಿತ್ಸೆ ನಡೆಸಲಾಗಿದೆ. ಪರಿಪೂರ್ಣ ಆರೋಗ್ಯವಾಗಲೂ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಬೇಕಾಗಿದ್ದು, ಸುಮಾರ ರು. 4ರಿಂದ ರು. 5 ಲಕ್ಷ ಖರ್ಚಾಗುತ್ತದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಜಗದೀಶ ಮನ್ನಂಗಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬನೇ ಗಂಡು ಮಗನಿದ್ದಾನೆ. ಇದ್ದ ಒಂದು ಎಕರೆ ಭೂಮಿಯನ್ನು ಇನ್ನೊಬ್ಬರಿಗೆ ಲಾವಣಿ ಹಚ್ಚಲಾಗಿದೆ. ಹೀಗಾಗಿ ಚಿಕಿತ್ಸೆ ಮಾಡಿಸಲು ಸಾಧ್ಯವಿಲ್ಲದಾಗಿದೆ. ಸಾರ್ವಜನಿಕರು ಸಹಾಯಧನ ನೀಡುವಂತೆ ಮನವಿ ಮಾಡಿದ್ದಾರೆ. ಸಹಾಯಧನ ನೀಡುವವರು ಜಗದೀಶ ಮಹಾದೇವಪ್ಪ ಮನ್ನಂಗಿ, ಸಾ. ಚಂದಾಪುರ, ತಾ. ಶಿಗ್ಗಾಂವಿ, ಜಿ. ಹಾವೇರಿ. ಶಿಗ್ಗಾಂವಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ ಅಕೌಂಟ್ ನಂ. 0054057224810 ಮೊ. 8722077394 ಸಂಪರ್ಕಿಸಬೇಕೆಂದು ಮನವಿ ಮಾಡ್ದಿದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

