ಗಿಡ-ಮರ ಸಂರಕ್ಷಣೆಗೆ ಶ್ರಮಿಸಿ
ಹಿರೇಕೆರೂರು: ಮನುಷ್ಯನ ಜೀವನಕ್ಕೆ ಉತ್ತಮವಾದ ಆಹಾರ, ಶುದ್ಧ ಕುಡಿಯುವ ನೀರು, ಉಸಿರಾಡಲು ಪರಿಶುದ್ಧ ಗಾಳಿ ಮುಖ್ಯವಾಗಿದೆ. ಈ ಮೂರು ಅಗತ್ಯಗಳನ್ನು ನಾವೆಲ್ಲರೂ ಪ್ರಕೃತಿಯಿಂದ ಪಡೆಯುತ್ತಿದ್ದರೂ ಸಹ ಗಿಡ-ಮರಗಳನ್ನು ರಕ್ಷಿಸದಿರುವುದು ಮತ್ತು ನೀರು ಹಾಗೂ ಗಾಳಿ ಕಲುಷಿತಗೊಳಿಸುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದು ಪ್ರಾಚಾರ್ಯ ಪ್ರೊ ಎಸ್.ಪಿ. ಗೌಡರ ತಿಳಿಸಿದರು.
ಅವರು ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಯೋಚಿಸಿ, ಸೇವಿಸಿ, ಉಳಿಸಿ ಎಂಬ ಉದ್ದೇಶಿತ ವಾಕ್ಯದಡಿ ಪ್ರಸಕ್ತ ವರ್ಷ ಪರಿಸರ ದಿನಾಚರಣೆ ಆಚರಿಸುತ್ತಿರುವುದು ತುಂಬಾ ಅರ್ಥಪೂರ್ಣವಾದ ಕಾರ್ಯವಾಗಿದೆ. ಕಾರಣ ಸಂಗ್ರಹಿಸಿದ ಹಾಗೂ ತಯಾರಿಸಿದ ಆಹಾರ ಕೆಡದಂತೆ ಸದ್ಬಳಕೆಯಾಗುವಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ.
ಆಹಾರ ಪೋಲು ಮಾಡುವುದು ಮತ್ತು ಅನಗತ್ಯ ಆಹಾರ ಸೇವನೆ ವಿರುದ್ಧ ಜನ ಜಾಗೃತಿ ಮೂಡಿಸಬೇಕಾಗಿದೆ. ಕೆಲವು ಸಮಾರಂಭಗಳಲ್ಲಿ ಅನಗತ್ಯವಾಗಿ ಆಹಾರವನ್ನು ಒಣ ಪ್ರತಿಷ್ಠೆಗಾಗಿ ಆಹಾರ ಚೆಲ್ಲುವುದನ್ನು ಕಾಣುತ್ತೇವೆ. ಅಂಥವರಿಗೆ ತಿಳಿವಳಿಕೆ ನೀಡುವ ಮೂಲಕ ಆಹಾರ ಹಾಗೂ ಪರಿಸರ ರಕ್ಷಣೆಗೆ ಮುಂದಾಗಬೇಕು. ಪರಿಶುದ್ಧ ವಾತಾವರಣ ನಿರ್ಮಿಸಲು ಪ್ರತಿಯೊಬ್ಬರು ಗಿಡ-ಮರಗಳನ್ನು ಬೆಳೆಸಲು ಪಣತೊಡಬೇಕೇಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪತ್ರಾಂಕಿಂತ ವ್ಯವಸ್ಥಾಪಕ ಎನ್. ಜಗದೀಶ, ಗ್ರಂಥಪಾಲಕ ಶಿವಾನಂದ ಸಂಗಾಪುರ ಸಿಬ್ಬಂದಿಗಳಾದ ವಿ.ಜಿ. ಪಾಟೀಲ, ಚನ್ನಮ್ಮ ಬಡಿಗೇರ, ಎನ್.ಎಂ. ಬಾತಮ್ಮನವರ, ಮೂಕೇಶಪ್ಪ ವಾಲಿ ಹಾಗೂ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

