ಹಾವೇರಿ

ತಾಲೂಕು ಕಸಾಪ ಸಮ್ಮೇಳನ ಇಂದು

Published On :

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜೂ. 13
ಸಾಹಿತಿಗಳ ತವರೂರು, ಸೌಹಾರ್ದದ ನೆಲೆಬೀಡು ಶಿಗ್ಗಾಂವಿಯಲ್ಲಿ ಜೂ. 14ರಂದು ತಾಲೂಕು ಮಟ್ಟದ ಎರಡನೇ ಸಾಹಿತ್ಯ ಸಮ್ಮೇಳನದ ಸಂಭ್ರಮವೊ... ಸಂಭ್ರಮ.
ಪಟ್ಟಣದ ಸಂಗನಬಸವ ಮಂಗಲ ಸಭಾ ಭವನದಲ್ಲಿ ಅದ್ಧೂರಿಯಾಗಿ ಜರುಗಲಿರುವ ಸಾಹಿತ್ಯ ಸಮ್ಮೇಳನಕ್ಕೆ ಶರೀಫ ಶಿವಯೋಗಿಗಳ ಮಹಾವೇದಿಕೆ ಸಿದ್ದಗೊಂಡಿದೆ. ಬೆಳಗ್ಗೆ 7-30ಕ್ಕೆ ಸಮ್ಮೇಳನಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು.
ತಾಪಂ ಅಧ್ಯಕ್ಷೆ ಉಷಾ ಬಿಳೆಕುದರಿ ಕನ್ನಡ ಧ್ವಜಾರೋಹಣ, ತಾಲೂಕು ಕಸಾಪ ಅಧ್ಯಕ್ಷ ಬಸವರಾಜ ಬಸರೀಕಟ್ಟಿ ಪರಿಷತ್ತಿನ ಧ್ವಜಾರೋಹಣ ನೆರವೇರಿಸಲಿದ್ದಾರೆ. ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜವ್ವ ಆಡಿನ, ಸದಸ್ಯರಾದ ಬಿ.ಟಿ. ಇನಾಮತಿ, ಸಿ.ಎಸ್. ಪಾಟೀಲ, ಶಶಿಧರ ಹೊನ್ನಣ್ಣವರ, ತಾಪಂ ಉಪಾಧ್ಯಕ್ಷೆ ಸುಗಂಧಾಬಾಯಿ ಘೋಡಕೆ ಉಪಸ್ಥಿತರಿರುವರು.
ಸಂಸದ ಪ್ರಹ್ಲಾದ ಜೋಶಿ ಅತಿಥಿಗಳಾಗಿ ಆಗಮಿಸುವರು. ಸಾಂಸ್ಕೃತಿಕ ಚಟುವಟಿಕೆಗಳನ್ನು ವಿಪ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಸಂಸದ ಮಂಜುನಾಥ ಕುನ್ನೂರು ಸ್ಮರಣ ಸಂಚಿಕೆ, ತಾಪಂ ಅಧ್ಯಕ್ಷೆ ಉಷಾ ಬಿಳೆಕುದರಿ ಪುಸ್ತಕ ಮಳಿಗೆಗಳನ್ನು ಉದ್ಘಾಟಿಸುವರು. ಶೇಷಗಿರಿ ಮುತಾಲಿಕ್ ದೇಸಾಯಿ ನಿಕಟಪೂರ್ವ ಅಧ್ಯಕ್ಷರ ನುಡಿ ಆಡಲಿದ್ದಾರೆ. ಬಳಿಕ ಸಮ್ಮೇಳನಾಧ್ಯಕ್ಷ ಬ.ಫ. ಯಲಿಗಾರ ಅಧ್ಯಕ್ಷ ನುಡಿ ಸಮರ್ಪಿಸಲಿದ್ದಾರೆ.
ಮಧ್ಯಾಹ್ನ 12ಕ್ಕೆ ನಡೆಯವ ಕವಿಗೋಷ್ಠಿಗೆ ಉಪನ್ಯಾಸಕ ಶೇಖರ ಸಜ್ಜನ ಚಾಲನೆ ನೀಡುವರು. ಖ್ಯಾತ ಜಾನಪದ ತಜ್ಞ ಡಾ೤ ರಾಮು ಮೂಲಗಿ ಆಶಯ ನುಡಿ ಆಡಲಿದ್ದಾರೆ. ಎಂ.ಎನ್. ಮಲ್ಲಾಡದ ಅಧ್ಯಕ್ಷತೆ ವಹಿಸುವರು.
ತಾಲೂಕಿನ 20ಕ್ಕೂ ಹೆಚ್ಚು ಕವಿಗಳು ಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ. 2.30ಕ್ಕೆ ಸಂಕೀರ್ಣಗೋಷ್ಠಿ ನಡೆಯಲಿದೆ. ಮಾಜಿ ಶಾಸಕ ರಾಜಶೇಖರ ಸಿಂಧೂರ ಆಶಯ ನುಡಿ ನುಡಿಯಲ್ಲಿದ್ದು, ಸಾಹಿತಿ ಪಕ್ಕಣ್ಣ ಅರಗೋಳ ಅಧ್ಯಕ್ಷತೆ ವಹಿಸುವರು. ಕೈಯಲ್ಲಿ ಯಾಂತ್ರೀಕರಣ ವಿಷಯ ಕುರಿತು ಕೃಷಿ ವಿವಿಯ ಡಾ೤ ಸತೀಶ ದೇಸಾಯಿ, ತಾಲೂಕು ದರ್ಶನ ಕುರಿತು ಎಸ್.ಕೆ. ಹೂಗಾರ, ಆಧ್ಯಾತ್ಮಿಕ ಜಗತ್ತಿಗೆ ಕನಕ-ಶರೀಫರ ಕೊಡುಗೆ ವಿಷಯ ಕುರಿತು ಎಸ್.ಬಿ. ಅಂಗಡಿ, ಗ್ರಾಮ ಸ್ವರಾಜ್ಯ ನಮ್ಮ ನಿರೀಕ್ಷೆಯಂತಿದೆಯೇ ಎಂಬ ವಿಷಯ ಕುರಿತು ಡಾ೤ ಎಸ್.ಎನ್. ದೇಸಾಯಿ, ರೇಖಾ ಜವಳಿ ಶರಣೆ ಅಕ್ಕಮಹಾದೇವಿ ನಾ-ಕಂಡಂತೆ ಎಂಬ ವಿಷಯ ಕುರಿತು ಉಪನ್ಯಾಸ ನೀಡುವರು.
ಸಂಜೆ 4-30ಕ್ಕೆ ಬಹಿರಂಗ ಅಧಿವೇಶನ ಜರುಗಲಿದ್ದು, ಅಧ್ಯಕ್ಷತೆ ಜಿಲ್ಲಾ ಕಸಾಪ ಅಧ್ಯಕ್ಷ ಗುರುಶಾಂತಪ್ಪ ಮಾಸಣಗಿ ವಹಿಸುವರು. ಆಶಯ ಭಾಷೆ ತಾಲೂಕು ಕಸಾಪ ಅಧ್ಯಕ್ಷ ಬಸವರಾಜ ಬಸರೀಕಟ್ಟಿ ಮಾಡಲಿದ್ದು, ನಿರ್ಣಯಗಳ ಮಂಡನೆಯನ್ನು ಶಂಕರಗೌಡ ಪಾಟೀಲ, ಎಲ್.ಎಸ್. ಲಮಾಣಿ, ಮಲ್ಲಪ್ಪ ರಾಮಗಿರಿ, ಎನ್.ಎಂ. ಬೊಮ್ಮನಕಟ್ಟಿ, ಕೆ.ಎಸ್. ಕೋಡಿಹಳ್ಳಿ ಮಾಡಲಿದ್ದಾರೆ.
ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಅಧ್ಯಕ್ಷತೆ ಜಿಲ್ಲಾ ಕಸಾಪ ಅಧ್ಯಕ್ಷ ಜಿ.ಬಿ. ಮಾಸಣಗಿ ವಹಿಸಲಿದ್ದು, ಸಮ್ಮೇಳನಾಧ್ಯಕ್ಷ ಬ.ಫ. ಯಲಿಗಾರ, ಮಾಜಿ ಸಂಸದ ಮಂಜುನಾಥ ಕುನ್ನೂರು, ಮಾಜಿ ಶಾಸಕ ಅಜ್ಜಂಫೀರ ಖಾದ್ರಿ, ಡಿವೈಎಸ್ಪಿ ಬಿ.ವೈ. ಬೆಳ್ಳುಬ್ಬಿ, ಸಿಪಿಐ ಬಿ.ಬಿ. ಪಾಟೀಲ, ತಹಸೀಲ್ದಾರ್ ಎಸ್.ಎ. ಚೌಗಲೆ, ತಾಪಂ ಅಧಿಕಾರಿ ಬಿ. ರೇವಣ್ಣ, ಶಿಕ್ಷಣಾಧಿಕಾರಿ ಎಸ್.ಎಲ್. ಭಜಂತ್ರಿ, ಪುರಸಭೆ ಮುಖ್ಯಾಧಿಕಾರಿ ಎಸ್.ಎಚ್. ನಾಯ್ಕರ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಫ್. ಬಾರ್ಕಿ, ಜಾನಪದ ತಜ್ಞ ಡಾ೤ ಶ್ರೀಶೈಲ ಹುದ್ದಾರ, ಪಿ.ಕೆ. ನರಗುಂದ, ಬಿ.ಎಸ್. ಪಟ್ಟಣಶೆಟ್ಟಿ ಉಪಸ್ಥಿತರಿರುವರು.
ಸಂಜೆ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಭರತನಾಟ್ಯ, ಗೋವಿನ ಹಾಡು, ಜೋಗಮ್ಮನ ನೃತ್ಯ ಸೇರಿದಂತೆ ವಿವಿಧ ಜಾನಪದ ಕಲಾ ಪ್ರಕಾರಗಳು ಶಾಲಾ ವಿದ್ಯಾರ್ಥಿಗಳಿಂದ ನಡೆಯಲಿವೆ.

ಅಧ್ಯಕ್ಷರ ಮೆರವಣಿಗೆ
ಬೆಳಗ್ಗೆ 8-30ಕ್ಕೆ ವಿವಿಧ ಕಲಾ ತಂಡಗಳು, ಜಾನಪದ ವಾದ್ಯಗೋಷ್ಠಿಗಳೊಂದಿಗೆ ಸಮ್ಮೇಳನಾಧ್ಯಕ್ಷ ಬ.ಫ. ಯಲಿಗಾರ ಅವರನ್ನು ಮೆರವಣಿಗೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ನಂತರ ಸಮ್ಮೇಳನದ ಸಭಾ ಭವನ ತಲುಪಲಿದೆ. ಮೆರವಣಿಗೆಗೆ ಶಿಗ್ಗಾಂವಿ ತಾಲೂಕು ಶಿಕ್ಷಣ ಸಮಿತಿ ಅಧ್ಯಕ್ಷ ಎಂ.ಬಿ. ಅಂಕಲಕೋಟಿ ಚಾಲನೆ ನೀಡಲಿದ್ದಾರೆ.

ಸಮ್ಮೇಳನಕ್ಕೆ ಚಾಲನೆ
ಬೆಳಗ್ಗೆ 10ಕ್ಕೆ ಶಿಗ್ಗಾಂವಿಯ ಸಂಗನಬಸವ ಮಂಗಲ ಸಭಾ ಭವನದಲ್ಲಿ ಶರೀಫ ಶಿವಯೋಗಿಗಳ ವೇದಿಕೆಯಲ್ಲಿ ಶಾಸಕ ಬೊಮ್ಮಾಯಿ ಸಮ್ಮೇಳನ ಉದ್ಘಾಟಿಸುವರು. ಸಂಗನಬಸವ ಶ್ರೀ ಸಾನ್ನಿಧ್ಯ ವಹಿಸುವರು. ರಾಜ್ಯ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಅಧ್ಯಕ್ಷತೆ ವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.