ಸ್ವಚ್ಛತೆಯಿಂದ ಡೆಂಘೀ ತೊಲಗಿಸಿ
ರಾಣಿಬೆನ್ನೂರು: ಸಾರ್ವಜನಿಕರು ತಮ್ಮ ಮನೆಗಳ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಲ್ಲಿ ಮಕ್ಕಳಿಗೆ ತಗುಲುತ್ತಿರುವ ಡೆಂಘೀ ಜ್ವರದ ಬಾಧೆಯಿಂದ ದೂರಾಗಲು ಸಾಧ್ಯ ಎಂದು ಸಿಆರ್ಪಿ ಶಿವಾನಂದ ಮೇಟಿ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ತಾಲೂಕು ಆರೋಗ್ಯ ಇಲಾಖೆ ಮತ್ತು ಸರ್ಕಾರಿ ಹಿರಿಯ ಪ್ರಾರ್ಧಮಿಕ ಶಾಲೆ ನಂಬರ 7 ಶಾಲೆಯಲ್ಲಿ ಡೆಂಘೀ ನಿಯಂತ್ರಣಕ್ಕಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಶನಿವಾರ ಏರ್ಪಡಿಸಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಮ್ಮ ಮನೆಗಳ ಅಕ್ಕಪಕ್ಕದಲ್ಲಿ ಕಸದ ರಾಶಿಯನ್ನು ಹಾಕುವ ಬದಲು ಅದನ್ನು ನಗರಸಭೆಯವರು ನಿಗದಿಪಡಿಸಿರುವ ಕಸದ ಡಬ್ಬಿಗಳಿಗೆ ಹಾಕಬೇಕು, ಮನೆಯ ಮುಂದೆ ಹಾಗೂ ಹಿಂದೆ ಇರುವ ಗಟಾರಗಳಲ್ಲಿ ಬಹುದಿನಗಳ ಕಾಲ ನೀರು ನಿಂತಿದ್ದರೆ, ಅದನ್ನು ಮುಂದೆ ಕಳುಹಿಸಲು ಮುಂದಾಗಬೇಕು ಅಥವಾ ನಗರಸಭೆಯ ಅಧಿಕಾರಿಗಳ ಚುನಾಯಿತ ಸದಸ್ಯರ ಗಮನಕ್ಕೆ ತಂದು ಕ್ರಮ ಕೈಗೊಳ್ಳುವ ಮೂಲಕ ಸಹಕರಿಸಬೇಕು, ಮನೆಗಳಲ್ಲಿ ಸಂಗ್ರಹಿಸಿಟ್ಟಿರುವ ನೀರಿನಲ್ಲಿ ಧೂಳು ಬೀಳದಂತೆ ಎಚ್ಚರ ವಹಿಸಬೇಕು ಹಾಗೂ ಮಕ್ಕಳು ಕಲುಷಿತ ನೀರನ್ನು ಕುಡಿಯದಂತೆ ನೂಡಿಕೊಳ್ಳಬೇಕು, ಕಾಯಿಸಿ ಆರಿಸಿದ ನೀರನ್ನು ಮಕ್ಕಳಿಗೆ ಕುಡಿಸಬೇಕು.
ಮಕ್ಕಳಿಗಾಗಲಿ ಅಥವಾ ಪಾಲಕರಿಗಾಗಲಿ ಜ್ವರದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೆ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದು, ಮಕ್ಕಳ ಮಾರಿಯಾಗಿರುವ ಡೆಂಘೀ ಜ್ವರ ನಿರ್ಮೂಲನೆ ಮಾಡಲು ಮುಂದಾಗಬೇಕೆಂದು ಎಸ್.ಎಚ್. ಮೇಟಿ ತಿಳಿಸಿದರು.
ಶಿಕ್ಷಣ ಸಂಯೋಜಕರಾದ ಎಫ್.ಎಚ್. ಚಮಟಿ ಕಾರ್ಯಕ್ರಮದ ಕುರಿತು ಉಪನ್ಯಾಸ ನೀಡಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಎಸ್ಡಿಎಂಸಿ ಅಧ್ಯಕ್ಷ ಕುಬೇರಪ್ಪ ಕೊಂಡಜ್ಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಆರ್.ಜಿ. ಕರೂರು ಸ್ವಾಗತಿಸಿದರು. ಪಿ.ಎ. ಹವಳದ ನಿರೂಪಿಸಿದರು. ಜೆ.ಜಿ. ಗವೆನವರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

