ಹಾವೇರಿ

ಡೆಂಘೀ ನಿಯಂತ್ರಣಕ್ಕೆ ಸೌಲಭ್ಯ ಕಲ್ಪಿಸಿ

Published On :

ಶಿಗ್ಗಾಂವಿ: ಜಿಲ್ಲೆಯಲ್ಲಿ ಡೆಂಘೀ ಜ್ವರದಿಂದ ಬಳಲುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರೋಗ ತಡೆಗಟ್ಟಲು ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡಲು ಸರ್ಕಾರ ಜಿಲ್ಲಾ ಆಸ್ಪತ್ರೆಯಲ್ಲಿ ಬ್ಲೇಡ್ ಕಾಂಫೋನೆಂಟ್ ಸಪರೇಟಿಂಗ್ ಯುನಿಟ್, ಶಿಗ್ಗಾಂವಿ ತಾಲೂಕು ಆಸ್ಪತ್ರೆಯಲ್ಲಿ ಅಟೋ ಅನಾಲೈಜರ್(ಪ್ಲೇಟ್‌ಲೇಟ್ಸ್)ದ ಸೌಲಭ್ಯ ಕಲ್ಪಿಸಬೇಕು ಎಂದು ಶಾಸಕ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.
ಶನಿವಾರ ಶರೀಫ ಭವನದ ಆವರಣದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಮತ್ತು ವಿವಿಧ ಇಲಾಖೆಗಳ ಆಶ್ರಯದಲ್ಲಿ ನಡೆದ ಡೆಂಘೀ ನಿಯಂತ್ರಣ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಡೆಂಘೀ ಬಂದ ರೋಗಿಗಗಳು ಚಿಕಿತ್ಸೆಗಾಗಿಯೇ ಬೆಳಗಾವಿ, ಹುಬ್ಬಳಿ-ಧಾರವಾಡ ಸೇರಿದಂತೆ ದೂರದ ನಗರಗಳಿಗೆ ತೆರಳಬೇಕಾಗಿದೆ.
ಯುನಿಟ್ ಸ್ಥಾಪಿಸಿ: ಸರ್ಕಾರ ತಕ್ಷಣ ಹಾವೇರಿಯಲ್ಲಿ ಬ್ಲೇಡ್ ಕಾಂಫೋನೆಂಟ್ ಸಪರೇಟಿಂಗ್ ಯುನಿಟ್ ಸ್ಥಾಪಿಸಿ ಜಿಲ್ಲೆಯ ಎಲ್ಲ ತಾಲೂಕಿಗೂ ಅನುಕೂಲವಾಗುವಂತೆ ಸೌಲಭ್ಯ ಕಲ್ಪಿಸಬೇಕು. ಇದರಿಂದ ಜಿಲ್ಲೆ ಬಡ ಕೂಲಿ ಕಾರ್ಮಿಕರು, ಬಡ ಕೃಷಿ ಕುಟುಂಬದವರಿಗೆ ಆರ್ಥಿಕ ನೆರವು ನೀಡುವ ಜತೆಗೆ ರೋಗ ನಿರ್ಮೂಲನೆಗೂ ಇದು ಸಹಕಾರಿಯಾಗಲಿದೆ ಎಂದರು.
ಇಬ್ಬರು ಬಲಿ: ಶಿಗ್ಗಾಂವಿ ತಾಲೂಕಿನಲ್ಲಿ ಶಂಕಿತ ಡೆಂಘೀ ಎಂದು ಸುಮಾರು 70 ರೋಗಿಗಳನ್ನು ಗುರುತಿಸಲಾಗಿದೆ. ಈಗಾಗಲೆ ಡೆಂಘೀಯಿಂದ ಇಬ್ಬರು ಮೃತಪಟ್ಟಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಈಗಾಗಲೇ 14 ಜನರು ಚಿಕಿತ್ಸೆ ಪಡೆಯತ್ತಿದ್ದಾರೆ ಎಂದು ವಿವರಣೆ ನೀಡಿದ ಬೊಮ್ಮಾಯಿ, ಜಿಲ್ಲೆಯಲ್ಲಿ ಈಗಾಗಲೆ ಸುಮಾರು 410 ಜನ ಡೆಂಘೀ ಶಂಕಿತ ರೋಗಿಗಳೆಂದು ಗುರುತಿಸಲಾಗಿದೆ.
ಅನಾಲೈಜರ್ ಕಲ್ಪಿಸಿ: ತಾಲೂಕು ಆಸ್ಪತೆಯಲ್ಲಿ ಅಟೋ ಅನಾಲೈಜರ್ (ಪ್ಲೇಟ್‌ಲೇಟ್ಸ್)ದ ಸೌಲಭ್ಯ ಕಲ್ಪಿಸಿದಲ್ಲಿ ಶಂಕಿತ ಡೆಂಘೀ ರೋಗಿಗಳಿಗೆ ಸೂಕ್ತ ಸಮಯಕ್ಕೆ ಸ್ಥಳೀಯವಾಗಿ ಚಿಕಿತ್ಸೆ ನೀಡಲು ಸಾದ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟ ಬೊಮ್ಮಾಯಿ, ಡೆಂಘೀ ಜ್ವರದ ಜಾಗೃತಿ ಮೂಡಿಸಲು ಜಾಥಾ ತಾಲೂಕಿನಾದ್ಯಂತ ಸಂಚರಿಸಿ ಜನರಲ್ಲಿ ಅರಿವು ಮೂಡಿಸಲಿದೆ ಎಂದರು.
ಸಾಂಕ್ರಾಮಿಕ ರೋಗದಿಂದ ಜಿಲ್ಲೆಯ ಜನತೆ ತತ್ತರಿಸಿದ್ದಾರೆ. ಸರ್ಕಾರ ಗಮನಿಸಿ ಆಸ್ಪತ್ರೆಗಳಿಗೆ ಸೌಲಭ್ಯ ಕಲ್ಪಿಸುವ ಮೂಲಕ ವೈದ್ಯರಿಗೆ ಹೆಚ್ಚು ಚಿಕಿತ್ಸೆ ನೀಡುವ ಶಕ್ತಿ ತುಂಬಬೇಕು. ಹೆಮ್ಮಾರಿಯಾಗಿ ಕಾಡುತ್ತಿರುವ ಡೆಂಘೀ ರೋಗ ತಡೆಗಟ್ಟಲು ನಿರ್ಲಕ್ಷ್ಯ ಮಾಡದೇ, ತುರ್ತು ಪೂರಕ ಕ್ರಮಕೈಗೊಳ್ಳುವಂತೆ ಬೊಮ್ಮಾಯಿ ಮನವಿ ಮಾಡಿದರು.
ತಹಸೀಲ್ದಾರ್ ಎಸ್. ಚೌಗಲೆ, ತಾಪಂ ಅಧ್ಯಕ್ಷೆ ಉಷಾ ಬಿಳೆಕುದರಿ, ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಾ ಆಡಿನ, ಸದಸ್ಯರಾದ ಬಿ.ಟಿ. ಇನಾಮತಿ, ಸಿ.ಎಸ್. ಪಾಟೀಲ, ಶಶಿಧರ ಹೊಣ್ಣನ್ನವರ, ದೇವಣ್ಣ ಚಾಕಲಬ್ಬಿ, ನಿಂಗಪ್ಪ ಹರಿಜನ, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಎಚ್. ಹನುಮಂತಪ್ಪ, ಮಧನ ಘೋಡಕೆ, ತಾಲೂಕು ಆರೋಗ್ಯ ನೋಡಲ್ ಅಧಿಕಾರಿ ಎಂ.ಎಲ್. ಪಾಟೀಲ, ಎಸ್.ಎಫ್. ಹಗಲೂರ, ಬಸವರಾಜ ಕನ್ನಕನವರ, ಎಂ.ಎಸ್. ಬಗ್ಗೊಂಡಿ, ಜಿ.ಎಲ್. ಕಮತರ, ಅಶೋಕ ಅಮಾತನವರ, ಎಂ.ಕೆ. ಕೆಮ್ಮನಕೇರಿ, ಜಿ.ಎಸ್. ಹಗಲೂರ, ತಾಪಂ ಇಓ ರೇವಣಪ್ಪ, ಪುರಸಭೆ ಮುಖ್ಯಾಧಿಕಾರಿ ಎಸ್.ಎಚ್. ನಾಯ್ಕರ, ಸಿಡಿಪಿಓ ಜಿ. ಪದ್ಮಾವತಿ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.