ಪ್ಲಾಸ್ಟಿಕ್ ತಂತ್ರಜ್ಞಾನದ ವಿಮಾನ ನಿರ್ಮಾಣಕ್ಕೆ ಯತ್ನ
ಹಾವೇರಿ: ವಿಮಾನಗಳು ಅತಿ ಹೆಚ್ಚು ಸುರಕ್ಷಿತ, ವೇಗವಾಗಿ ಹಾರಾಡಲಿ ಎಂಬ ಉದ್ದೇಶದಿಂದ ಲೋಹದ ಉಪಕರಣಗಳ ಬದಲಾಗಿ ಪ್ಲಾಸ್ಟಿಕ್ ತಂತ್ರಜ್ಞಾನ ಅಳವಡಿಸಿ ಪರಿಸರಕ್ಕೆ ಹಾನಿಯಾಗದಂತೆ ಭಾರವಿಲ್ಲದ ಬಿಡಿಭಾಗಗಳ ಜೋಡಣೆಯತ್ತ ವಿಮಾನ ನಿರ್ಮಾಣ ಪ್ರಯತ್ನ ನಡೆದಿದೆ ಎಂದು ಬೆಂಗಳೂರು ಹಿಂದೂಸ್ತಾನ್ ವಿಮಾನ ಕಾರ್ಖಾನೆ ವೈಜ್ಞಾನಿಕ ಅಧಿಕಾರಿ ಅನಿಲಕುಮಾರ ರೇವಣಕರ ತಿಳಿಸಿದರು.
ಇಲ್ಲಿನ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜು, ಧಾರವಾಡ ಕರ್ನಾಟಕ ವಿವಿ ಹಾಗೂ ಬೆಳಗಾವಿ ರಾಣಿ ಚನ್ನಮ್ಮ ವಿವಿ ವ್ಯಾಪ್ತಿಯ ವಿವಿಧ ಮಹಾವಿದ್ಯಾಲಯಗಳ ರಸಾಯನಶಾಸ್ತ್ರ ಉಪನ್ಯಾಸಕರಿಗೆ ಭಾನುವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಪಾಲ್ಗೊಂಡು 22ನೇ ರಸಾಯನಶಾಸ್ತ್ರ ಪ್ರಾಧ್ಯಾಪಕರ ಸಮ್ಮೇಳನ ಉದ್ಘಾಟಿಸಿ ಮಿಶ್ರಲೋಹಗಳ ವಿಷಯ ಕುರಿತು ಮಾತನಾಡಿದರು.
ರಾಡಾರ್ನಿಂದ ಗುರುತಿಸಲಾಗದಂತಹ ಶಕ್ತಿಯೊಂದನ್ನು ವಿಮಾನಕ್ಕೆ ಅಳವಡಿಸುವ ಕುರಿತು ಸಂಶೋಧನೆ ಆರಂಭಗೊಂಡಿದೆ. 2-3 ವರ್ಷಗಳಲ್ಲಿ ಮುಂದುವರಿದ ರಾಷ್ಟ್ರಗಳೊಂದಿಗೆ ಭಾರತೀಯ ವಿಮಾನ ತಯಾರಿಕಾ ಸಂಸ್ಥೆಗಳು ಪ್ರತಿಸ್ಪರ್ಧಿಗಳಾಗಿ ಎದ್ದು ನಿಲ್ಲಬಲ್ಲವು ಎಂದರು.
ಪ್ರೊ. ಜಿ.ಎಸ್. ಕಲ್ಬುರ್ಗಿ, ಪ್ರೊ. ಎಸ್.ಬಿ. ಬಾರಿಗಿಡದ, ಪ್ರೊ. ಸಿ.ಎನ್. ನಾಯ್ಕರ, ಮಲ್ಲಣ್ಣ ಕೊಳ್ಳಿ, ಜಿ.ಎಚ್. ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ವಿ.ಬಿ. ಕುರುಬಗೊಂಡಶೆಟ್ಟರ ಉಪಸ್ಥಿತರಿದ್ದರು.
ಪ್ರಾಚಾರ್ಯ ಡಾ. ಬಿ.ಸಿ. ಬನ್ನೂರ ಅಧ್ಯಕ್ಷತೆ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

