ಕಾಂಕ್ರೀಟ್ ರಸ್ತೆ ಕಾಮಗಾರಿಗೆ ರು. 5 ಕೋಟಿ
ಶಿಗ್ಗಾಂವಿ: ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನಿಡುವ ಉದ್ದೇಶದಿಂದ ನಬಾರ್ಡ್ ಯೋಜನೆಯಡಿ ಪಟ್ಟಣದಲ್ಲಿರುವ ಎಲ್ಲ ವಾರ್ಡುಗಳ ರಸ್ತೆಗಳನ್ನು ಕಾಂಕ್ರೀಟ್ಮಯಗೊಳಿಲಸು ಸರ್ಕಾರದಿಂದ ರು. 5 ಕೋಟಿ ಮಂಜೂರಾಗಿದ್ದು, ಸದ್ಯದಲ್ಲೇ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಸಂಗನಬಸವ ಸಭಾಭವನದಲ್ಲಿ ನಡೆದ ಪುರಸಭೆ ನೂತನ ಸದಸ್ಯರಿಗೆ ಏರ್ಪಡಿಸಿದ್ದ ಅಭಿನಂಧನಾ ಸಮಾರಂಭದಲ್ಲಿ ನೂತನವಾಗಿ ಆಯ್ಕೆಯಾಗಿರುವ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಬಿಜೆಪಿಗೆ ಗೆಲವು: ಸೋತವರು ಧೃತಿಗೆಡಬೇಡಿ. ಧೈರ್ಯದಿಂದ ಮುನ್ನುಗ್ಗಿ, ಜನರ ಮನಸ್ಸಿನಲ್ಲಿ ವಿಶ್ವಾಸ ಗಳಿಸಿ, ಸೋಲಿನ ನೈತಿಕ ಹೊಣೆ ನನಗೆ ಬಿಡಿ. ಬಹುಮತಕ್ಕೆ ಈಗಾಗಲೆ ಒಬ್ಬ ಪಕ್ಷೇತರ ಅಭ್ಯರ್ಥಿ ಸೇರ್ಪಡೆಯಾಗಿದ್ದು, ಇನ್ನೆರಡು ಅಭ್ಯರ್ಥಿಗಳ ಆವಶ್ಯಕತೆಯಿದೆ. ಮತದಾರರು ನನ್ನ ಕೈ ಬಿಡಲಿಲ್ಲ ಎಂದರು.
ಸಮಾಜ ಸೇವೆಯಲ್ಲಿ ತೊಡಗಿ: ಬರುವ ಚುನಾವಣೆಯಲ್ಲಿ ಜನತೆ ಬಿಜೆಪಿ ಕೈ ಹಿಡಿಯುತ್ತಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಗೆಲವು ಬಿಜೆಪಿಯದ್ದೇ ಎಂದು ಧೈರ್ಯ ತುಂಬಿ, ಚುನಾಯಿತ ಸದಸ್ಯರಿಗೆ ಸಾಮಾಜಿಕ ಸೇವೆಯಲ್ಲಿ ನೀವು ಮುನ್ನುಗ್ಗಿ ನಿಮ್ಮೊಂದಿಗೆ ನಾನಿದ್ದೇನೆ. ಸೋಲು ಮತ್ತು ಗೆಲವನ್ನು ಸರಿಸಮಾನವಾಗಿ ಹಂಚಿಕೊಂಡು ಸಾಮಾಜಿಕ ಸೇವೆಯಲ್ಲಿ ಸೋತವರು ಕೂಡಾ ಸಮಾಜದಲ್ಲಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭ 8ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ಸಂತೋಷ ಮೊರಬದ ಸಚಿವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಈ ಸಂದರ್ಭ ತಾಲೂಕು ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ತಾಪಂ ಅಧ್ಯಕ್ಷ ಉಷಾ ಬಿಳೆಕುದರಿ, ಜಿಪಂ ಸದಸ್ಯ ಬಿ.ಟಿ. ಇನಾಮತಿ, ಸಿ.ಎಸ್. ಪಾಟೀಲ್, ಸರೋಜಮ್ಮ ಆಡಿನ, ಎಸ್.ಕೆ. ಅಕ್ಕಿ, ಮುಖಂಡರಾದ ಗಂಗಣ್ಣ ಸಾತಣ್ಣವರ, ಪುರಸಭೆ ಸದಸ್ಯರಾದ ಸುಭಾಸ ಚವ್ಹಾಣ, ಶ್ರೀಕಾಂತ ಬುಳ್ಳಕ್ಕನವರ, ನಾಮ ನಿರ್ದೇಶಿತ ಸದಸ್ಯ ಆನಂದ ದಾನಿ ಹಾಗೂ ಇನ್ನಿತರ ಕಾರ್ಯಕರ್ತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

