ಹಾವೇರಿ

ಗ್ರಾಮೀಣ ಕ್ರೀಡೆ ಆಯೋಜನೆ ಶ್ಲಾಘನೀಯ

Published On :

ಹಾನಗಲ್ಲ: ರೈತ ಸಮುದಾಯ ಬರಗಾಲ ಹಾಗೂ ಆರ್ಥಿಕ ಸಮಸ್ಯೆ ಮಧ್ಯೆದಲ್ಲಿಯೂ ಕೂಡಾ ಗ್ರಾಮೀಣ ಕ್ರೀಡೆಗಳನ್ನು ಹಬ್ಬವಾಗಿ ಸ್ವೀಕರಿಸಿ ಉಳಿಸಿ-ಬೆಳೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹಾವೇರಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಅಭಿಪ್ರಾಯಪಟ್ಟರು.
ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ಏರ್ಪಡಿಸಿದ್ದ ಖಾಲಿ ಘಾಡಾ ಓಡಿಸುವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಕೃಷಿಯ ಬಿಡುವಿನ ವೇಳೆ ಬೇಸಿಗೆ ಸಮಯದಲ್ಲಿ ರೈತ ಸಮುದಾಯ ದನ ಬೆದರಿಸುವ, ಘಾಡಾ ಓಡಿಸುವ ಮುಂತಾದ ಪ್ರಕ್ರಿಯೆಗಳಲ್ಲಿ ತೊಡಗಿ ತನ್ನ ಕೃಷಿ ಸಂಗಾತಿಗಳೊಂದಿಗೆ ಸಂತಸ ಹಂಚಿಕೊಳ್ಳುವ ಸಂದರ್ಭ, ಇದರಲ್ಲಿ ಸಾಹಸ ಪ್ರದರ್ಶಿಸುವ, ರೈತರೆಲ್ಲ ಒಂದೆಡೆ ಸೇರಿ ಸುಖ-ದುಃಖಗಳನ್ನು ವಿನಿಮಯ ಮಾಡಿಕೊಳ್ಳುವ ಕಾರ್ಯದಲ್ಲಿ ಸಾರ್ವಜನಿಕರ ಪ್ರೋತ್ಸಾಹ ಅತ್ಯಗತ್ಯ ಎಂದರು. ವಿವಿಧ ಜಿಲ್ಲೆಗಳಿಂದ 60 ಜೋಡಿಗೂ ಹೆಚ್ಚು ಹೋರಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಸಾಹಸ ಪ್ರದರ್ಶಿಸಿದವು. ಹೋತನಹಳ್ಳಿ ಶಂಕರಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಚಂದ್ರಪ್ಪ ಮುಗಳಿ, ಸುಭಾಸ ದುಂಡಣ್ಣನವರ, ಮಂಜಣ್ಣ ತಡಸದ, ಶಂಕ್ರಪ್ಪ ದುಂಡಣ್ಣನವರ, ರಮೇಶ ಕಳಸದ, ಶ್ರೀಕಾಂತ ದುಂಡಣ್ಣನವರ, ಬಸವರಾಜ ಅಡವಿ, ಶಂಬು ದುಂಡಣ್ಣನವರ, ವಿದ್ಯಾಸಾಗರ ಕಳಸೂರು, ಭರಮಣ್ಣ ಬಣಕಾರ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.