ಅವಕಾಶ ಸದ್ಬಳಕೆ ಮಾಡಿಕೊಳ್ಳಿ: ಶ್ರೀಗಳು
ಹಾವೇರಿ: ಉತ್ತಮ ಕನಸು ಕಾಣುವುದು ಉಜ್ವಲ ಭವಿಷ್ಯದ ದ್ಯೋತಕ. ಆದರೆ, ಕನಸು ನನಸಾಗಲು ಯೋಜನಾಬದ್ಧ ತಪಸ್ಸು ಅವಶ್ಯ. ಅವಕಾಶಗಳೆಂದೂ ಹುಡುಕಿಕೊಂಡು ಬರುವುದಿಲ್ಲ. ಅವಕಾಶಗಳನ್ನು ನಾವೇ ಹುಡುಕಿಕೊಂಡು ಹೋಗಿ ಸದ್ಬಳಕೆ ಮಾಡಿಕೊಳ್ಳಬೇಕು. ಅಂದಾಗ ಗುರಿ ಸಾಧಿಸಲು ಸಾಧ್ಯ ಎಂದು ಹೊಸರಿತ್ತಿ ಗುದ್ದಲಿಸ್ವಾಮಿ ಮಠದ ಗುದ್ದಲೀಶ್ವರ ಶ್ರೀಗಳು ಕರೆ ನೀಡಿದರು.
ಹೊಸರಿತ್ತಿ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಅತಿಥಿಗಳಾಗಿ ಭಾಗವಹಿಸಿದ್ದ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಧರ್ಮದರ್ಶಿ ಬಿ.ಜಿ. ಗೌರಿಮನಿ ಮಾತನಾಡಿ, ವಿದ್ಯಾರ್ಥಿ ಹಂತದಲ್ಲಿ ಎಸ್ಸೆಸ್ಸೆಲ್ಸಿ ಪ್ರಮುಖ ಘಟ್ಟವಾಗಿದೆ. ವೇಳೆ ಹಾಳು ಮಾಡದೇ ಸದುಪಯೋಗಪಡಿಸಿಕೊಂಡಲ್ಲಿ ಭವಿಷ್ಯ ಉಜ್ವಲಗೊಳ್ಳಲು ಸಾಧ್ಯ ಎಂದರು. ಇದೇ ಸಂದರ್ಭ ರಾಜ್ಯ ಡಾಡ್ಜಬಾಲ್ ತಂಡದಲ್ಲಿ ಭಾಗವಹಿಸಿ ಇತ್ತೀಚೆಗೆ ನಾಸಿಕದಲ್ಲಿ ನಡೆದ ರಾಷ್ಟ್ರೀಯ ಡಾಡ್ಜಬಾಲ್ನಲ್ಲಿ ಪ್ರಥಮ ಸ್ಥಾನ ಪಡೆದ ಸಂಸ್ಥೆ ವಿದ್ಯಾರ್ಥಿಗಳಾದ ಅಕ್ಷಯ ಮತ್ತೂರ, ಮಹಾಂತೇಶ ಚನ್ನಾಪುರ ಮತ್ತು ಮಾರ್ದದರ್ಶಿ ಶಿಕ್ಷಕ ಎಂ.ಎಸ್. ಮರಿಗೌಡ್ರ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಾದ ಕುಮಾರ ಹೊಸಮನಿ, ಫಕ್ಕಿರೇಶ ನಾಗರಳ್ಳಿ, ಬಸವರಾಜ ನಾಯಕ, ರಾಕೇಶ ಹೊಸಮನಿ ಅಭಿಪ್ರಾಯ ವ್ಯಕ್ತಪಡಿಸಿದರು. ಕ್ರೀಡೆ, ವಿಜ್ಞಾನ, ಸೇವಾದಳ, ಸ್ಕೌಟ್ಸ್, ಕೃಷಿ ವಿಭಾಗಗಳಲ್ಲಿ ವಿವಿಧ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು. ಆರ್.ಎಸ್. ಪಾಟೀಲ ಸ್ವಾಗತಿಸಿದರು. ಎನ್.ಎಂ. ಹಸರಡ್ಡಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

