ಚ್ಯುತಿ ಬರದಂತೆ ಬದುಕುವುದು ಕಷ್ಟ
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 24
ವ್ಯಕ್ತಿಗಳು ಸಾಮಾಜಿಕವಾಗಿ ಹೆಸರು ಗಳಿಸುವುದು ಸುಲಭ. ಆದರೆ, ಹೆಸರಿಗೆ ಚ್ಯುತಿ ಬಾರದಂತೆ ಉಳಿಸಿಕೊಂಡು ಹೋಗುವುದು ಕಷ್ಟದ ಕೆಲಸ ಎಂದು ಧಾರವಾಡ ಕವಿವಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಶೌಖತ್ ಅಜೀಂ ಅಭಿಪ್ರಾಯಪಟ್ಟರು.
ನಗರದ ಹೊರವಲಯದ ಕೆರಿಮತ್ತಿಹಳ್ಳಿಯ ಕವಿವಿ ರಾಜೀವಗಾಂಧಿ ಸ್ನಾತಕೋತ್ತರ ಕೇಂದ್ರದ ಸಮಾಜಶಾಸ್ತ್ರ ವಿಭಾಗದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಮಾಜಿಕ ಮಾರುಕಟ್ಟೆ ವಿಷಯ ಕುರಿತು ಉಪನ್ಯಾಸ ನೀಡಿದರು.
ಪ್ರಸ್ತುತ ಮಾರುಕಟ್ಟೆಯಲ್ಲಿ ನೈತಿಕತೆ ಇಲ್ಲ. ವ್ಯವಹಾರಗಳು ಸರಳತೆಯಿಂದ ಕಠಿಣತೆಯೆಡೆಗೆ ಸಾಗುತ್ತಿರುವುದರಿಂದ ಆಧುನಿಕ ಜಗತ್ತಿನಲ್ಲಿ ಸಾಮಾಜಿಕ ಮೌಲ್ಯಗಳು ಕುಸಿಯುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಮಾರುಕಟ್ಟೆಯಲ್ಲಿದ್ದ ವಿಷಯವನ್ನು ಇದ್ದಂತೆ ಹೇಳಲು ಎದೆಗಾರಿಕೆ ಬೇಕು. ಅಂದಾಗ ಮಾತ್ರ ಮಾರುಕಟ್ಟೆ ಯಶಸ್ವಿ ಹೊಂದುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂದು ಸಾಮಾಜಿಕ ಮಾರುಕಟ್ಟೆ ತನ್ನ ಅರ್ಥ ಕಳೆದುಕೊಂಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿ ಡಾ. ಟಿ.ಎಂ. ಭಾಸ್ಕರ ಮಾತನಾಡಿ, ಸಾಮಾಜಿಕ ಮಾರುಕಟ್ಟೆಗಳು ಸಮಾಜದ ಕೊನೆಯ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತವೆ. ಮಾರುಕಟ್ಟೆಗಳ ವ್ಯವಹಾರಗಳು ಸಾಮಾನ್ಯರಿಗೆ ಅರ್ಥವಾಗುವಂತೆ ಸರಳತೆ ಹಾಗೂ ನೈತಿಕತೆಯಿಂದ ಕೂಡಿರಬೇಕೆಂದರು.
ಸಾಮಾಜಿಕ ಕಾರ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ಎಫ್. ಪೂಜಾರ ಮಾತನಾಡಿದರು. ಈ ಸಂದರ್ಭ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ವೀರೇಶ ಹಿರೇಮಠ, ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಅನಿತಾ ಹಾಲಮತ ಮಾತನಾಡಿದರು. ವಿವಿಧ ವಿಭಾಗದ ಪ್ರಾಧ್ಯಾಪಕರಾದ ಕೀರ್ತಿ ಚಪ್ಪರಮನಿ, ಎಂ.ಎಚ್. ಹುಲ್ಲೂರ, ಜ್ಯೋತಿ, ಆರತಿ, ನಿಖಿಲ್ ಕುಲಕರ್ಣಿ, ಎಸ್.ಎಸ್. ಆಧೋನಿ, ವಿ.ಎಸ್. ಕೆಲೂರ ಹಾಗೂ ವಿವಿಧ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಎಚ್.ಡಿ. ಮಾದರ ಪ್ರಾರ್ಥಿಸಿದರು. ಮಂಜುನಾಥ ಹೂಗಾರ ಸ್ವಾಗತಿಸಿದರು. ಪ್ರವೀಣ ಸಿದ್ದೇನವರ ನಿರ್ವಹಿಪಿಸಿದರು. ಬಿ.ಕೆ. ಶರಣಪ್ಪ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

