ಹಾವೇರಿ

ಕಾರು ಡಿಕ್ಕಿ: ಬೈಕ್ ಸವಾರ ಸಾವು

Published On :

ಹಾವೇರಿ: ವೇಗವಾಗಿ ಚಲಿಸುತ್ತಿದ್ದ ಕಾರೊಂದು ಮುಂದೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು ಹಿಂಬದಿಯಲ್ಲಿ ಕುಳಿತಿದ್ದ ಅವನ ಪತ್ನಿ ಗಾಯಗೊಂಡ ಘಟನೆ ರಾಣಿಬೆನ್ನೂರ ತಾಲೂಕಿನ ಹಲಗೇರಿ ಬಳಿ ಜರುಗಿದೆ. ಮೃತನನ್ನು ಮುಕ್ತಿಯಾರ ಸೈಪುಲ್ಲಾಸಾಬ (30) ಎಂದು ಗುರುತಿಸಲಾಗಿದೆ. ಆತನ ಪತ್ನಿ ಗೌಸಿಯಾ ಬಾನು ಮುಕ್ತಿಯಾರ ಗಾಯಗೊಂಡಿದ್ದಾರೆ. ಈ ಕುರಿತಂತೆ ಗೌಸಿಯಾ ಬಾನು ಕಾರು ಚಾಲಕ ಉಮೇಶ ಮಲ್ಲಿಕಾರ್ಜುನ ಪೂಜಾರ ವಿರುದ್ಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.

ಟೆಂಪೋ ಡಿಕ್ಕಿ: ಬೈಕ್ ಸವಾರರಿಗೆ ಗಾಯ
ಹಾವೇರಿ: 
ಟೆಂಪೋ ಡಿಕ್ಕಿ ಹೊಡೆದ ಕಾರಣ ಬೈಕ್‌ನಲ್ಲಿದ್ದ ಸವಾರರಿಬ್ಬರೂ ಗಾಯಗೊಂಡ ಘಟನೆ ತಾಲೂಕಿನ ಗುತ್ತಲದಲ್ಲಿ ಜರುಗಿದೆ. ಘಟನೆಯಲ್ಲಿ ವಿರೂಪಾಕ್ಷಪ್ಪ ಶೇಖಪ್ಪ ಸಣ್ಣಪ್ಪನವರ ಹಾಗೂ ನಿಂಗಪ್ಪ ರುದ್ರಪ್ಪ ಹಿತ್ತಲಮನಿ ಗಾಯಗೊಂಡಿದ್ದು, ಮಹೇಂದ್ರ ಟೆಂಪೋ ಚಾಲಕ ಸಿಕಂದರ ಮೌಲಾಸಾಬ ಬಳಿಗಾರ ವಿರುದ್ಧ ನಿಂಗಪ್ಪ ರುದ್ರಪ್ಪ ಹಿತ್ತಲಮನಿ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಸಂಹಿತೆ ಉಲ್ಲಂಘನೆ: ದೂರು
ಹಾವೇರಿ: 
ನಗರದ ಮುನ್ಸಿಪಲ್ ಮೈದಾನದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ ನಡೆಯುವ ಸಂದರ್ಭದಲ್ಲಿ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದಾಗಲೂ ಸೋಮಣ್ಣ ಬೇವಿನಮರದ, ನಾಗೇಂದ್ರ ಕಡಕೋಳ, ವಿರೂಪಾಕ್ಷಪ್ಪ ಬಳ್ಳಾರಿ ಹಾಗೂ ಪ್ರಕಾಶಗೌಡ ಪಾಟೀಲ ಸಮಾವೇಶದಲ್ಲಿ ಭಾಗವಹಿಸಿದ ಕಾರ್ಯಕರ್ತರಿಗೆ ಊಟ ಹಾಗೂ ನೀರನ್ನು ವಿತರಿಸಿ ನೀತಿಸಂಹಿತೆ ಉಲ್ಲಂಘಿಸಿದ್ದಾರೆ. ಈ ಕುರಿತಂತೆ ತಹಸೀಲ್ದಾರ ಕೆ. ಶಿವಲಿಂಗು ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.