ಹಾವೇರಿ

ಪುಣ್ಯ ಕಾರ್ಯದಲ್ಲಿ ತೊಡಗಿ: ಹನುಮಂತಪ್ಪ ಚಳಗೇರಿ

Published On :

ಹಿರೇಕೆರೂರು: ಸಮಾಜದಲ್ಲಿ ಬದುಕಿರುವ ಎಲ್ಲ ಮನುಷ್ಯರು ಕೇವಲ ಪುಣ್ಯದ ಫಲ ನೀರಿಕ್ಷಿಸುತ್ತೇವೆ. ಆದರೆ, ಯಾರೊಬ್ಬರೂ ಪುಣ್ಯ ಕಾರ್ಯಗಳತ್ತ ಮನಸ್ಸು ಮಾಡುವುದಿಲ್ಲ. ಪಾಪ ಕಾರ್ಯಗಳಿಂದ ಪ್ರಾಯಶ್ಚಿತ್ತದ ಮೂಲಕ ಪುಣ್ಯ ಮಾಡುವರೋ, ಶಿವಧ್ಯಾನದಲ್ಲಿ ತೊಡಗುವರೋ ಅವರೇ ದೇವರು. ಅವರನ್ನು ಶಿವನೂ ಮೆಚ್ಚುತ್ತಾನೆ ಎಂದು ಮುಖಂಡ ಹನುಮಂತಪ್ಪ ಚಳಗೇರಿ ನುಡಿದರು.
ತಾಲೂಕಿನ ಕಡೂರು ಗ್ರಾಮದ ಕಲ್ಲೇಶ್ವರ ದೇವಸ್ಥಾನ ಸಮಿತಿ ಶಿವರಾತ್ರಿ ಅಂಗವಾಗಿ ಆಯೋಜಿಸಿದ್ದ ಶಿವ ಪುರಾಣದಲ್ಲಿ ಪ್ರವಚನ ನೀಡಿದರು.
ಆಧುನಿಕ ಸಮಾಜದಲ್ಲಿ ಮಾನವ ಕೇವಲ ರಾಗ ದ್ವೇಷ-ಅಸೂಯೆ, ಅತ್ಯಾಚಾರ ಇನ್ನಿತರ ದುರ್ಗುಣಗಳಿಂದ ಸಮಾಜ ತಲ್ಲಣಗೊಳಿಸಿದ್ದಾನೆ. ದಾನ, ಧರ್ಮ, ನಿಸ್ವಾರ್ಥ, ಪ್ರಾಮಾಣಿಕತೆ ಮೊದಲಾದ ಶಿವತತ್ವಗಳನ್ನು ಅಳವಡಿಸಿಕೊಂಡಾಗಲೇ ನೆಮ್ಮದಿ ಕಾಣಲು ಸಾಧ್ಯ ಎಂದರು. ಮಾನವ ಜನ್ಮ ದೊಡ್ಡದು. ಶುದ್ಧ ನಡೆ-ನುಡಿ, ಉತ್ತಮ ಆಚಾರ-ವಿಚಾರಗಳು ಮನುಷ್ಯರಿಗೆ ಭೂಷಣ ಎಂದರು.
ಬಳಿಕ ಸಂಗೀತ ಕಾರ್ಯಕ್ರಮ ಜರುಗಿತು. ಕಾಳಿಕಾ ದೇವಿ ಸಂಗೀತ ಪಾಠಶಾಲೆ ವಿದ್ಯಾರ್ಥಿನಿಯರಾದ ಶಿಲ್ಪಾ, ಪ್ರಿಯಾಂಕಾ ಇತರರು ಶಿವನಾಮ, ಶರಣರ ವಚನಗಳನ್ನು ಸುಶ್ರಾವ್ಯವಾಗಿ ಹಾಡಿ ಸಂಗೀತ ಸುಧೆ ಹರಿಸಿದರು.
ಈ ಸಂದರ್ಭ ಕಸಾಪ ರಟ್ಟಿಹಳ್ಳಿ ಘಟಕದ ಅಧ್ಯಕ್ಷ ಸೋಮಶೇಖರ ಮೇಸ್ತಾ, ಚಂದ್ರಶೇಖರ ಅಂಗಡಿ, ಚಂದ್ರಾಧರ ಕಮ್ಮಾರ, ನರಸಿಂಹ ಅಧೋನಿ, ಇನ್ನಿತರರು ಉಪಸ್ಥಿತರಿದ್ದರು. ವಿವಿಧ ಸಮಾಜ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.