ಹುಲ್ಲತ್ತಿ: ಮತದಾರರ ಜಾಗೃತಿ ಕಾರ್ಯಕ್ರಮ
ರಾಣಿಬೆನ್ನೂರು: ತಾಲೂಕಿನ ಗುಡ್ಡಾಪುರ ಗ್ರಾಮ ಪಂಚಾಯಿತಿ ಮತ್ತು ಗ್ರಾಮದ ವಂದೇ ಮಾತರಂ ಯುವಕ ಸ್ವಯಂಸೇವಾ ಸಮಿತಿ ಕಾರ್ಯಕರ್ತರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲ್ಲತ್ತಿ ಗ್ರಾಮದಲ್ಲಿ ಮತದಾರರ ಜಾಗೃತಿಗಾಗಿ ಜಾಥಾ ನಡೆಸಿದರು. ಗುಡ್ಡಾಪುರ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಬಿ.ಎಸ್. ಪಾಟೀಲ ಮಾತನಾಡಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ನಾಗರಾಜ ಹೂಗಾರ, ಪ್ರವೀಣ ಆನ್ವೇರಿ, ಮಾರುತಿ ದೊಡ್ಮನಿ, ಮಂಜುನಾಥ ಕುರಗುಂದ, ಪರಸಪ್ಪ ಕುರಗುಂದ, ಜಗದೀಶ ಕೆರೂಡಿ, ನಿಂಬವ್ವ ಗುತ್ತಲ ಇದ್ದರು.
ಪಕ್ಷೇತರ ಅಭ್ಯರ್ಥಿ ಈಟೇರ ಮತಯಾಚನೆ
ಹಿರೇಕೆರೂರು: ವಿಧಾನಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ನಿವೃತ್ತ ಡಿವೈಎಸ್ಪಿ ಎನ್.ಎಂ. ಈಟೇರ ಅವರು ತಾಲೂಕಿನ ಚಿಕ್ಕಬೂದಿಹಾಳ, ಶಂಕರನಹಳ್ಳಿ, ಹಿರೇಬೂದಿಹಾಳ ಇನ್ನಿತರ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿ ಮತ ಯಾಚಿಸಿದರು. ತಮ್ಮ ಚಿಹ್ನೆ ಹೊಲಿಗೆ ಯಂತ್ರಕ್ಕೆ (ರಾಟಿ) ಮತ ನೀಡಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ಅಭ್ಯರ್ಥಿ ಎನ್.ಎಂ. ಈಟೇರ ಮಾತನಾಡಿ, ತಮಗೆ ತಾಲೂಕಿನಲ್ಲಿ ಜಾತ್ಯತೀತವಾಗಿ ಭಾರಿ ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.
ಸೇರ್ಪಡೆ: ಚಿಕ್ಕಬೂದಿಹಾಳ ಗ್ರಾಪಂ ಅಧ್ಯಕ್ಷ ನಾಗರಾಜ ಹರಿಜನ, ಆರ್.ಎನ್. ತೆವರಿ, ಆರ್.ಕೆ. ಸುಳಗನ್ನಿ, ಹನುಮಂತಪ್ಪ ಅಸುಂಡಿ, ಬಸವರಾಜ ಚಿನ್ನಿಕಟ್ಟಿ, ಮಂಜು ಚಿನ್ನಿಕಟ್ಟಿ, ದೇವರಾಜ ಕೆಳಗಿನಮನಿ, ಪರಮೇಶ ಪೂಜಾರ, ಪರಶುರಾಮ ಹರಿಜನ, ಸಂತೋಷ ಕೆಳಗಿನಮನಿ, ನಾಗರಾಜ ಶೆದಿಯನವರ, ಹನುಮಂತಪ್ಪ ದೊಡ್ಡಮನಿ, ಪರಮೇಶ ಹರಿಜನ, ರವಿ ನೆಶ್ವಿ, ಹನುಮಂತಪ್ಪ ಚಳಗೇರಿ, ಸುಭಾಸ ಹರಿಜನ ಮೊದಲಾದವರು ವಿವಿಧ ಪಕ್ಷಗಳನ್ನು ತೊರೆದು ಅಭ್ಯರ್ಥಿ ಎನ್.ಎಂ. ಈಟೇರ ಅವರೊಂದಿಗೆ ಸೇರ್ಪಡೆಯಾದರು. ಮುಖಂಡರಾದ ಬಸವರಾಜ ಎಲ್ಲಕ್ಕನವರ, ಬಿ.ಡಿ. ನಾಯಕ, ಬಸವರಾಜ ಭೋಗಾವಿ, ನಾಗರಾಜ ತತ್ತೂರಿ, ಭೀಮಪ್ಪ ಕರಿಯಂಡ್ರ, ಮೂಕಪ್ಪ ಕರಿಯಂಡ್ರ, ಭರಮಪ್ಪ ಎತ್ತಿನಹಳ್ಳಿ, ಪರಮೇಶಪ್ಪ ಹಾದಿಮನಿ, ಈರಪ್ಪ ಇರಂಡ್ರ ಹಾಜರಿದ್ದರು.
ರು. 90 ಸಾವಿರ ನಗದುಅಕ್ರಮ ಸಾಗಾಟ: ವಶಕ್ಕೆ
ರಾಣಿಬೆನ್ನೂರು: ನಗರದಿಂದ ಮೇಲ್ಗೇರಿ ರಸ್ತೆಯ ಮೂಲಕ ಮತದಾರರಿಗೆ ಹಂಚಲೆಂದು ಅಕ್ರಮವಾಗಿ ಸಾಗಿಸಲಾಗುತ್ತಿದ್ದ ರು. 90 ಸಾವಿರವನ್ನು ಸ್ಥಳೀಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಚಂದ್ರಪ್ಪ ಪೂಜಾರ ಎಂಬ ವ್ಯಕ್ತಿಯನ್ನು ನಗರ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಹಣ ಪಕ್ಷೇತರ ಅಭ್ಯರ್ಥಿ ಆರ್. ಶಂಕರ್ ಅವರಿಗೆ ಸೇರಿದ್ದೆಂದು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ನಗರ ಠಾಣೆ ಪೊಲೀಸರು ವಿಚಾರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಗಿರಿಜವ್ವ ನಿಧನ
ಹಾವೇರಿ: ತಾಲೂಕಿನ ಮಣ್ಣೂರು ಗ್ರಾಮ ನಿವಾಸಿ ಗಿರಿಜವ್ವ ಕೊಂ. ಶಿವಾನಂದಪ್ಪ ಮಡ್ಲೂರು (65) ಅವರು ಇತ್ತೀಚೆಗೆ(ಏ. 29)ರಂದು ರಾತ್ರಿ ನಿಧನರಾದರು. ಮೃತರು ಪತಿ, ಓರ್ವ ಮಗ, ಮಗಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಏ. 30ರಂದು ಸ್ವಗ್ರಾಮ ಮಣ್ಣೂರಿನಲ್ಲಿ ನೆರವೇರಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

