ಕೈ ಕಾರ್ಯಕ್ಕಿಂತ ಕಮಲ ಅಭಿವೃದ್ಧಿ ಹೆಚ್ಚು
ಬ್ಯಾಡಗಿ: ಕಾಂಗ್ರೆಸ್ 50 ವರ್ಷಗಳಿಂದ ಮಾಡಿದ ಕಾರ್ಯಗಳನ್ನು ಬಿಜೆಪಿ ಸರ್ಕಾರ 5 ವರ್ಷಗಳಲ್ಲಿ ಮಾಡಿ ತೋರಿಸಿದೆ ಎಂದು ಬಿಜೆಪಿ ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಮಂಗಳವಾರ ಪಟ್ಟಣದಲ್ಲಿ ಬೃಹತ್ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಾಂಗ್ರೆಸ್ ನೇತೃತ್ವದ ಯುಪಿಏ ಸರ್ಕಾರ ಕೇಂದ್ರದಲ್ಲಿ ನಡೆಸುತ್ತಿರುವ ಭ್ರಷ್ಟಾಚಾರ, ಬೆಲೆ ಏರಿಕೆ, ಸಾವಿರಾರು ಕೋಟಿ ಹಗರಣಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಏದುರಿಸುವ ನೈತಿಕ ಸ್ಥೈರ್ಯವಿಲ್ಲ. ಹೀಗಾಗಿ ಟಿಕೆಟ್ ಹಂಚಿಕೆಯಲ್ಲೂ ಕಾಂಗ್ರೆಸ್ ಸಾವಿರಾರು ಕೋಟಿ ರು. ಹಗರಣ ನಡೆಸಿದೆ. ದೇಶದಲ್ಲಿ ಭ್ರಷ್ಟಾಚಾರ ಉದಯಕ್ಕೆ ಕಾಂಗ್ರೆಸ್ ಕಾರಣವಾಗಿದೆ ಎಂದರು.
ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡ ಕೆಲ ದಿನಗಳಲ್ಲೇ ಬಿಜೆಪಿ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಅಭೂತಪೂರ್ವ ಯಶಸ್ಸನ್ನು ಸಹಿಸಿಕೊಳ್ಳಲಾರದ ಕಾಂಗ್ರೆಸ್ ಮುಖಂಡರು ವಿಪಕ್ಷವಾಗಿ ತಮ್ಮ ಜವಾಬ್ದಾರಿ ನಿಭಾಯಿಸುವ ಬದಲು ಬಿಜೆಪಿ ಸರ್ಕಾರವನ್ನು ಕುತಂತ್ರದಿಂದ ಶತಾಯಗತಾಯ ಬೀಳಿಸುವ ಹುನ್ನಾರ ನಡೆಸಿದ್ದಾಗಿ ಆರೋಪಿಸಿದರು. ಕಳೆದ 5 ವರ್ಷಗಳ ರಾಜ್ಯದ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಮತದಾರರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಬಿಜೆಪಿಯ ಸಾಧನೆಯನ್ನು ಒರೆಗಲ್ಲಿಗೆ ಹಚ್ಚುವ ಕಾಲ ಎದುರಾಗಿದ್ದು, ಕ್ಷೇತ್ರದ ಮತದಾರರು ಮತ್ತೊಮ್ಮೆ ಬಿಜೆಪಿಗೆ ಮತ ಹಾಕುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಮನ್ನಣೆ ನೀಡುತ್ತಾರೆ ಎಂಬುದನ್ನು ಸಾಬೀತುಪಡಿಸಬೇಕಾಗಿದೆ ಎಂದರು.
ಯಮನೂರ ಉಜನಿ, ಮಲ್ಲನಗೌಡ ಭದ್ರಗೌಡ್ರ, ಶಂಕರಗೌಡ ಪಾಟೀಲ, ಚಂದ್ರಪ್ಪ ಮುಚ್ಚಟ್ಟಿ, ವಿರೇಂದ್ರ ಶೆಟ್ಟರ, ಉಮೇಶ ಸಂಕಣ್ಣನವರ, ರಾಮಣ್ಣ ಉಕ್ಕುಂದ, ಶೇಖರಗೌಡ ಗೌಡ್ರ, ಸೋಮಣ್ಣ ಮಾಳಗಿ, ಜಯಣ್ಣ ಮಲ್ಲಿಗಾರ, ಬಸವರಾಜ ಹಲಗೇರಿ, ಶಂಕ್ರಪ್ಪ ಅಕ್ಕಿ, ವೀರಭದ್ರಗೌಡ ಹೊಂಬರಡಿ, ಬಿ.ಬಿ. ಬಂಗೇರ, ಜಿತೇಂದ್ರ ಸುಣಗಾರ ಇನ್ನಿತರರು ಉಪಸ್ಥಿತರಿದ್ದರು.
ಅಭಿವೃದ್ಧಿ ಗಮನಿಸಿ ಕೈಗೆ ಮತದಾರರ ಬೆಂಬಲ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಮೇ 3
ಕಳೆದ 50 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ನಾನು ಶಾಸಕನಾದ ಬಳಿಕ ಮಾಡಿಸಿದ್ದೇನೆ. ಕಾರಣ ಅಭಿವೃದ್ಧಿ ನೋಡಿ, ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡುತ್ತಿದ್ದೇನೆ. ಮತದಾರರು ಅಭಿವೃದ್ಧಿಯನ್ನು ಬೆಂಬಲಿಸಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಶಾಸಕ ಬಿ.ಸಿ. ಪಾಟೀಲ ಹೇಳಿದರು.
ತಾಲೂಕಿನ ಹೊಲಬಿಕೊಂಡ ಗ್ರಾಮದಲ್ಲಿ ಪಾದಯಾತ್ರೆಯ ಮೂಲಕ ಮತದಾರರ ಮನೆ ಮನೆಗೆ ತೆರಳಿ ಮತ ಯಾಚಿಸಿದರು.
ಹ್ಯಾಟ್ರಿಕ್ ಗೆಲವು ಖಚಿತ: ರಾಜ್ಯದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸುತ್ತಿರುವುದರಿಂದ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಒಲವು ವ್ಯಕ್ತವಾಗುತ್ತಿದೆ. ಹಾಗಾಗಿ ನಾನು ಹ್ಯಾಟ್ರಿಕ್ ಗೆಲುವು ಸಾಧಿಸಲಿದ್ದೇನೆ ಎಂದು ಶಾಸಕ ಬಿ.ಸಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ಶಿವನಗೌಡ್ರ, ಎಸ್.ಕೆ. ಕರಿಯಣ್ಣನವರ, ಪರಮೇಶಪ್ಪ ಗವಿಯಪ್ಪನವರ, ಡಿ.ಸಿ. ಪಾಟೀಲ, ಬಿ.ಎನ್. ಬಣಕಾರ, ವೀರಬಸಪ್ಪ ಮತ್ತೂರ, ದುರುಗಪ್ಪ ನೀರಲಗಿ, ಎಸ್.ಸಿ. ಹುಲ್ಲತ್ತಿ, ಮಂಜುಳಾ ರವಿಶಂಕರ ಬಾಳಿಕಾಯಿ, ಸೃಷ್ಟಿ ಪಾಟೀಲ, ರಾಜು ಕಮಡೊಳ್ಳಿ, ಆನಂದ ನಲವಾಗಿಲ, ರವಿ ಉಣಕಲ್, ಮಂಜು ತಂಬಾಕದ, ರಾಘವೇಂದ್ರ ಚಿಂದಿ, ಮಹ್ಮದ್‌ಹುಸೇನ ವಡ್ಡಿನಕಟ್ಟಿ, ಹನುಮಂತಪ್ಪ ಮೆಗಳಮನಿ, ಬಸವರಾಜ ಭರಮಗೌಡ್ರ, ರಮೇಶ ತೋರಣಗಟ್ಟಿ, ಗುರುಶಾಂತ ಯತ್ತಿನಹಳ್ಳಿ, ಗುತ್ತೆಪ್ಪ ಮೆಗಳಮನಿ ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

