ರಾಣಿಬೆನ್ನೂರು: ಶೇ. 76.5ರಷ್ಟು ಮತದಾನ
ರಾಣಿಬೆನ್ನೂರು: ಭಾನುವಾರ ತಾಲೂಕಾದ್ಯಂತ ನಡೆದ ರಾಜ್ಯ ವಿಧಾನಸಭೆ ಚುನಾವಣೆ ಶಾಂತಯುತವಾಗಿ ಜರುಗಿದ್ದು, ಮತದಾನದ ಕುರಿತು ಸ್ವಿಪ್ ಕಾರ್ಯಕ್ರಮದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಪರಿಣಾಮ ಶೇ. 75.5 ಕ್ಕಿಂತಲು ಹೆಚ್ಚು ಮತದಾನವಾಗಿದೆ ಎಂದು ತಹಸೀಲ್ದಾರ್ ಕೆ.ಎಚ್. ಶಿವಕುಮಾರ ಹಾಗೂ ಚುನಾವಣಾಧಿಕಾರಿ ಬಸನಗೌಡ ತಿಳಿಸಿದರು.
ಯಶಸ್ವಿ ಮತದಾನ: ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತೆರೆಯಲಾಗಿದ್ದ 233 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ಸ್ವಿಪ್ ಕಾರ್ಯಕ್ರಮದಡಿ ಕಡ್ಡಾಯವಾಗಿ ಮತದಾನ ಮಾಡುವಂತೆ ಮತದಾರರಲ್ಲಿ ಜಾಗೃತಿ ಮೂಡಿಸಿದ್ದರ ಪರಿಣಾಮ ಜಿಲ್ಲೆ ಮತ್ತು ತಾಲೂಕು ಆಡಳಿತ ಜಂಟಿಯಾಗಿ ವಿಧಾನಸಭೆ ಕ್ಷೇತ್ರಾದ್ಯಂತ ಭಾರಿ ಬಿಗಿಬಂದೊಬಸ್ತ್ನೊಂದಿಗೆ ಚುನಾವಣೆ ಜರುಗಿತು.
ಶಾಂತಿಯುತ: ಚುನಾವಣೆಗೆ ಮೊದಲೆ ಸಕಲ ಸಿದ್ಧತೆಗಳನ್ನು ಮಾಡಿದ್ದರ ಪರಿಣಾಮ ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಚುನಾವಣೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆ, ಗದ್ದಲಗಳು ನಡೆದಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಬೆಳಗ್ಗೆಯಿಂದ ಮಂದಗತಿಯಲ್ಲಿ ಸಾಗಿದ್ದ ಮತದಾನ, ಬಿಸಿಲಿನ ತಾಪಮಾನ ಹೆಚ್ಚಿದಂತೆಲ್ಲ ಮತಗಟ್ಟೆಗೆ ಬರುವ ಮತದಾರರ ಸಂಖ್ಯೆ ಹೆಚ್ಚಾಗಿತ್ತು. ಮತದಾನದ ಸಮಯ ಸಂಜೆ 5 ಗಂಟೆಯ ಬದಲಾಗಿ, 6ವರೆಗೆ ವಿಸ್ತರಿಸಿದ್ದರ ಪರಿಣಾಮ ಎಲ್ಲಾ 233 ಮತಗಟ್ಟೆಗಳಲ್ಲಿ ಶಾಂತಯುತವಾಗಿ ಮತದಾನ ಮಾಡಲು ಅವಕಾಶ ಸಿಕ್ಕಂತಾಗಿತ್ತು.
ಪೊಲೀಸ್ ಪಹರೆ: ಅಕ್ರಮ ತಡೆಗಟ್ಟುವುದಕ್ಕಾಗಿ ಕುಪ್ಪೆಲೂರು ಮತ್ತು ಮೇಡ್ಲೆರಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಚಳಗೇರಿ, ಮಾಕನೂರು ಮತ್ತು ಕುಪ್ಪೇಲೂರು ಗ್ರಾಮಗಳಲ್ಲಿ ವಿಶೇಷ ಠಾಣೆಗಳನ್ನು ತೆರೆದಿದ್ದ ಕಾರಣ ಗಂಟೆಗೊಂದು ಬಾರಿ ಮೇಲ್ವಿಚಾರಕರ ತಂಡ ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳಿಗೆ ಮೇಲಿಂದ ಮೇಲೆ ಬಂದುಕೂಧಾರಿಗಳ ಜೊತೆ ಬಂದು ಹೋಗುತ್ತಿರುವುದರಿಂದ ಮತದಾನ ಶಾಂತವಾಗಿತ್ತು. ಗ್ರಾಮಾಂತರ ಪ್ರದೇಶಗಳಲ್ಲಿ ಸುರಿಯುವ ಬಿಸಿಲಿನಲ್ಲಿ ಮತಗಟ್ಟೆಗೆ ಬಂದು ಮತದಾನ ಮಾಡಿ ಮರಳುತ್ತಿದ್ದ ಮತದಾರರಿಗೆ ಕೆಲವು ಪಕ್ಷಗಳ ಕಾರ್ಯಕರ್ತರು ಶರಬತ್ ಹಾಗೂ ವಿವಿಧ ರೀತಿಯ ತಂಪು ಪಾನೀಯ ಹಾಗೂ ಬಿಸ್ಕತ್ಗಳನ್ನು ನೀಡಿ ಬಿಸಿಲಿನ ಬೆಗೆಯಿಂದ ತಂಪತ್ತಿಗೆ ಕರೆ ತಂದರು. ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ತೆರೆದಿರುವ 71 ಸೂಕ್ಷ್ಮ, 68 ಅತಿಸೂಕ್ಷ್ಮ, 94 ಸಾಮಾನ್ಯ ಮತಗಟ್ಟೆಗಳ ಸುತ್ತಲು ರಕ್ಷಣೆಗಾಗಿ ಪೊಲೀಸ್, ಅರೆಸೇನೆ ಮತ್ತು ಗೃಹ ರಕ್ಷಕ ದಳ ನೇಮಿಸಿದ್ದರಿಂದ ಮತದಾನ ಯಶಸ್ವಿಯಾಗಿ ಜರುಗಿತು. ಗ್ರಾಮಾಂತರ ಪ್ರದೇಶದಲ್ಲಿನ 12ರಿಂದ 14 ಮತಗಟ್ಟೆಗೊಬ್ಬರಂತೆ ಸೆಕ್ಟರ್ ಆಫೀಸರ್ಗಳು, ನಗರ ಪ್ರದೇಶದಲ್ಲಿ 24 ಮತಗಟ್ಟೆಗೆ ಒಬ್ಬರಂತೆ ಒಟ್ಟು 16 ಜನ ಸೆಕ್ಟರ್ ಆಪಿಸರ್ಗಳು ಹಾಗೂ ಪ್ರತಿ ಹೋಬಳಿಗೊಬ್ಬರಂತೆ 3 ಹೊಬಳಿಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಉಲ್ಲಂಘಸಿದವರ ಮೇಲೆ ನಿಗಾವಹಿಸಲು 5 ತಂಡಗಳು ಉತ್ತಮವಾಗಿ ಕಾರ್ಯನಿರ್ವಹಿಸಿದವು. ಭಾನುವಾರ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಶಾಂತಯುತ ಮತದಾನಕ್ಕೆ ಸಹಕರಿಸಿದ ಎಲ್ಲಾ ನೌಕರು ಹಾಗೂ ವಿವಿಧ ವರ್ಗದ ಸಿಬ್ಬಂದಿಗಳಿಗೆ ತಹಸೀಲ್ದಾರ್ ಕೆ.ಎಚ್. ಶಿವಕುಮಾರ ಹಾಗೂ ಚುನಾವಣಾಧಿಕಾರಿ ಬಸನಗೌಡ ಧನ್ಯವಾದಗಳನ್ನು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

