ಕೆಜೆಪಿ ಸೋಲಿಸಿದ ಬಿಜೆಪಿ, ಪಕ್ಷೇತರರು
ಹಾವೇರಿ: ಕ್ಷೇತ್ರದ ಕೆಲವಡೆ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕೆಜೆಪಿ ಅಭ್ಯರ್ಥಿಗಳು ಕಾರಣವಾದರೆ ಇನ್ನೂ ಕೆಲವಡೆ ಕೆಜೆಪಿ ಅಭ್ಯರ್ಥಿಗಳ ಸೋಲಿಗೆ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ಕಾರಣರಾದರು.
ಜಿಲ್ಲಾದ್ಯಂತ ತನ್ನದೇ ಆದ ವರ್ಚಸ್ಸು ಹೊಂದಿರುವ ಮಾಜಿ ಸಚಿವರು ಆಗಿರುವ ಕೆಜೆಪಿ ಅಭ್ಯರ್ಥಿ ಸಿ.ಎಂ. ಉದಾಸಿ ಸೋಲುತ್ತಾರೆ ಎಂಬುದನ್ನು ಯಾರೂ ಊಹಿಸಿಕೊಂಡಿರಲಿಲ್ಲ. ಕಳೆದ ಬಾರಿ ಚುನಾವಣೆಯಲ್ಲಿ ಎದುರಾಳಿಯಾಗಿದ್ದ ಕಾಂಗ್ರೆಸ್ನ ಮನೋಹರ ತಹಸೀಲ್ದಾರ್ ಅವರೇ ಈ ಬಾರಿಯೂ ಉದಾಸಿ ವಿರುದ್ಧ ಸೆಡ್ಡು ಹೊಡೆದಿದ್ದರು. ಉದಾಸಿ ಒಟ್ಟು 60,638 ಮತಗಳನ್ನು ಪಡೆದಿದ್ದರೆ ಗೆಲುವು ಸಾಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ತಹಸೀಲ್ದಾರ್ 66,324 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸವರಾಜ ಹಾದಿಮನಿ 7052 ಮತಗಳು ಪಡೆದಿದ್ದು ಉದಾಸಿ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂಬುದು ಫಲಿತಾಂಶದ ನಂತರ ಜಾಹೀರಾದ ಸುದಿ.್ದ
ಹಿರೇಕೆರೂರು ಕಾಂಗ್ರೆಸ್ ಅಭ್ಯರ್ಥಿ ಬಿ.ಸಿ. ಪಾಟೀಲರ ಪಾಲಾಗಬೇಕಿದ್ದ 10 ಸಾವಿರಕ್ಕೂ ಹೆಚ್ಚು ಮತಗಳನ್ನು ಪಕ್ಷೇತರರಾಗಿ ಕಣಕ್ಕಿಳಿದಿದ್ದ ಬಿ.ಎಚ್. ಬನ್ನಿಕೋಡ ಗಿಟ್ಟಿಸಿಕೊಂಡಿದ್ದು ಪಾಟೀಲರ ಗೆಲವಿಗೆ ತೊಡಕನ್ನುಂಟು ಮಾಡಿತು. ಹಾವೇರಿ ಮೀಸಲು ಕ್ಷೇತ್ರದ ಕೆಜೆಪಿ ಅಭ್ಯರ್ಥಿಯಾದ ಮಾಜಿ ಶಾಸಕ ನಂಬಿಕೊಂಡಿದ್ದ ಮೇರ್ಲ್ವಗದ ಮತಗಳನ್ನು ಬಿಜೆಪಿ ಪರಾಜಿತ ಅಭ್ಯರ್ಥಿ ಡಾ. ಮಲ್ಲೇಶಪ್ಪ ಹರಿಜನ ಬುಟ್ಟಿಗೆ ಬಿದಿದ್ದು ಕೆಜೆಪಿ ಅಭ್ಯರ್ಥಿ ಗೆಲುವಿಗೆ ಮುಳ್ಳುವಾಗಿ ಪರಿಣಮಿಸಿತು.
ರಾಣಿಬೆನ್ನೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಆರ್. ಅಶೋಕ, ಕೆಜೆಪಿ ಹಾಗೂ ಬಿಜೆಪಿ ಅಭ್ಯರ್ಥಿಗಳ ಮತಬುಟ್ಟಿಗೆ ಕೈ ಹಾಕಿದ್ದರಿಂದ ಸಲೀಸಾಗಿ ಈ ಕ್ಷೇತ್ರ ಕಾಂಗ್ರೆಸ್ನ ಪಾಲಾಗುವಂತಾಯಿತು. ಬ್ಯಾಡಗಿ ಮತಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶಿವರಾಜ ಸಜ್ಜನರ್, ಕ್ಷೇತ್ರದಲ್ಲಿ ಸಾಕಷ್ಟು ಪ್ರಾಬಲ್ಯ ಸಾಧಿಸಿದ್ದರೂ ಜಯ ಅವರತ್ತ ಮುಖ ಮಾಡದೇ ಇರಲು ಬಿಜೆಪಿಯ ರುದ್ರಪ್ಪ ಬಳ್ಳಾರಿ ಪಡೆದ ಮತಗಳು ಕಾರಣವಾಯಿತ್ತೆಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಆರು ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಸಹಜವಾಗಿಯೇ ಜಾತಿ ಲೆಕ್ಕಾಚಾರ ಸಾಕಷ್ಟು ವರ್ಕ್ ಮಾಡಿದೆಯಾದರೂ, ಇದಕ್ಕೂ ಮೀಗಿಲಾಗಿ ಆಯಾ ಪಕ್ಷಗಳು ಗೆಲವಿಗಾಗಿ ಹುಡುಕಿಕೊಂಡಿದ್ದ ಮಾಮಮಾರ್ಗಗಳು ಗೆಲವಿಗೆ ಸಾಕಷ್ಟು ತೊಡಕನ್ನುಂಟು ಮಾಡಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

