ಹಾವೇರಿ

ಇಂದು ಔಷಧ ವ್ಯಾಪಾರಸ್ಥರಿಂದ ಬಂದ್

Published On :

ಹಿರೇಕೆರೂರು: ಅಖಿಲ ಭಾರತ ಔಷಧ ವ್ಯಾಪಾರಿಗಳ ತಾಲೂಕು ಘಟಕ ಮೇ 10ರಂದು ಬಂದ್ ಆಚರಿಸಲಿದೆ. ಕೇಂದ್ರ ಸರ್ಕಾರದ ಹೊಸ ಔಷಧ ನಿಯಮಾವಳಿಗೆ ವಿರೋಧ ವ್ಯಕ್ತಪಡಿಸಿರುವ ಔಷಧಿ ವ್ಯಾಪಾರಸ್ಥರು, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಲಿದ್ದಾರೆ. ಕಾನೂನು ವಿರೋಧಿಸಿ ಪ್ರತಿಭಟನೆ ಹಾಗೂ ಅಸಹಕಾರದ ಮೂಲಕ ರಾಷ್ಟ್ರವ್ಯಾಪಿ ಬಂದ್ ನಡೆಸಲಾಗುವುದು. ತಾಲೂಕಿನ ಎಲ್ಲ ಔಷಧ ವ್ಯಾಪಾರಿಗಳು ತಮ್ಮ ಮಳಿಗೆಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ತಾಲೂಕು ಅಧ್ಯಕ್ಷ ಜಿ.ಜೆ. ಜೀವಣ್ಣ ಹಾಗೂ ಜಿಲ್ಲಾ ಜಂಟಿ ಸಹ ಕಾರ್ಯದರ್ಶಿ ರಾಜಕುಮಾರ ಮಡಿವಾಳರ ಮನವಿ ಮಾಡಿದ್ದಾರೆ.

ಕಾಳಸಂತೆಯಲ್ಲಿ ಹತ್ತಿಬೀಜ: ಕೆಂಚಳ್ಳೇರ
ಹಿರೇಕೆರೂರು:
ತಾಲೂಕಿನಾದ್ಯಂತ ಕಾಳಸಂತೆಯಲ್ಲಿ ಬಿ.ಟಿ. ಕನಕ ಹತ್ತಿ ಬೀಜ ಮಾರಾಟವಾಗುತ್ತಿದೆ. ಈ ಕುರಿತು ಜಿಲ್ಲಾ ಕೃಷಿ ಜಂಟಿ ನಿರ್ದೇಶಕರು ಕ್ರಮ ಜರುಗಿಸುವಂತೆ ಜಿಲ್ಲಾ ರೈತ ಸಂಘದ ಅದ್ಯಕ್ಷ ರಾಮಣ್ಣ ಕೆಂಚಳ್ಳೇರ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಮೂಲಬೆಲೆ ರು.  930 ಇದ್ದರೂ ಕಾಳಸಂತೆಯಲ್ಲಿ ವ್ಯಾಪಾರಿಗಳು ರು.  1200ಕ್ಕೆ ಮಾರಾಟ ಮಾಡುತ್ತಿದ್ದಾರೆ. ತಕ್ಷಣ ಕೃಷಿ ಅಧಿಕಾರಿಗಳು ಬಿಟಿ ಹತ್ತಿ ಕನಕ ಬೀಜ ಮೂಲಬೆಲೆಗೆ  ರೈತರಿಗೆ ಸಿಗುವಂತೆ ಮುಂಜಾಗ್ರತೆ ಕ್ರಮ ಕೈಗೊಂಡು ಎಲ್ಲ ವ್ಯಾಪಾರಸ್ಥರ ಮೇಲೆ ನಿಗಾ ವಹಿಸಬೇಕು. ರೈತರಿಗೆ ನ್ಯಾಯ ಒದಗಿಸಬೇಕು. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಲ್ಲಿ ಮನವಿ ಮಾಡಿದ್ದಾರೆ.

ಮಾರುತಿ ಕಾಲೇಜಿಗೆ ಶೇ. 94
ಹಿರೇಕೆರೂರು:
ತಾಲೂಕಿನ ಕೋಡ ಗ್ರಾಮದ ಮಾರುತಿ ಕಾಲೇಜಿನ ದ್ವಿತೀಯ ಪಿಯು ಫಲಿತಾಂಶ ಶೇ. 94ರಷ್ಟಾಗಿದೆ. ಪರೀಕ್ಷೆಗೆ ಕುಳಿತಿದ್ದ 100 ವಿದ್ಯಾರ್ಥಿಗಳ ಪೈಕಿ 94 ವಿದ್ಯಾರ್ಥಿಗಳು ಪಾಸಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಇಬ್ಬರು ಉನ್ನತ ಶ್ರೇಣಿ, 60 ಪ್ರಥಮ, 21 ದ್ವಿತೀಯ, 11 ವಿದ್ಯಾರ್ಥಿಗಳು ತೃತೀಯ ಶ್ರೇಣಿ ಗಳಿಸಿದ್ದಾರೆ. ಕವಿತಾ ಪಾಟೀಲ ಶೇ. 87.77, ಶಾಜಿದಬಾನು ಶೇರಗಾರ ಶೇ. 86.16 ಅಂಕ ಗಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.