ನೂತನ ಔಷಧ ನೀತಿ ವಿರೋಧಿಸಿ ಪ್ರತಿಭಟನೆ
ಹಾನಗಲ್ಲ: ಕೇಂದ್ರ ಸರ್ಕಾರದ ಹೊಸ ಔಷಧ ನೀತಿಯನ್ನು ವಿರೋಧಿಸಿ, ಅಖಿಲ ಭಾರತ ಔಷಧ ವ್ಯಾಪಾರಸ್ಥರ ಸಂಘಟನೆ ಕರೆ ನೀಡಿದ್ದ ಮುಷ್ಕರ ಹಿನ್ನೆಲೆಯಲ್ಲಿ ಇಲ್ಲಿನ ತಾಲೂಕು ಔಷಧ ವ್ಯಾಪಾರಸ್ಥರ ಸಂಘ ಶುಕ್ರವಾರ ವ್ಯಾಪಾರ ಸ್ಥಗಿತಗೊಳಿಸಿ ಬೆಂಬಲ ಸೂಚಿಸಿತು. ಇದೇ ವೇಳೆ, ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಮನವಿಯಲ್ಲಿ ಲಾಭಾಂಶ ಕಡಿತಗೊಳಿಸುವ ಕುರಿತು 2013 ತಿದ್ದುಪಡಿಯನ್ನು ರದ್ದುಪಡಿಸಬೇಕು. ಇಪ್ಪತ್ತು ವರ್ಷಗಳ ಹಿಂದಿನ ಕಾಯ್ದೆಯನ್ನೇ ಮುಂದುವರಿಸಬೇಕು. ಫಾರ್ಮಾಸಿಸ್ಟ್ ಔಷಧ ತಜ್ಞರ ಕೊರತೆ ನೀಗಿಸಲು ವ್ಯಾಪಾರ ನಡೆಸುತ್ತಿರುವ ಪಾಲುದಾರ, ಮಾಲೀಕನಿಗೆ ಔಷಧ ಹಾಗೂ ಕಾಂತಿವರ್ಧಕ ಕಾಯ್ದೆಯಲ್ಲಿ ಔಷಧಿ ಮಾರಾಟಕ್ಕೆ ಮನ್ನಣೆ ನೀಡಬೇಕು. ಔಷಧ ಹಾಗೂ ಕಾಂತಿವರ್ಧಕ ಕಾಯ್ದೆ 1940ರ ಕಲಂ 19ರ ಉಲ್ಲಂಘನೆಗೆ ಔಷಧ ಮಾರಾಟಗಾರ ತಾನು ಖರೀದಿ, ದಾಸ್ತಾನು ಮಾಡಿದ ದಾಖಲೆ ಹೊಂದಿರುವುದನ್ನು ಪರಿಶೀಲಿಸಬೇಕು. ಕಲಂಗಳ ಜಾರಿ ಹಿಂಪಡೆಯಬೇಕೆಂದರು. ಎ.ಎಸ್. ಬಳ್ಳಾರಿ, ಗುರುರಾಜ ಜೋಶಿ, ಹರಿ ಕಲಾಲ, ವಿಜಯ ಕುಬಸದ, ಪರಶುರಾಮ ಬಸಾಪುರ, ಸುಧೀರ ತಮ್ಮಣ್ಣಶಾಸ್ತ್ರಿ, ಫಿರೋಜ ಶಿರಬಡಗಿ, ಜಿ.ಸಿ. ವಿರುಪಣ್ಣನವರ, ಸಿದ್ದು ಕಬ್ಬೂರ ಇನ್ನಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

