ಜನಸೇವೆ, ಅಭಿವೃದ್ಧಿಯೇ ಬಿಜೆಪಿ ಧ್ಯೇಯ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಮೇ 11
ಚುನಾವಣೆಯಲ್ಲಿ ಪರ-ವಿರೋಧ ಅನಿವಾರ್ಯ. ಆದರೆ, ಅದು ಅಭಿವೃದ್ಧಿಗೆ ಎದುರಾಗಬಾರದು. ಜನಸೇವೆ ಪ್ರಮುಖವಾದ ಉದ್ದೇಶ ನಮ್ಮದಾಗಬೇಕು. ಅದರಡಿಯಲ್ಲಿ ನಾವು ಮುಂದೆ ಸಾಗುತ್ತೇವೆ ಎಂದು ಮಾಜಿ ಸಚಿವ, ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಬಂಕಾಪುರ ಪಟ್ಟಣದ ಅರಳೆಲೆ ಹಿರೇಮಠದ ಆವರಣದಲ್ಲಿ ಶನಿವಾರ ನಡೆದ ರೇವಣಸಿದ್ದೇಶ್ವರ ಪಟ್ಟಾಧಿಕಾರ ರಜತ ಮಹೋತ್ಸವ ಹಾಗೂ ಸರ್ವಧರ್ಮ ಸಾಮಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರೈತ ಬದುಕಿಗೆ ಬುನಾದಿ: ನೂರಾರು ವರ್ಷಗಳಿಂದ ವೀರಶೈವ ಮಠ, ಮಂದಿರಗಳು ಮನುಕುಲದಲ್ಲಿ ಮಾನವೀಯ ಸಂಬಂಧಗಳನ್ನು ಬೆಸೆಯುವ ಜೊತೆಗೆ ಮನುಷ್ಯನನ್ನು ಸದೃಢರನ್ನಾಗಿ ರೂಪಿಸುತ್ತಿವೆ. ಕೃಷಿ ಅವಲಂಬಿತವಾದ ಈ ಭಾಗದಲ್ಲಿ ನೀರಾವರಿ ಯೋಜನೆ ಪ್ರಯೋಜನ ಆಗಲಿವೆ. ರೈತರ ಭವಿಷ್ಯಕ್ಕೆ ಆರ್ಥಿಕ ಬೆಂಬಲ ನೀಡುವ ಮೂಲಕ ಸ್ವಾವಲಂಬನೆ ಬದುಕಿಗೆ ದಾರಿ ಮಾಡಿದೆ ಎಂದರು.
ಧರ್ಮಪ್ರಜ್ಞೆಯಿಂದ ಬಾಳು ವಿಕಾಸ
ರಂಭಾಪುರಿ ವೀರಸೋಮೇಶ್ವರ ಶ್ರೀ ಸಾನ್ನಿಧ್ಯ ವಹಿಸಿ ಮಾತನಾಡಿ, ಮಾನವ ಕುಲದ ಶ್ರೇಯೋಭಿವೃದ್ಧಿಗೆ ಆದರ್ಶ ಮೌಲ್ಯಗಳ ಪರಿಪಾಲನೆ ಅಗತ್ಯ. ಉತ್ತಮ ಸಂಸ್ಕಾರ, ಧರ್ಮಪ್ರಜ್ಞೆ ಮನುಷ್ಯನ ಬಾಳು ವಿಕಾಸಗೊಳ್ಳಲು ಸಾಧ್ಯವಿದೆ. ಮಾತು, ಕೃತಿ, ಮನ ಒಂದಾಗಿ ಧರ್ಮದ ದಾರಿಯಲ್ಲಿ ಮುನ್ನಡೆದಾಗ ಉನ್ನತಿ ಸಾಧಿಸಲು ಸಾಧ್ಯವಿದೆ ಎಂದರು.
ಕೃಷಿಯೊಂದಿಗೆ ಶ್ರೀಗಳು ಮಾದರಿ ರಜತ ಬೆಳಗು ನಾಮಾಂಕಿತದ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿದ ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಪಕ್ಷದಲ್ಲಿನ ಭಿನ್ನಾಭಿಪ್ರಾಯ ಹಾಗೂ ವ್ಯತ್ಯಾಸಗಳನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಆಡಳಿತಕ್ಕೆ ಬರುತ್ತೇವೆ. ಧಾರ್ಮಿಕ ಸಭೆ, ಸಮಾರಂಭಗಳಿಗೆ ಸೀಮಿತವಾಗದೆ, ಕೃಷಿ ಕಾರ್ಯ ಮಾಡುವ ಜೊತೆಗೆ ಅರಳೆಲೆ ಮಠದ ರೇವಣಸಿದ್ದೇಶ್ವರ ಶ್ರೀಗಳು ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಅವರು ರೇವಣಸಿದ್ದೇಶ್ವರರ ಕುರಿತ ಹಾಡಿನ ಆಡಿಯೋ ಸಿಡಿಗಳನ್ನು ಬಿಡುಗಡೆ ಮಾಡಿದರು. ರೇವಣಸಿದ್ದೇಶ್ವರ ಸ್ವಾಮಿಗಳು ಸಮ್ಮುಖ ವಹಿಸಿದ್ದರು.
ಕಲಾದಗಿ ಚಂದ್ರಶೇಖರ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ವಿರಕ್ತಮಠದ ಸಂಗನಬಸವ ಸ್ವಾಮೀಜಿಗಳು, ಹಳ್ಯಾಳದ ವಿದ್ಯಾನಂದ ಸ್ವಾಮಿಗಳು, ಕಣ್ವಕುಪ್ಪೆ ಮಠದ ಶಾಂತಲಿಂಗ ಶ್ರೀಗಳು, ಕೊಟ್ಟೂರು ಬಸವೇಶ್ವರ ಶ್ರೀಗಳು, ವಿಮಲರೇಣುಕ ಶಿವಾಚಾರ್ಯರು, ಕೂಡಲದ ಗುರುನಂಜೇಶ್ವರ ಶ್ರೀಗಳು, ನಿಜಗುಣಿ ಶಿವಯೋಗಿಗಳು, ನಾಗಭೂಷಣ ಶಿವಾಚಾರ್ಯರು, ಶೈಲೇಶ್ವರ ಮಠದ ಸಿದ್ದಲಿಂಗ ಶಿವಾಚಾರ್ಯರು ಸೇರಿದಂತೆ ರಾಜಕಿಯ ಮುಖಂಡರು, ಸಾಹಿತಿಗಳು, ಕಲಾವಿದರು ಉಪಸ್ಥಿತರಿದ್ದರು.
ಡಾ. ಆರ್.ಎಸ್. ಅರಳೆಲೆ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಾಪಕ ಪ್ರೊ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಉಪನ್ಯಾಸಕ ಗುರುಪಾದಯ್ಯ ಸಾಲಿಮಠ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

