ಹಾವೇರಿ

ವಿಠ್ಠಲ ರಖುಮಾಯಿ ದಿಂಡಿ ಮಹೋತ್ಸವ

Published On :

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಮೇ 17
ಪಟ್ಟಣದ ಶ್ರೀ ವಿಠ್ಠಲ ರುಖುಮಾಯಿ ದೇವಸ್ಥಾನದಲ್ಲಿ 44ನೇ ವರ್ಷದ ವಿಠ್ಠಲ ರಖುಮಾಯಿ ದೇವರ ದಿಂಡಿ ಮಹೋತ್ಸವ ಆರಂಭಗೊಂಡಿತು.
ಮೂರು ದಿನಗಳ ಕಾಲ ನಡೆಯಲಿರುವ ಈ ದಿಂಡಿ ಉತ್ಸವದಲ್ಲಿ ಜೋಗಿ ಸಮಾಜದ ಬಾಂಧವರು ಉತ್ಸಾಹದಿಂದ ಪಾಲ್ಗೊಂಡು ವಿಜೃಂಭಣೆಯ ಆರಂಭಕ್ಕೆ ನಾಂದಿ ಹಾಡಿದರು.
ಮೊದಲ ದಿನವಾದ ಶುಕ್ರವಾರ ಬೆಳಗ್ಗೆ ಜೋಗಿ ಸಮಾಜದ ಮಠಾಧಿಪತಿಗಳು ಹಾಗೂ ವಾರಕರಿ ಸಂಪ್ರದಾಯ ಸದ್ಗುರುಗಳ ನೇತೃತ್ವದಲ್ಲಿ ಕಾಕಡಾರತಿ, ಶ್ರೀ ವಿಠೋಬ ರಖುಮಾಯಿ ಮತ್ತು ಗೋರಕ್ಷನಾಥ ಸಮಸ್ತ ದೇವತೆಗಳಿಗೆ ಪಂಚಾಮೃತಾಭಿಷೇಕ, ನವಗ್ರಹ ಶಾಂತಿ ಮತ್ತು ಶ್ರೀ ಮಹಾಗಣಪತಿ ಹೋಮ, ಪೋತಿ ಸ್ಥಾಪನೆ, ನವದ್ರವ್ಯ ಹೋಮ, ಬಳಿಕ ಎಲ್ಲ ಮಹಿಳೆಯರು ಸೇರಿದಂತೆ ಸಮಾಜದ ಬಾಂಧವರು ಜ್ಞಾನೇಶ್ವರ ಪಾರಾಯಣ ಗ್ರಂಥ ಪಠಣ ಮಾಡಿದರು.
ರಾಘವೇಂದ್ರ ಹಾನಗಲ್ಲ, ಹನುಮಂತಪ್ಪ ಯಲ್ಲಾಪುರ, ರಾಮಕೃಷ್ಣ ಯಲ್ಲಾಪುರ, ಪರಶುರಾಮ ಯಲ್ಲಾಪುರ ಹೋಮಾದಿಗಳನ್ನು ನಡೆಸಿದರು.
ಸಮಾಜದ ಅಧ್ಯಕ್ಷ ವೈ.ಡಿ. ಮಧೂರಕರ, ಪಾರ್ವತಿ ಬಾಯಿ ಮಧೂರಕರ, ಹನುಮಬಾಯಿ ಮಧೂರಕರ, ರೂಪಾ ರಾಕುಂಡೆ, ಸ್ಮಿತಾ ಮಧೂರಕರ, ಚಂದನಾ, ಪಾರ್ಶಿ, ಪದ್ಮಾ ಮಧೂರಕರ ಮೊದಲಾದ ಮಹಿಳೆಯರು ಹಾಗೂ ಪುರುಷರು ಗ್ರಂಥ ಪಠಣ ಮಾಡಿದರು.
ಬಳಿಕ ವಿಶೇಷ ಭಜನೆಯೊಂದಿಗೆ ಪೂಜೆ ಸಲ್ಲಿಸಿಲಾಯಿತು. ನಂತರ ಅನ್ನಸಂತರ್ಪಣೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.