ಡಿಪ್ಲೋಮಾ ಕೋರ್ಸ್: ಅರ್ಜಿ ಆಹ್ವಾನ
ಕನ್ನಡಪ್ರಭ ವಾರ್ತೆ, ಹಾವೇರಿ, ಮೇ 18
ಹುಬ್ಬಳ್ಳಿಯ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ (ಜಿಟಿಟಿಸಿ) ವತಿಯಿಂದ ಜಾಬ್ ಓರಿಯೆಂಟೆಡ್ ಮತ್ತು ಪ್ರ್ಯಾಕ್ಟೀಸ್ ಇಂಟಿಗ್ರೇಟೆಡ್ ಡಿಪ್ಲೋಮಾ ಕೋರ್ಸ್ಗಳಿಗೆ ಮೇ 31ರೊಳಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಡಿಪ್ಲೋಮಾ ಇನ್ ಟೂಲ್ ಆ್ಯಂಡ್ ಡೈಮೇಕಿಂಗ್ ಹಾಗೂ ಡಿಪ್ಲೋಮಾ ಇನ್ ಪ್ರಿಸಿಷನ್ ಮ್ಯಾನುಫ್ಯಾಕ್ಚ್ರಿಂಗ್ 3-1 ವರ್ಷಗಳ ಈ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ದೇಶ, ವಿದೇಶದ ಉತ್ತಮ ಕಂಪನಿಗಳಲ್ಲಿ ಬೇಡಿಕೆ ಇದೆ. ಜೊತೆಗೆ ಸ್ವಉದ್ಯೋಗ ಕೈಗೊಳ್ಳಲು ಅನುಕೂಲವಿದೆ. ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಕೋರ್ಸ್ಗಳಿಗೆ ಅರ್ಜಿ ಸಲ್ಲಿಸಬಹುದು. ಇಲ್ಲಿಯವರೆಗೆ ತರಬೇತಿ ಮುಗಿಸಿದ ಅಭ್ಯರ್ಥಿಗಳಿಗೆ ಶೇ. 100ರಷ್ಟು ಖಚಿತ ಮತ್ತು ಉತ್ತಮ ಉದ್ಯೋಗಾವಶಕಾಶ ಕಲ್ಪಿಸಲಾಗಿದೆ. ಈ ಮೇಲಿನ ಕೋರ್ಸ್ಗಳು ಪ್ರ್ಯಾಕ್ಟಿಕಲ್ ಓರಿಯೆಂಟೆಡ್ ತರಬೇತಿ. ಕಂಪನಿಗಳಿಗೆ ಬೇಕಾಗುವ ಕೌಶಲ್ಯ ಮತ್ತು ಜ್ಞಾನವನ್ನು ಅಳವಡಿಸಿಕೊಳ್ಳಲು ಬೇಕಾಗುವ ಎಲ್ಲ ತಂತ್ರಜ್ಞಾನ ಮತ್ತು ಸೌಕರ್ಯಗಳನ್ನು ಜಿಟಿಟಿಸಿ ಕೇಂದ್ರ ಅಳವಡಿಸಿಕೊಂಡಿದೆ ಎಂದು ಧಾರವಾಡ ಜಿಟಿಟಿಸಿ ಪ್ರಾಂಶುಪಾಲರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಬಿ.ಜಿ. ಮೊಗೆರ, ಪ್ರಾಂಶುಪಾಲರು, ಜಿಟಿಟಿಸಿ ಪ್ಲಾಟ್ ನಂ. 30ರಿಂದ 45, 1ನೇ ಹಂತ, ಕೆಐಎಡಿಬಿ ಇಂಡ್ಸ್ಟ್ರೀಯಲ್ ಏರಿಯಾ, ರಾಯಾಪುರ, ಧಾರವಾಡ-580009. ದೂ. 0836- 2333158, ಮೊ. 9141630309 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

