ಹಾವೇರಿ

ಸಾಮೂಹಿಕ ವಿವಾಹದಿಂದ ಆರ್ಥಿಕ ಉಳಿತಾಯ

Published On :

ಹಿರೇಕೆರೂರು: ಸಾಮೂಹಿಕ ವಿವಾಹಗಳು ಬಡವರ ಬದುಕಿಗೆ ಸಹಕಾರಿಯಾಗಿದ್ದು, ಅರ್ಥಿಕ ಉಳಿತಾಯಕ್ಕೆ ಅಡಿಪಾಯವಾಗಿವೆ. ಜನತೆ ಇದರ ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸುಭದ್ರರಾಗಬೇಕು ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಕರೆ ನೀಡಿದರು.
ತಾಲೂಕಿನ ರಟ್ಟಿಹಳ್ಳಿ ಕಬ್ಬಿಣ ಕಂಥಿಮಠದಲ್ಲಿ ಜರುಗಿದ ಜಯಸಿದ್ದ ಲಿಂಗ ಶಿವಾಚಾರ್ಯ ಸ್ವಾಮಿಗಳ 22ನೇ ಪುಣ್ಯರಾಧನೆ ಹಾಗೂ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀಮಠದಿಂದ ಪುಣ್ಯದ ಕಾರ್ಯ: ಸಾಮೂಹಿಕ ವಿವಾಹಗಳು ಸಾಮಾಜಿಕ ಬದುಕಿನಲ್ಲಿ ಭಾವೈಕ್ಯತೆ ಬಿಂಬಿಸುತ್ತಿವೆ. ವಿವಿಧ ವರ್ಗದ ಜನತೆ ಸಾಮೂಹಿಕವಾಗಿ ಶ್ರೀ ಮಠದಲ್ಲಿ ಧಾರ್ಮಿಕ ಗುರುಗಳು ಹಾಗೂ ವಿವಿಧ ಪುಣ್ಯ ಪುರುಷರ ಸಮ್ಮುಖದಲ್ಲಿ ಮದುವೆ ಆಗುತ್ತಿರುವುದು ಪುಣ್ಯದ ಕೆಲಸವಾಗಿದೆ ಎಂದರು.
ಆದರ್ಶ ಜೀವನ ನಡೆಸಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಯೂರೂ ನಿಲ್ಲಿಸಲು ಸಾಧ್ಯವಿಲ್ಲ. ಆ ಯೋಜನೆಗಳು ಸಮಾಜದ ಜನಸಾಮಾನ್ಯರ ಪರವಾಗಿದ್ದು, ವಿಶೇಷವಾಗಿ ಮಹಿಳೆಯರಿಗೆ ಮೀಸಲಾಗಿವೆ. ಭಾಗ್ಯಲಕ್ಷ್ಮಿ, ಮಡಿಲು, ವಿಧವಾ ವೇತನ ಮೊದಲಾದ ಯೋಜನೆಗಳು ಮಹಿಳೆಯರ ಪರವಾಗಿವೆ. ಈ ಯೋಜನೆಗಳು ಸಮಾಜದ ಕಟ್ಟೆಕಡೆಯ ವ್ಯಕ್ತಿಗೆ ದೊರಕುತ್ತವೆ. ಈ ಯೋಜನೆಗಳನ್ನು ಯಾರೂ ನಿಲ್ಲಿಸಲು ಸಾಧ್ಯವಿಲ್ಲ. ಉತ್ತಮ ಸೌಜನ್ಯ ನಡವಳಿಕೆಗಳನ್ನು ಮೈಗೊಡಿಸಿಕೊಂಡು ಆದರ್ಶ ಜೀವನ ನಡೆಸಬೇಕೆಂದು ನೂತನ ವಧು-ವರರನ್ನು ಹಾರೈಸಿದರು.
ಜನಪರ ಯೋಜನೆ: ಮಾಜಿ ವಿಧಾನಸಭಾಧ್ಯಕ್ಷ ಬಿ.ಜಿ. ಬಣಕಾರ ಸನ್ಮಾನ ಸ್ವೀಕರಿಸಿ ಮಾತನಾಡಿ, ಸರ್ಕಾರದ ಯೋಜನೆಗಳು ಜನಪರವಾಗಿದ್ದಾಗ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಸರಳ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡವರು ಉತ್ತಮ, ಸಾಮರಸ್ಯದ ಬದುಕನ್ನು ರೂಪಿಸಿಕೊಂಡು ಶ್ರೀ ಮಠದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಪುಣ್ಯ ಸಂಪಾದಿಸಬೇಕು ಎಂದರು.
ಶ್ರೀಗಳ ಕಾರ್ಯ ಶ್ಲಾಘನೀಯ: ಶಾಸಕ ಯು.ಬಿ. ಬಣಕಾರ ಮಾತನಾಡಿ, ತಾಲೂಕಿನ ಕಬ್ಬಿಣ ಕಂಥಿಮಠ ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಕವಾಗಿ ತನ್ನದೆ ಕೊಡುಗೆ ನೀಡುವ ಮೂಲಕ ಹೆಮ್ಮರವಾಗಿದೆ. ಶ್ರೀಗಳು ಸಹ ಎಲ್ಲ ವರ್ಗದವರನ್ನು ಸಮಾನವಾಗಿ ಕಾಣುವ ಮೂಲಕ ಸಮಾಜದ ಸತ್ಕಾರ್ಯ ಹಾಗೂ ಧರ್ಮ ಬೋಧನೆ ಮಾಡುವ ಮೂಲಕ ಸಮಾಜವನ್ನು ಸರಿದಾರಿಗೆ ತರುತ್ತಿರುವುದು ಶ್ಲಾಘನೀಯ. ಶಾಸಕನಾಗಿ ಕೊಟ್ಟ ಮಾತಿನಂತೆ ನಡೆದುಕೊಂಡು ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಉತ್ತಮ ಜೀವನ ಸಾಗಿಸಿ: ಸಾನ್ನಿದ್ಯ ವಹಿಸಿದ್ದ ಹರಿಹರ ಕಂಬಾಳಿಮಠದ ಗಂಗಾಧರ ಸ್ವಾಮೀಜಿ ಆಶೀರ್ವಚನ ನೀಡಿ, ಆಧುನಿಕ ಜಗತ್ತು ಶರವೇಗದಲ್ಲಿ ಓಡುತ್ತಿದೆ. ಇದರಿಂದಾಗಿ ನಾವೆಲ್ಲರೂ ಒತ್ತಡದ ಜೀವನ ಸಾಗಿಸುತ್ತ ಮನಸ್ಸು ಮಾಡಿರುವುದರಿಂದ ಭಗವಂತನ ಸ್ಮರಣೆ ಮರೆತು ಹೋಗಿದೆ. ಮಠಗಳು ಹಸನಾದ ಬದುಕು ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತಿವೆ. ಮಠಕ್ಕೆ ಬರುವಂಥವರು ಪರಿಶುದ್ಧ ಮನಸ್ಸಿನಿಂದ ಬರಬೇಕು. ಅಂದಾಗ ಮಾತ್ರ ಧರ್ಮ ತಿಳಿಯಲು ಸಾಧ್ಯ ಎಂದರು. ಇದೇ ಸಂದರ್ಭ 43 ಜೋಡಿ ವಧು-ವರರು ನೂತನ ದಾಂಪತ್ಯ ಜೀವನಕ್ಕೆ ಅಡಿ ಇಟ್ಟರು.
ಶಿವಲಿಂಗ ಶಿವಾಚಾರ್ಯ ಶ್ರೀ ಸಾನ್ನಿಧ್ಯ ವಹಿಸಿದ್ದರು. ಜಿಪಂ ಅಧ್ಯಕ್ಷ ಶಂಕರಣ್ಣ ಮಾತನವರ, ಸದಸ್ಯೆ ಶಾಂತವ್ವ ಹಾದಿಮನಿ, ಪಪಂ ಸದಸ್ಯ ಮಹೇಂದ್ರ ಬಡಳ್ಳ್ಳಿ, ಕೆಜೆಪಿ ತಾಲೂಕಾಧ್ಯಕ್ಷ ಮಹೇಶ ಗುಬ್ಬಿ, ಆನಂದಪ್ಪ ಹಾದಿಮನಿ, ಉಜನೇಶ ಪಿ.ಡಿ. ಬಸನಗೌಡ್ರ, ಚಿದಾನಂದಮಠದ, ಕೆ.ಎಚ್. ದಾನಪ್ಪ, ಉಜನೆಪ್ಪ  ಬಣಕಾರ, ಕುಮಾರಗೌಡ ಪಾಟೀಲ, ಎಸ್.ಬಿ. ಪಾಟೀಲ ಇನ್ನಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.