ಹಾವೇರಿ

ಎಲ್ಲ ವರ್ಗದ ಜನತೆಗೆ ಸಮರ್ಪಕ ಸೌಲಭ್ಯ: ಬಣಕಾರ

Published On :

ಹಿರೇಕೆರೂರು: ಸರ್ಕಾರದಿಂದ ಎಲ್ಲ ವರ್ಗದ ಜನತೆಗೆ ದೊರೆಯುವ ಸೌಲಭ್ಯಗಳು ಮಧ್ಯವರ್ತಿಗಳ ಪಾಲಾಗದಂತೆ ಗಮನಿಸಿ ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತಾಲೂಕಿನಲ್ಲಿರುವ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಮೂಲಕ ನನ್ನ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕಿನ ಹಳೇವೀರಾಪುರ ಗ್ರಾಮದ ಮುರುಡ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.  
ಅನೇಕ ವರ್ಷಗಳಿಂದ ತಮಗೆ ಎಲ್ಲ ಗ್ರಾಮಗಳ ಸಂಪರ್ಕ ಇರುವುದರಿಂದ ಪ್ರತಿ ಗ್ರಾಮದಲ್ಲಿ ಅಗತ್ಯವಾಗಿರುವ ಕಾಮಗಾರಿಗಳ ಬಗ್ಗೆ ನನಗೆ ಸಂಪೂರ್ಣ ಅರಿವಿದೆ. ಗ್ರಾಮಸ್ಥರು ಆ ಬಗ್ಗೆ ಗಮನ ಹರಿಸದಿದ್ದರೂ ನಾನೇ ಮೊದಲು ಅವುಗಳನ್ನು ಕೈಗೆತ್ತಿಕೊಂಡು ಅಭಿವೃದ್ಧಿಪಡಿಸುತ್ತೇನೆ.
ಜನತೆ ಯಾವುದೇ ಸಮಸ್ಯೆಗಳು ಎದುರಾದರೂ ನೇರ ತಮ್ಮನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಪಂ ಸದಸ್ಯ ಶಿವಣ್ಣ ಗಡಿಯಣ್ಣನವರ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಮಲ್ಲಿಕಾರ್ಜುನ ಬುರಡಿಕಟ್ಟಿ, ಗ್ರಾಮದ ಮುಖಂಡರಾದ ಬಸಲಿಂಗಪ್ಪಗೌಡ್ರ ಹಳೇಗೌಡ್ರ, ಶೇಖಪ್ಪ ದೀವಿಗಿಹಳ್ಳಿ, ಸುಭಾಷ ಪುರದಾಳ, ರಾಮನಗೌಡ ಪಾಟೀಲ, ಹೇಮನಗೌಡ ಹಳೇಗೌಡ್ರ, ವೀರಬಸಪ್ಪ ಪುರದಾಳ, ಮುನಿರ್‌ಸಾಬ್ ಬೆಣಗೇರಿ, ಚಂದ್ರು ದೀವಿಗಿಹಳ್ಳಿ, ಮಲ್ಲೇಶಪ್ಪ ಬುರಡಿಕಟ್ಟಿ, ಈರಪ್ಪ ತಳವಾರ, ವೀರಭದ್ರಯ್ಯ ಹಿರೇಮಠ ಮೊದಲಾದವರು ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಆರಾಧ್ಯಮಠ ಸ್ವಾಗತಿಸಿದರು. ಎಂ.ಎಸ್. ದೀವಿಗಿಹಳ್ಳಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.