5 ದಿನಕ್ಕೊಮ್ಮೆ ನೀರು
ಕನ್ನಡಪ್ರಭ ವಾರ್ತೆ, ಗದಗ, ಮೇ 22
ಗದಗ-ಬೆಟಗೇರಿ ಅವಳಿ ನಗರದ ಜನತೆಗೆ ಕನಿಷ್ಠ 5 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಈ ಕುರಿತು ಜಿಲ್ಲಾಧಿಕಾರಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಅವರು ಬುಧವಾರ ರಾತ್ರಿ ಜಿಲ್ಲಾಧಿಕಾರಿ ಸಭಾಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದರು. ಅವಳಿ ನಗರಗಳು ತೀವ್ರವಾದ ಕುಡಿವ ನೀರಿನ ಸಮಸ್ಯೆ ಎದುರಿಸುತ್ತಿರುವುದನ್ನು ಮನಗಂಡು ಅದರ ಬಗ್ಗೆ ವಿವರವಾದ ಚರ್ಚೆಯನ್ನು ಬುಧವಾರ ಅಧಿಕಾರಿಗಳ ಸಭೆಯಲ್ಲಿ ಮಾಡಲಾಗಿದೆ. ಈ ವಿಷಯವಾಗಿ ತಜ್ಞರ ಮತ್ತು ನಗರಸಭೆ ಸದಸ್ಯರ ಜತೆಗೆ ಸಮಾಲೋಚಿಸಿ ಕೆಲವೊಂದು ನಿರ್ಣಯ ತೆಗೆದುಕೊಳ್ಳಲಾಗಿದೆ. ಗುರುವಾರ ಮಧ್ಯಾಹ್ನದೊಳಗಾಗಿ ನೀರಿನ ವಿಷಯವಾಗಿ ತುರ್ತು ನಿಗಾ ಕೊಠಡಿ ಪ್ರಾರಂಭಿಸಲಾಗುವುದು. ಅಲ್ಲಿ ಒಬ್ಬ ಜವಾಬ್ದಾರಿ ಅಧಿಕಾರಿ ನೇಮಿಸಿ ಅವರು ಪ್ರತಿ 6 ತಾಸಿಗೆ ಒಮ್ಮೆ ಅಲ್ಲಿಗೆ ಬರುವ ದೂರುಗಳು ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ಕೊಡುವ ವ್ಯವಸ್ಥೆ ಮಾಡಲಾಗುವುದು.
ನಗರಸಭೆಯಲ್ಲಿರುವ ನೀರೆತ್ತುವ ಮೋಟರ್ ದುರಸ್ತಿಗೆ ಸಮಯ ಹಿಡಿಯುವುದರಿಂದ ಮೊಬೈಲ್ ರಿಪೇರಿ ವ್ಯಾನ್ ರೀತಿಯಲ್ಲಿ ತಕ್ಷಣದಲ್ಲಿಯೇ ಸ್ಥಳಕ್ಕೆ ಹೋಗಿ ಅವುಗಳನ್ನು ಸಾಧ್ಯವಾದರೇ ರಿಪೇರಿ ಮಾಡುವುದು ಇಲ್ಲವಾದರೇ ಅವುಗಳನ್ನು ತೆಗೆದುಕೊಂಡು ಬಂದು ತಕ್ಷಣದಲ್ಲಿಯೇ ರೀಪೇರಿ ಮಾಡುವಂತಹ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನಿಡಲಾಗಿದೆ. ಈ ಯೋಜನೆಯು ಇನ್ನೂ ಎರಡು ದಿನಗಳೊಳಗೆ ಜಾರಿಗೆ ಬರಲಿದೆ.
ಅವಳಿ ನಗರದ ವಿವಿಧ ಭಾಗಗಳಲ್ಲಿರುವ 10 ನೀರಿನ ಟ್ಯಾಂಕ್ಗಳು 90 ಲಕ್ಷ ಲೀಟರ್ ನೀರು ಸಂಗ್ರಹದ ಸಾಮರ್ಥ್ಯ ಹೊಂದಿವೆ. ಇವುಗಳ ಬಳಕೆ ಈವರೆಗೆ ಸಮರ್ಪಕವಾಗಿ ಆಗಿಲ್ಲ ಈ ಟ್ಯಾಂಕ್ ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಎಸಿ ಇಸ್ಲಾವುದ್ದಿನ ಗದ್ಯಾಳ ಇವರ ನೇತೃತ್ವದಲ್ಲಿ ಒಂದು ತಂಡ ರಚಿಸಲಾಗಿದೆ. ಮತ್ತು ನೀರು ಪೂರೈಕೆಗೆ 50 ಲಕ್ಷದಿಂದ 1 ಕೋಟಿ ಹೆಚ್ಚುವರಿ ಹಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಗ್ರಾಮೀಣ ಪ್ರದೇಶಗಳಾದ ಬಸಾಪುರ, ನಾಗಾವಿ ತಾಂಡಾ, ಯಲಿಶಿರುಂದ ಸೇರಿದಂತೆ ಕುಡಿವ ನೀರಿನ ಸಮಸ್ಯೆ ಇರುವ ಹಳ್ಳಿಗಳಲ್ಲಿ ಸಮಸ್ಯೆ ಬಗೆಹರಿಸಲು ಅಗತ್ಯವಾದ ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲಾಧಿಕಾರಿ ಅಂಜನಕುಮಾರ, ಸಿಇಓ ವೀರಣ್ಣ ತುರುಮರಿ, ಎಸಿ ಸಲ್ಲಾವುದ್ದಿನ ಗದ್ಯಾಳ ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

