ಮತದಾರರಿಗಾಗಿ ಶ್ರಮಿಸುವೆ: ಬಣಕಾರ
ಹಿರೇಕೆರೂರು: ತಾಲೂಕಿನ ಜನತೆ ತಮ್ಮ ಕುಟುಂಬದ ಓರ್ವ ಸದಸ್ಯ ಎಂದು ಭಾವಿಸಿ ವಿಧಾನಸಭೆ ಚುನಾವಣೆಯಲ್ಲಿ ತಮಗೆ ಮತಕೊಟ್ಟು ಗಲ್ಲಿಸಿ ಸಮಾಜದ ಸೇವೆಗೆ ಅವಕಾಶ ಕೊಟ್ಟಿದ್ದಾರೆ. ಮತದಾರರ ಕನಸನ್ನು ನನಸು ಮಾಡುವುದೆ ನನ್ನ ಗುರಿಯಾಗಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಅವರು ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ಶ್ರೀ ಆಂಜನೇಯ ದೇವರಿಗೆ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಸಮಾರಂಭದಲ್ಲಿ ಗ್ರಾಮಸ್ಥರಿಂದ ಸನ್ಮಾನ ಸ್ವಿಕರಿಸಿ ಮಾತನಾಡಿದರು. 14 ವರ್ಷಗಳಿಂದ ಶಾಸಕ ಪದವಿ ಇಲ್ಲದಿದ್ದರೂ ನಿಸ್ವಾರ್ಥ ಸಮಾಜ ಸೇವೆಯನ್ನು ಮನಗಂಡು ತಾಲೂಕಿನ ಮತದಾರರು ಚುನಾವಣೆಯಲ್ಲಿ ಅವಿರತವಾಗಿ ಶ್ರಮಿಸಿದ್ದೀರಿ. ಈ ಗೆಲವು ನನ್ನದಲ್ಲಿ ನಿಮ್ಮೆಲ್ಲರ ಗೆಲವು ಎಂದು ಭಾವ ತುಂಬಿ ನುಡಿದರು.
ಅಧಿಕಾರದ ಲಾಲಸೆಗೆ ಒಳಗಾದವರು ಜನತೆಯನ್ನು ಮರೆಯುತ್ತಾರೆ, ಆದರೆ ನನಗೆ ಅಧಿಕಾರ ಶಾಶ್ವತವಲ್ಲ, ಜನಪ್ರೀತಿಯೇ ಸಂತಸ ತಂದು ಕೊಡುತ್ತಿದೆ. ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದಾಗ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಬಳಿ ಬಂದು ಸಾರಾಯಿ ನಿಷೇಧ ಮಾಡಿ ನಮ್ಮ ಕಣ್ಣೀರನ್ನು ನಿಲ್ಲಿಸಿ ಎಂದು ಅಲವತ್ತುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಜನತೆಯ ಅಹವಾಲುಗಳನ್ನು ಸ್ವೀಕರಿಸಲು ಶೀಘ್ರದಲ್ಲಿಯೇ ಜನಸಂಪರ್ಕ ಕಚೇರಿ ಆರಂಭಿಸಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕುರುಬ ಸಮಾಜದವರು ಸಹ ಶಾಸಕ ಯು.ಬಿ. ಬಣಕಾರ ಅವರನ್ನು ಸನ್ಮಾನಿಸದರು.
ನಿವೃತ್ತ ಶಿಕ್ಷಕ ಎನ್.ಎನ್. ನಿಂಗನಗೌಡರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಉಪಾಧ್ಯಕ್ಷೆ ರೂಪಾ ಆಡೂರ, ಪಪಂ ಸದಸ್ಯ ಮಹೇಂದ್ರ ಬಡಳ್ಳಿ, ಗ್ರಾಪಂ ಅಧ್ಯಕ್ಷೆ ಪಾರ್ವತೆವ್ವ ತಳವಾರ, ಉಪಾಧ್ಯಕ್ಷೆ ಲೀಲಾವತಿ ಪಾಟೀಲ, ದತ್ತಾತ್ರಯ ರಾಯ್ಕರ, ನಿಂಗಪ್ಪ ದಂಡಗಿಹಳ್ಳಿ ಎಸ್.ಎಸ್. ಸಿರಿಗೌಡರ, ಪಿ.ಬಿ. ನಿಂಗನಗೌಡ್ರ, ಎಸ್.ಜಿ. ಶಿರಿಗೌಡ್ರ, ಶೇಖಪ್ಪ ಶಿವಕ್ಕನವರ ನಾಗೇಶಪ್ಪ ಹಂಚಿನಮನಿ. ವಿಜಯ ಹುಲ್ಮನಿ, ಮಾಲತೇಶ ಹಂಚಿನಮನಿ, ಹೂವನಗೌಡ ನಿಂಗನಗೌಡ್ರ, ಮಲ್ಲನಗೌಡ ಶಿರಿಗೌಡ್ರ, ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

