ಶೇ. 50ರ ರಿಯಾಯಿತಿ ದರದಲ್ಲಿ ಬೀಜ ವಿತರಣೆ
ಹಾನಗಲ್ಲ: ಕೃಷಿ ಇಲಾಖೆ ಸಣ್ಣ ಹಾಗೂ ಅತಿಸಣ್ಣ ರೈತರಿಗಾಗಿ ಶೇ. 50ರ ರಿಯಾಯತಿ ದರದಲ್ಲಿ ಬಿತ್ತನೆ ಬೀಜ ವಿತರಿಸುತ್ತಿದ್ದು, ರೈತ ಸಮುದಾಯ ಸರ್ಕಾರದ ಈ ಯೋಜನೆ ಸದುಪಯೋಗಪಡಿಸಿಕೊಂಡು ಉತ್ತಮ ಕೃಷಿಗೆ ಮುಂದಾಗಬೇಕು ಎಂದು ಶಾಸಕ ಮನೋಹರ ತಹಸೀಲ್ದಾರ್ ರೈತರಿಗೆ ಕರೆ ನೀಡಿದರು.
ಸೋಮವಾರ ಇಲ್ಲಿನ ಎಪಿಎಂಸಿ ಆವರಣದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧಿಕಾರಿಗಳೊಂದಿಗೆ ಸಹಕರಿಸಿ: ರೈತರ ಬೇಡಿಕೆಗೆ ಅನುಗುಣವಾಗಿ ಈ ಪ್ರದೇಶಕ್ಕೆ ಹೊಂದುವಂತಹ ತಳಿಗಳ ಬಿತ್ತನೆ ಬೀಜಗಳನ್ನು ಪೂರೈಸುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿಸಿದ ಅವರು, ಈಗಾಗಲೆ ಲಭ್ಯವಿರುವ ಬತ್ತ, ಗೋವಿನಜೋಳದ ವಿವಿಧ ತಳಿಗಳು ಮಾರಾಟಕ್ಕೆ ಸಿಗುತ್ತಿದ್ದು, ಮುಂಗಾರು ಪ್ರಾರಂಭವಾಗುವ ಹೊತ್ತಿಗೆ ಇನ್ನುಳಿದ ತಳಿಗಳ ಬೀಜಗಳನ್ನು ಪೂರೈಸಲಾಗುವುದು. ರೈತರು ಇಲಾಖೆ ಅಧಿಕಾರಿಗಳೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಬಿತ್ತನೆ ಬೀಜ ದಾಸ್ತಾನು: ಬೀಜದ ಕುರಿತಂತೆ ಸಹಾಯಕ ಕೃಷಿ ನಿರ್ದೇಶಕ ಎನ್.ಜಿ. ಅಮೃತೇಶ್ವರ ಮಾತನಾಡಿ, ತಾಲೂಕಿನ ಮೂರು ಹೋಬಳಿಗಳಲ್ಲಿ ಬತ್ತದ ತಳಿಗಳಾದ 1001, 1010, ಅಭಿಲಾಷ, ಜಯಾ ಹಾಗೂ ಗೋವಿನ ಜೋಳದ ತಳಿಗಳಾದ ಸಿ.ಪಿ, ಪಯೋನಿಯರ್, ಕಾವೇರಿ, ಮಾನ್ಸೆಂಟ್ ಹಾಗೂ ಪೂರಕ ಗೊಬ್ಬರಗಳಾದ ಜಿಂಕ್, ಜಿಪ್ಸಂ, ಬೋರ್ಯಾಕ್ಷ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನುಗೊಳಿಸಲಾಗಿದೆ. ಇನ್ನಿತರ ಬೀಜ ತಳಿಗಳಾದ ಹತ್ತಿ, ಸೋಯಾ ಅವರೆ, ಗೋವಿನಜೋಳ, ಜೋಳ, ಶೇಂಗಾ ಮುಂತಾದವು ಅವಶ್ಯಕತೆಗನುಗುಣವಾಗಿ ಸಧ್ಯದಲ್ಲೇ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನುಗೊಳಿಸಲಾಗುವುದು. ಆಯಾ ಕ್ಷೇತ್ರಗಳ ರೈತರು ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳನ್ನು ಪೂರೈಸಬೇಕೆಂದು ಮನವಿ ಮಾಡಿದರು.
ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರು, ಸದಸ್ಯ ಕಲವೀರಪ್ಪ ಪವಾಡಿ, ಮಧು ಪಾಣಿಗಟ್ಟಿ, ಜಿಪಂ ಸದಸ್ಯ ಮಹದೇವಪ್ಪ ಭಾಗಸರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಕಾಂಗ್ರೆಸ್ ಪಕ್ಷದ ಕಾನೂನು ಘಟಕದ ರಾಜ್ಯ ಕಾರ್ಯದರ್ಶಿ ಜಿ.ವಿ. ಕಂಬಾಳಿಮಠ, ಜಿ.ಎಸ್. ದೇಶಪಾಂಡೆ, ಯಲ್ಲಪ್ಪ ಶೇರಖಾನಿ, ಜಿ.ಎಂ. ಮುಲ್ಲಾ, ಕೇಶವ ಶೇಷಗಿರಿ, ಕೃಷಿ ಅಧಿಕಾರಿಗಳಾದ ಸಂಗಮೇಶ ಹಕ್ಲಪ್ಪನವರ, ಎಸ್,ಆರ್. ಹೊಳೆಪ್ಪನವರ ಇದ್ದರು.
ಸೋಮವಾರ ಬೀಜ ವಿತರಣೆ ಸಂದರ್ಭದಲ್ಲಿ ಸುರಿದ ಗುಡುಗು-ಸಿಡಿಲು ಸಹಿತ ಮಳೆಯಿಂದ ರೈತರ ಮುಖದಲ್ಲಿ ಸಂತಸ ಕಂಡು ಬಂದಿತು. ರೈತರು ಮಳೆಯಲ್ಲಿಯೇ ಸಾಲುಗಟ್ಟಿ ಬೀಜಗಳನ್ನು ಒಯ್ಯುತ್ತಿದ್ದ ದೃಶ್ಯ ಕಂಡು ಬಂದಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

