ಹಾವೇರಿ

ನಾಳೆಯಿಂದ ಕನಕಗಾನಾಮೃತ ಬಾನುಲಿ ಸರಣಿ

Published On :

ಹಾವೇರಿ: ಆಕಾಶವಾಣಿ ಧಾರವಾಡ ಕೇಂದ್ರ ಕನಕದಾಸರ ಕೀರ್ತನೆಗಳನ್ನು ಆಧರಿಸಿ ಸಿದ್ಧಪಡಿಸಿರುವ 'ಕನಕ ಗಾನಾಮೃತ' ಬಾನುಲಿ ಸರಣಿಯನ್ನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜಕತ್ವದಲ್ಲಿ ಕರ್ನಾಟಕದ ಎಲ್ಲ ಬಾನುಲಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರ ಮಾಡಲಿದೆ. ನ. 7ರಿಂದ ಪ್ರತಿ ಗುರುವಾರ ಮುಂಜಾನೆ 7.15ಕ್ಕೆ 13 ಕಂತುಗಳಲಿ ಪ್ರಸಾರವಾಗಲಿರುವ ಕನಕ ಗಾನಾಮೃತ ಸರಣಿಯಲ್ಲಿ ಕನಕದಾಸರ ಬದುಕು, ಸಾಹಿತ್ಯ, ತತ್ವ ಪ್ರತಿಪಾದನೆ, ಸಂಘರ್ಷ, ಸಾಮಾಜಿಕ ಸಾಮರಸ್ಯ ಕುರಿತು ಪ್ರಾತಿನಿಧಿಕ ಹಾಡುಗಳನ್ನು ಆಧರಿಸಿ ಮಾಹಿತಿ ನೀಡಲಾಗುವುದು. ಡಾ೤ ಶ್ರೀಧರ ಹೆಗಡೆ ಭದ್ರನ್ ಈ ಸರಣಿಗೆ ಸಾಹಿತ್ಯ ಒದಗಿಸಿದ್ದು, ದಿವಾಕರ ಹೆಗಡೆ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ ಎಂದು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಸ್.ವೈ.ಬಸವರಾಜಪ್ಪ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.