ಶಿವಯೋಗಿತ್ರಯರ ಪುರಾಣ ಮಂಗಲೋತ್ಸವ
ಹಾನಗಲ್ಲ: ತಾಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ಸೋಮಲಿಂಗೇಶ್ವರ ಗಜಾನನ ಯುವಕ ಮಂಡಳದ ಆಶ್ರಯದಲ್ಲಿ 11 ದಿನ ನಡೆದ ಶಿವಯೋಗಿ ತ್ರಯರಾದ ಶ್ರೀ ಕುಮಾರ ಶಿವಯೋಗಿಗಳು, ಶ್ರೀ ಪಂಚಾಕ್ಷರ ಗವಾಯಿಗಳು ಹಾಗೂ ಡಾ ಪುಟ್ಟರಾಜ ಕವಿ ಗವಾಯಿಗಳ ಜೀವನ ದರ್ಶನ ಪ್ರವಚನದ ಮಹಾ ಮಂಗಲೋತ್ಸವದಲ್ಲಿ, ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳಿಗೆ ಭಕ್ತರಿಂದ ತುಲಾಭಾರ ನಡೆಯಿತು.
ಮಹಾ ಮಂಗಲೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು, ಧಾರ್ಮಿಕ ಪದ್ಧತಿ ಮತ್ತು ಸಂಪ್ರದಾಯಗಳು ಸಮಾಜಕ್ಕೆ ಸನ್ಮಾರ್ಗ ತೋರುತ್ತವೆ. ದಾರ್ಶನಿಕರು, ಮಹಾಪುರುಷರ ಜೀವನ ಕುರಿತಾದ ಪ್ರವಚನಗಳಲ್ಲಿ ಭಕ್ತಿ-ಭಾವದಿಂದ ಪಾಲ್ಗೊಳ್ಳುವ ಅಗತ್ಯವಿದೆ ಎಂದರು.
ಬಮ್ಮನಹಳ್ಳಿ ವಿರಕ್ತ ಮಠದ ಶಿವಯೋಗೀಶ್ವರ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀಗಳು ಮತ್ತು ಹೋತನಹಳ್ಳಿ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. 11 ದಿನ ಜೀವನ ದರ್ಶನ ಪ್ರವಚನ ನೀಡಿದ ಇಳಕಲ್ನ ಅನ್ನದಾನೀಶ್ವರ ಹಿರೇಮಠರನ್ನು ಸನ್ಮಾನಿಸಲಾಯಿತು. ಪ್ರವಚನದ ಅಂಗವಾಗಿ 1008 ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.
ಸೋಮಲಿಂಗೇಶ್ವರ ಗಜಾನನ ಯುವಕ ಮಂಡಳದ ಸಿದ್ದು ಪೂಜಾರ, ಮಾಲತೇಶ ಮಾಳಿ, ರಾಮಸಿಂಗ್ ರಜಪೂತ್, ನಿಂಗನಗೌಡ ಪಾಟೀಲ, ಮಂಜುನಾಥ ಪಾಟೀಲ, ನಿಂಗಪ್ಪ ಕೊಟೆಣ್ಣನವರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

