ಹಾವೇರಿ

ನಿರುದ್ಯೋಗ ನಿವಾರಣೆ ಪದವೀಧರರ ಒಕ್ಕೂಟದ ಗುರಿ: ಟಿ. ಈಶ್ವರ್

Published On :

ಬ್ಯಾಡಗಿ:  ಉದ್ಯೋಗ ಭರವಸೆಯಿಲ್ಲದೆ ಶಿಕ್ಷಣ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ. ನಿರುದ್ಯೋಗ ನಿವಾರಣೆಯೇ ತಮ್ಮ ಗುರಿ ಎಂದು ಅಖಿಲ ಕರ್ನಾಟಕ ಪದವೀಧರರ ಒಕ್ಕೂಟದ ಅಧ್ಯಕ್ಷ ಹಾಗೂ ರಾಜ್ಯ ಕಾಂಗ್ರೆಸ್ ಪರಿಶಿಷ್ಟ ಪಂಗಡಗಳ ಅಧ್ಯಕ್ಷ ಟಿ. ಈಶ್ವರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅವರು, ನಿರುದ್ಯೋಗ ದೇಶಕ್ಕೆ ಅಂಟಿದ ಪಿಡುಗು. ಪದವೀಧರರಿಗೆ ಉದ್ಯೋಗ ಭರವಸೆ ಕೇವಲ ಚುನಾವಣಾ ಗಿಮಿಕ್ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಒಕ್ಕೂಟವು ಇದನ್ನು ಆದ್ಯತೆಯಾಗಿ ಪರಿಗಣಿಸಿದೆ ಎಂದರು.
ಅರೆ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಪದವೀಧರರಿಗೆ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲ. ನಿವೃತ್ತ ನೌಕರರು, ನ್ಯಾಯವಾದಿಗಳು, ಸಾಹಿತಿಗಳು, ವೈದ್ಯರನ್ನು ಒಳಗೊಂಡ ಒಕ್ಕೂಟ ಅವರೆಲ್ಲರಿಗೂ ನ್ಯಾಯ ಒದಗಿಸಲು ಬದ್ಧವಾಗಿದೆ. ಕಾರವಾರ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿರುವ ಕಾರ್ಯಕರ್ತರು 16 ಸಾವಿರ ಹೊಸ ಮತದಾರರನ್ನು ನೋಂದಣಿ ಮಾಡಿಸಿದ್ದಾರೆ. ಇನ್ನೂ 4 ಸಾವಿರ ಪದವೀಧರರನ್ನು ತಲುಪಲಿದ್ದೇವೆ ಎಂದರು.
ನ. 15ರ ಬಳಿಕ ನಡೆಯುವ 2ನೇ ಹಂತದ ನೋಂದಣಿ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಆದ್ಯತೆ ನೀಡಲಡುವ ಇಂಗಿತ ವ್ಯಕ್ತಪಡಿಸಿದ ಅವರು, ಅಖಿಲ ಕರ್ನಾಟಕ ಪದವೀಧರರ ಒಕ್ಕೂಟವು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲಿದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪಕ್ಷ ಸೂಚಿಸಿದಲ್ಲಿ ತಾವೇ ಸ್ಪರ್ಧಿಸುವೆ. ಇಲ್ಲದಿದ್ದರೆ, ಅಧಿಕೃತ ಅಭ್ಯರ್ಥಿಯನ್ನು ಬೆಂಬಲಿಸುವೆ ಎಂದರು.
ಶಾಸಕ ಬಸವರಾಜ ಶಿವಣ್ಣನವರ, ಮುಖಂಡರಾದ ಎಸ್.ಸಿ. ಶಿಡೇನೂರ, ಎಸ್.ಆರ್. ಪಾಟೀಲ, ದಾನಪ್ಪ ಚೂರಿ, ಸುರೇಶಗೌಡ ಪಾಟೀಲ, ಹುಚ್ಚನಗೌಡ ಲಿಂಗನಗೌಡ್ರ, ರಮೇಶ ಸುತ್ತಕೋಟಿ, ಮಂಜುನಾಥ ಬೋವಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.