ಹಾವೇರಿ

ಹಾನಗಲ್ಲ: ಕಲ್ಲಬಾವಿ ಒತ್ತುವರಿ ತೆರವಿಗೆ ಮನವಿ

Published On :

ಹಾನಗಲ್ಲ: ನಗರದ ಹೃದಯ ಭಾಗದಲ್ಲಿರುವ ಕಲ್ಲಭಾವಿಯ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿಪಡಿಸುವ ಮೂಲಕ ಸಾರ್ವಜನಿಕ ಸದುಪಯೋಗಕ್ಕೆ ಅನುವು ಮಾಡಿಕೊಡಬೇಕು ಎಂದು ನಾಗರಿಕರು ಪುರಸಭೆ ಮುಖ್ಯಾಧಿಕಾರಿಗೆ ಮನವಿ ನೀಡಿ ಒತ್ತಾಯಿಸಿದರು.
ಕಲ್ಲಭಾವಿ ಸುತ್ತಲಿನ ಪ್ರದೇಶವನ್ನು ಕೂಡಲೇ ಮೋಜಣಿ ಮಾಡಿಸಿ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿ ಪಡಿಸಬೇಕು. ಹಲವು ವರ್ಷಗಳಿಂದ ಕಲ್ಲಭಾವಿ ಹೂಳು ತುಂಬಿ ಮಲಿನಗೊಂಡಿದೆ. ಅದನ್ನು ನಗರದ ಕುರುಬ ಬಾವಿ ಮಾದರಿಯಲ್ಲಿ ಅಭಿವೃದ್ಧಿಗೊಳಿಸಿ ಅಂತರ್ಜಲ ಹೆಚ್ಚಿಸಲು ಸಹಕರಿಸಬೇಕು. ಕಲ್ಲಭಾವಿಯನ್ನು ಈ ಭಾಗದ ಜನರು ಧಾರ್ಮಿಕ ಕಾರ್ಯಗಳಿಗೆ ಬಳಸುತ್ತಿದ್ದು, ಅಲ್ಲಿ ಸ್ವಚ್ಛ ಹಾಗೂ ಸುಂದರ ಪರಿಸರ ನಿರ್ಮಿಸಬೇಕೆಂದು ಸಾರ್ವಜನಿಕರ ಮನವಿಯಲ್ಲಿ ತಿಳಿಸಿದ್ದಾರೆ.
ಗಣ್ಯರಾದ ಮನೋಹರ ಬಮ್ಮನಹಳ್ಳಿ, ರಮೇಶ ಹುನಗನಹಳ್ಳಿ, ಪ್ರವೀಣ ಸುಲಾಖೆ, ಶಿವಾಜಿ ಆರೇರ, ಗುಲಾಂ ಅಹಮ್ಮದ ಮಾಸನಕಟ್ಟಿ, ಮಹೇಶ ಕಾಗಿನೆಲ್ಲಿ, ಹನುಮಂತಪ್ಪ ಹಾಲಗೊಲ್ಲರ, ಮಾಲತೇಶ ಪೂಜಾರ, ಸಿದ್ದರಾಮಪ್ಪ ಚಿಕ್ಕಣ್ಣನವರ, ದುಶ್ಯಂತ ನಾಗರವಳ್ಳಿ, ಪ್ರಕಾಶ ಹುಳ್ಳಿಕಾಶಿ, ಬಿ.ಆರ್. ಕುಂಟೆ, ಮಹೇಶ ಕಾಗಿನೆಲ್ಲಿ, ರಾಜೇಶ ಹುರಕಡ್ಲಿ, ಮಾರುತಿ ತಾಂದಳೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.