ಆಟೋ ಚಾಲಕರಿಗೆ ಸೌಜನ್ಯವಿರಲಿ: ಅಂಗಡಿ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ನ. 14
ಆಟೋ ಚಾಲಕರು ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವ ಮೂಲಕ ನಾಗರಿಕರ ಪ್ರೀತಿಗೆ ಪಾತ್ರರಾಗಬೇಕೆಂದು ರಾಜ್ಯ ವೀರಶೈವ ಪಂಚಮಸಾಲಿ ಸಮಾಜದ ಯುವ ಅಧ್ಯಕ್ಷ ಮಲ್ಲಣ್ಣ ಅಂಗಡಿ ಹೇಳಿದರು.
ತಾಲೂಕು ಆಟೋ ಚಾಲಕ-ಮಾಲೀಕರ ಸಂಘದ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹದೇವ ಆಟೋ ನಿಲ್ದಾಣದಲ್ಲಿ 58ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಕೇಂದ್ರ ಹಾವೇರಿಗಿಂತಲೂ ಹೆಚ್ಚು ಬೆಳವಣಿಗೆ ಸಾಧಿಸಿರುವ ಹಾಗೂ ಜನಸಂಖ್ಯೆ ಇರುವ ರಾಣಿಬೆನ್ನೂರಲ್ಲಿ ಆಟೋಗಳೂ ಜಾಸ್ತಿ ಇವೆ. ಚಾಲಕರು ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ರಾತ್ರಿ ವೇಳೆ ಬಸ್ ಅಥವಾ ರೈಲು ನಿಲ್ದಾಣದಿಂದ ಪ್ರಯಾಣಿಕರನ್ನು ಸರಿಯಾದ ಜಾಗಕ್ಕೆ ತಲುಪಿಸಿ. ಯೋಗ್ಯ ದರವನ್ನು ಮಾತ್ರ ಪಡೆಯಿರಿ. ಲಾಭದ ನಿರೀಕ್ಷೆಯಲ್ಲಿ ಪ್ರಯಾಣಿಕರಿಗೆ ಹೊರೆಯಾಗಬೇಡಿ ಎಂದು ಸಲಹೆ ನೀಡಿದರು.
ಸಂಘದ ತಾಲೂಕು ಅಧ್ಯಕ್ಷ ಬಿ.ಎಂ. ಜಯದೇವ ಮಾತನಾಡಿ, ನಾಡು ನುಡಿ ಹಾಗೂ ಕನ್ನಡಿಗರ ರಕ್ಷಣೆಗೆ ಶ್ರಮಿಸುತ್ತಿರುವ ಆಟೋ ಚಾಲಕರಿಗೆ ಸರ್ಕಾರ ಸೂಕ್ತ ರಕ್ಷಣೆ ಹಾಗೂ ಸೌಲಭ್ಯ ನೀಡಬೇಕೆಂದು ಆಗ್ರಹಿಸಿದರು.
ಯುವ ಮುಖಂಡ ನಾಗರಾಜ ಪವಾರ, ನಗರಸಭೆ ಮಾಜಿ ಸದಸ್ಯ ರಮೇಶ ಗುತ್ತಲ, ಸೈಯದ ಶಕೀಲ, ಅಜಯ ಹುಲ್ಲತ್ತಿ, ನೀತು ಮುಕ್ತೆನಹಳ್ಳಿ, ಹನುಮಂತಪ್ಪ ಎಣ್ಣಿಮನಿ ಮಾತನಾಡಿದರು. ಮೈಲಾರ ಮಹದೇವ ಅಟೋ ನಿಲ್ದಾಣದ ಅಧ್ಯಕ್ಷ ಜಗದೀಶ ಜೋಗೇರ ಅಧ್ಯಕ್ಷತೆ ವಹಿಸಿದ್ದರು. ಹನುಮಂತಪ್ಪ ಮುಕ್ತೇನಹಳ್ಳಿ, ಪ್ರಕಾಶ ಹಲಗೇರಿ, ಮಂಜು ಚಿನ್ನಿಕಟ್ಟಿ, ಅಜಯ ಗಂಗಾವತಿ, ಸಂತೋಷ ಕಮದೋಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

