ವೋಲ್ವೊ ಬಸ್ ತನಿಖೆ: ಜಮೀರ್ ಮನವಿ
ಹಾವೇರಿ: ಆಂಧ್ರದಲ್ಲಿ ಈಚೆಗೆ ನಡೆದ ವೋಲ್ವೋ ಬಸ್ ದುರಂತಕ್ಕೂ ಇಲ್ಲಿ ನಡೆದ ಘಟನೆಗೂ ಸಾಮ್ಯವಿದೆ. ಪ್ರಯಾಣಿಕರು ಕೆಳಗಿಳಿಯಲು ಅವಕಾಶ ಇರದ ರೀತಿಯಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು ಬಸ್ನಲ್ಲಿದ್ದವರು ಸಾಯುವಂತಾಗಿದೆ. ಆದ್ದರಿಂದ ಮಲ್ಟಿ ಆ್ಯಕ್ಸಿಲ್ ವೋಲ್ವೋ ಬಸ್ಸಿನಲ್ಲೇ ತಾಂತ್ರಿಕ ತೊಂದರೆ ಇರುವ ಶಂಕೆಯಿದೆ. ಈ ಬಗ್ಗೆ ಸರ್ಕಾರ ಸಮಗ್ರ ತನಿಖೆ ಕೈಗೊಳ್ಳಬೇಕು ಎಂದು ನ್ಯಾಶನಲ್ ಟ್ರಾವೆಲ್ಸ್ ಮಾಲೀಕ ಹಾಗೂ ಶಾಸಕ ಜಮೀರ್ ಅಹ್ಮದ್ ಆಗ್ರಹಿಸಿದರು.
ಹಾವೇರಿ ಸಮೀಪ ಬೆಂಕಿ ಹೊತ್ತಿಕೊಂಡು ಬಸ್ ದುರಂತಕ್ಕೀಡಾದ ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಅವರು, ಘಟನೆಯಲ್ಲಿ ಚಾಲಕನ ಸಣ್ಣ ತಪ್ಪು ಇರಬಹುದು. ಆದರೆ, ಹೆದ್ದಾರಿಯಲ್ಲಿ ನಿತ್ಯ ಹತ್ತಾರು ಅಪಘಾತಗಳು ನಡೆಯುತ್ತವೆ. ಮೂರ್ನಾಲ್ಕು ಪಲ್ಟಿ ಹೊಡೆದರೂ ಪ್ರಯಾಣಿಕರು ಸುರಕ್ಷಿತವಾಗಿರುತ್ತಾರೆ. ಆದರೆ ವೋಲ್ವೋ ಬಸ್ಸಿನಲ್ಲೇ ಈ ರೀತಿ ದುರಂತ ಸಂಭವಿಸುತ್ತಿವೆ. ಇದು ಹೊಸ ವಾಹನ. ಕಳೆದ ತಿಂಗಳಷ್ಟೇ ನೋಂದಣಿ ಮಾಡಿ ಸೇವೆ ಆರಂಭಿಸಲಾಗಿದೆ. ಇಂಥ ದುರ್ಘಟನೆ ಮುಂದೆ ಆಗಬಾರದು. ಅದಕ್ಕಾಗಿ ಹೊಸ ಮಾದರಿಯ ವೋಲ್ವೋ ಬಸ್ಸಿನಲ್ಲೇ ತಾಂತ್ರಿಕ ಸಮಸ್ಯೆ ಇದೇಯೇ ಎಂಬುದನ್ನು ತನಿಖೆ ಮಾಡಿಸಬೇಕು ಎಂದು ಸರ್ಕಾರ ಹಾಗೂ ಸಾರಿಗೆ ಸಚಿವರನ್ನು ಒತ್ತಾಯಿಸುವುದಾಗಿ ಹೇಳಿದರು.
ಸಾರಿಗೆ ಸಂಸ್ಥೆಯೂ ಇಂಥ ವೋಲ್ವೋ ಬಸ್ಗಳ ಸೇವೆ ನೀಡುತ್ತಿದೆ. ಮುಂದೆ ಆಗಬಹುದಾದ ದುರಂತ ತಪ್ಪಿಸಲು ಸರ್ಕಾರ ಈ ನಿಟ್ಟಿನಲ್ಲಿ ಸಮಗ್ರ ತನಿಖೆ ಕೈಗೊಳ್ಳಬೇಕು. ನಾವೂ 40 ವರ್ಷಗಳಿಂದ ಸಾರಿಗೆ ಸೇವೆ ನೀಡುತ್ತಿದ್ದು, ಇಂಥ ದುರ್ಘಟನೆ ಸಂಭವಿಸಿರಲಿಲ್ಲ. ನಮ್ಮಿಂದ ಏನಾದರೂ ತಪ್ಪಾಗಿದ್ದರೂ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದನ್ನು ಸ್ವಾಗತಿಸುತ್ತೇನೆ. ಮೃತಪಟ್ಟ 7 ಜನರ ಕುಟುಂಬಕ್ಕೆ ತಲಾ ರು. 5 ಲಕ್ಷ ಪರಿಹಾರ ನೀಡುವುದಾಗಿ ಜಮೀರ್ ಅಹ್ಮದ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

