ಪಶು ಆಸ್ಪತ್ರೆಗೆ ಬೀಗ: ಪ್ರತಿಭಟನೆ
ಶಿಗ್ಗಾಂವಿ: ಜಾನುವಾರು ಹಾಗೂ ಕುರಿಗಳು ಹಲವಾರು ಕಾಯಿಲೆಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದರೂ ಚಿಕಿತ್ಸೆ ನೀಡಲು ಪಶು ವೈದ್ಯರು ನಿಗಾ ವಹಿಸುತ್ತಿಲ್ಲ ಎಂದು ಆರೋಪಿಸಿ, ತಾಲೂಕು ಪಶು ಆಸ್ಪತ್ರೆಗೆ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಶುಕ್ರವಾರ ಬೀಗ ಜಡಿದು, ಪ್ರತಿಭಟನೆ ನಡೆಸಿದ್ದಾರೆ.
ರಾಜೀವ ನಗರದ ನಿವಾಸಿ ಅಶೋಕ ಕೋಂಡೊಜಿ ಸಾಕಿದ್ದ 40ಕ್ಕೂ ಹೆಚ್ಚು ಕುರಿಗಳು ರೋಗದಿಂದ ಸಾಯುತ್ತಿವೆ. ಪರೀಕ್ಷಿಸಿ, ಚಿಕಿತ್ಸೆ ನೀಡುವಂತೆ ಪಶು ವೈದ್ಯರನ್ನು ಬೇಡಿಕೊಂಡರೂ ಸ್ಥಳಕ್ಕೆ ಬಾರದೆ ಕುರಿಗಳು, ಮೇಕೆಗಳು ಸಾಯುತ್ತಲೇ ಇವೆ. ಇದರಿಂದ ಬೇಸತ್ತ ಕುರಿ ಸಾಕಣೆದಾರನ ಜತೆ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಪಟ್ಟಣದ ಹಳೆ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ತಾಲೂಕು ಪಶು ಚಿಕಿತ್ಸಾಲಕ್ಕೆ ಬೀಗ ಹಾಕಿ, ಪ್ರತಿಭಟನೆಗಿಳಿದರು.
ತಾಲೂಕು ಪಶು ವೈದ್ಯಾಧಿಕಾರಿ ಪಾಟೀಲ ಸ್ಥಳಕ್ಕೆ ಆಗಮಿಸಿ, ಸಿಬ್ಬಂದಿ ಕೊರತೆ ಇದೆ. ಮೇಲಧಿಕಾರಿಗಳಿಗೆ ವಿಷಯ ತಿಳಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಸಬೂಬು ಹೇಳಲು ಮುಂದಾದರು. ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ದುರಗಪ್ಪ ವಡ್ಡರ ಮಾತನಾಡಿ, ಯಾವುದೆ ಸಬೂಬು ಹೇಳದೆ ಸತ್ತ ಕುರಿಗಳಿಗೆ ಸರ್ಕಾರದಿಂದ ಪರಿಹಾರ ಕೋಡಿ ಎಂದು ಪಟ್ಟು ಹಿಡಿದರು. ಸತ್ತ ಮೇಕೆ ಶವಪರೀಕ್ಷೆ ಮಾಡಿ ಉಳಿದವುಗಳಿಗೆ ಚಿಕಿತ್ಸೆ ನೀಡುವ ಭರವಸೆ ಮೇರೆಗೆ ಪ್ರತಿಭಟನೆ ಹಿಂಪಡೆದರು. ಜಯ ಕರ್ನಾಟಕ ತಾಲೂಕು ಉಪಾಧ್ಯಕ್ಷ ಈರಪ್ಪ ಹಳೆಪ್ಪನವರ, ದೇವರಾಜ ವಡ್ಡರ, ವಿಠ್ಠಲ ವಡ್ಡರ, ವಿನಯ ವಡ್ಡರ, ಶಿವರಾಜ ವಡ್ಡರ, ಮಹೇಶ ವಡ್ಡರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

