ಹಾವೇರಿ

ರೈತರ ಸಮಸ್ಯೆಗೆ ಸ್ಪಂದಿಸಿ: ಗೌಡ

Published On :

ಹಿರೇಕೆರೂರು: ರಾಜ್ಯದಲ್ಲಿರುವ ರೈತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಶ್ರಮಿಸುತ್ತಿಲ್ಲ. ರೈತರೇ ಸಂಘಟಿತರಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ರೈತ ಸಂಘದ ರಾಜ್ಯಾಧ್ಯಕ್ಷ ಜೆ.ಎ. ನಾರಾಯಣಗೌಡ ತಿಳಿಸಿದರು.
ತಾಲೂಕಿನ ಹಾದ್ರಿಹಳ್ಳಿ ಗ್ರಾಮದಲ್ಲಿ ರೈತ ಸಂಘದ ಗ್ರಾಮ ಘಟಕದ ನಾಮಫಲಕ ಉದ್ಘಾಟಿಸಿದ ಅವರು, ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಯೋಗ್ಯ ದರ ನಿಗದಿಪಡಿಸದ ಕಾರಣ, ಅನ್ನದಾತರು ಸಂಕಷ್ಟದಲ್ಲಿದ್ದಾರೆ. ಅವರ ಸಮಸ್ಯೆ ಪರಿಹರಿಸಲು ಸರ್ಕಾರಗಳು ಸಕರಾತ್ಮಕವಾಗಿ ಚಿಂತಿಸಿಲ್ಲ. ಬೆಳೆಗೆ ಉತ್ತಮ ಮಾರುಕಟ್ಟೆ ಕಲ್ಪಿಸಿ, ಯೋಗ್ಯ ಬೆಂಬಲ ಬೆಲೆ ನಿಗದಿಪಡಿಸುವ ಮೂಲಕ ನೀಡುವ ರೈತರ ಹಿತ ಕಾಪಾಡಬೇಕು. ರೈತರನ್ನು ಕಡೆಗಣಿಸಿದವರು ಅಧಿಕಾರದಲ್ಲಿ ಮುಂದುವರೆಯಲು ಸಾದ್ಯವಿಲ್ಲ ಎಂದರು.
ತಾಲೂಕಾಧ್ಯಕ್ಷ ರಾಜಶೇಖರ ದೂದಿಹಳ್ಳಿ ಮಾತನಾಡಿ, ಕಳಪೆ ಹತ್ತಿ ಬೀಜ, ವಿದ್ಯುತ್ ಅವ್ಯವಸ್ಥೆ, ಗೋವಿನ ಜೋಳ ಹಾಗೂ ಹತ್ತಿಗೆ ಯೋಗ್ಯ ಬೆಲೆ ನಿಗದಿಯಾಗದಿರುವುದು, ತುಂಗಾ ಮೇಲ್ದಂಡೆ ಕಾಲುವೆಗೆ ಭೂಮಿ ನೀಡಿದ ರೈತರಿಗೆ ಪರಿಹಾರ ವಿಳಂಬ ಕಅುರಿತು ರಾಜಕಾರಣಿಗಳಿಗೆ ಗೊತ್ತಿದ್ದರೂ ತಿಳಿಯದವರಂತೆ ನಟಿಸುತ್ತಿದ್ದಾರೆ. ತಾಲೂಕಿನ ಸಮಸ್ಯೆಗಳತ್ತ ಗಮನ ಹರಿಸಬೇಕೆಂದು ಮನವಿ ಮಾಡಿದರು.
ರೈತ ಸಂಘದ ಕಾರ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ, ಕೋಶಾಧ್ಯಕ್ಷ ಶ್ಯಾಮಸುಂದರ ಕೀರ್ತಿ, ಗದಿಗೆಪ್ಪ ದಾನಮ್ಮನವರ ಮಾತನಾಡಿದರು. ರೈತರಾದ ಸುಭಾಸ ಗವಿಯಪ್ಪನವರ, ವೀರಣ್ಣ ಹಲಗೇರಿ, ರಾಜು ಪೂಜಾರ, ಮಲ್ಲನಗೌಡ ಸೊರಟೂರ, ರೈತ ಮಹಿಳೆಯರಾದ ಸುವರ್ಣಾ ಜಾವಳ್ಳಿ, ಸರೋಜಾ ಆರ್. ಮರಡಿ, ಎಚ್.ಎ. ಮುಲ್ಲಾ, ಗ್ರಾಮ ಘಟಕದ ಅಧ್ಯಕ್ಷ ಸಿದ್ದಪ್ಪ ದಾನಪ್ಪನವರ, ಈಶಪ್ಪ ಮಳವಳ್ಳಿ, ಮಲ್ಲನಗೌಡ ತಡಸನಹಳ್ಳಿ, ಬಸವರಾಜ ಹೊಟ್ಟಿಗೌಡ್ರ, ದೇವರಾಜ ಮರಿಗೌಡ್ರ, ಲೇಸಪ್ಪ ಕಣಸೋಗಿ, ಚಂದ್ರಪ್ಪ ಮರಿಗೌಡ್ರ, ಉಜ್ಜಪ್ಪ ಮರಿಗೌಡ್ರ, ಶೇಖಪ್ಪ ಮಳವಳ್ಳಿ, ಬೈರಪ್ಪ ಮೇಗಳಮನಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.