ಹಾವೇರಿ

26ರಿಂದ ಶಿವಸಂಚಾರ ನಾಟಕ ಪ್ರದರ್ಶನ

Published On :

ಕನ್ನಡಪ್ರಭ ವಾರ್ತೆ, ಹಾನಗಲ್ಲ, ನ. 18
ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿ ಶಿವ ಸಂಚಾರ ತಂಡದ ನಾಟಕಗಳ ಪ್ರದರ್ಶನ ನ. 26ರಿಂದ 28ರ ವರೆಗೆ ಹಾನಗಲ್ಲಿನ ಕುಮಾರೇಶ್ವರ ರಂಗಮಂದಿರದಲ್ಲಿ ನಡೆಯಲಿದೆ. ಶರಣಸತಿ-ಲಿಂಗಪತಿ, ವಿಶ್ವಬಂಧು ಮರುಳಸಿದ್ಧ, ಮಹಾಬೆಳಗು ನಾಟಕಗಳ ಪ್ರದರ್ಶನವನ್ನು ಸಾಣೇಹಳ್ಳಿ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸುವರು ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ತಿಳಿಸಿದರು.
ಹಾನಗಲ್ಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಣೆಹಳ್ಳಿ ಶಿವಕುಮಾರ ಕಲಾ ಸಂಘ ಶಿವ ಸಂಚಾರ ನಾಟಕ ಪ್ರದರ್ಶನದ ಅಂಗವಾಗಿ ನ. 26ರಿಂದ 28ರ ವರೆಗೆ ಹಾನಗಲ್ಲಿನ ಕುಮಾರೇಶ್ವರ ಬಯಲು ರಂಗಮಂದಿರದಲ್ಲಿ ಸಂಜೆ 7 ಗಂಟೆಯಿಂದ ನಾಟಕ ಪ್ರದರ್ಶನ ಆರಂಭವಾಗಲಿದೆ. ನ. 26ರಂದು ಶಿವಶರಣೆ ಅಕ್ಕಮಹಾದೇವಿ ಜೀವನ ಸಾಧನೆ ಕುರಿತಾದ 'ಶರಣ ಸತಿ ಲಿಂಗಪತಿ', ನ. 27ರಂದು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಬಗೆಗಿನ 'ವಿಶ್ವಬಂಧು ಮರುಳಸಿದ್ಧ', 28ರಂದು ಬಸವೇಶ್ವರರ ಕುರಿತಾದ 'ಮಹಾಬೆಳಗು' ನಾಟಕಗಳ ಪ್ರದರ್ಶನವಿದೆ. ಹಾನಗಲ್ಲಿನ ಕುಮಾರೇಶ್ವರ ಸೇವಾ ಸಮಿತಿ ಕಾರ್ಯಕ್ರಮ ಆಯೋಜಿಸಿದೆ ಎಂದು ಸಿ.ಎಂ. ಉದಾಸಿ ತಿಳಿಸಿದರು.
ಎಪಿಎಂಸಿ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ, ಕುಮಾರೇಶ್ವರ ವಿದ್ಯಾವರ್ಧಕ ಟ್ರಸ್ಟ್ ನಿರ್ದೇಶಕ ಎನ್.ಜಿ. ಕುಂಬಾರಿ, ಪುರಸಭೆ ಮಾಜಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಸಾಹಿತಿ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಮಾರುತಿ ಶಿಡ್ಲಾಪುರ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಪ್ರಭು ಗುರಪ್ಪನವರ, ನಿವೃತ್ತ ಶಿಕ್ಷಕ ಎಚ್.ಎನ್. ಸವಣೂರ, ಪ್ರಾಚಾರ್ಯ ಎನ್. ಸದಾಶಿವಪ್ಪ, ಮುಖ್ಯೋಪಾಧ್ಯಾಯ ವಸ್ತ್ರದ, ಬಿ.ಎಸ್. ಕರಿಯಣ್ಣನವರ, ನಿರಂಜನ ಗುಡಿ, ಸಚಿನ ಕಬ್ಬೂರ, ಸಿ.ಜಿ. ಪಾಟೀಲ, ಎ.ಎಸ್. ಜಗದೀಶಪ್ಪ, ಟಿ. ಶಿವಕುಮಾರ, ಎನ್.ಎಂ. ಚಿಲಕವಾಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.