ಕನಕದಾಸರು ನಾಡಿನ ಹೆಮ್ಮೆಯ ಪ್ರತೀಕ
ಹಾನಗಲ್ಲ: ಜಾತಿ ಹೆಸರಿನಲ್ಲಿ ಸಮುದಾಯಗಳ ನಡುವೆ ಗೊಂದಲಗಳಿರಬಾರದು ಎಂಬ ನೀತಿಯಡಿ ಸಮಾಜದ ಅಂಕು-ಡೊಂಕುಗಳನ್ನ್ನು ತಿದ್ದಿದ ದಾಸಶ್ರೇಷ್ಠ ಕನಕದಾಸರು ಈ ನಾಡಿನ ಹೆಮ್ಮೆ ಎಂದು ಶಾಸಕ ಮನೋಹರ ತಹಶೀಲ್ದಾರ್ ಹೇಳಿದರು.
ತಾಲೂಕು ಆಡಳಿತ, ತಾಪಂ, ಪುರಸಭೆ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ದಾಸಶ್ರೇಷ್ಠ ಕನಕದಾಸರ ಜಯಂತ್ಯುತ್ಸವ್ನ ಉದ್ಘಾಟಿಸಿ ಅವರು ಮಾತನಾಡಿದರು.
ದಾನ, ತ್ಯಾಗ, ಭಕ್ತಿಗೆ ಮೇರು ವ್ಯಕ್ತಿತ್ವದಿಂದ ನಾಡಿಗೆ ಮಾರ್ಗದರ್ಶಿಯಾಗಿ ಬಾಳಿದವರು ಕನಕದಾಸರು. ಸಾಮಂತರಾಗಿ ಸರ್ವವನ್ನು ತ್ಯಾಗ ಮಾಡಿ ಸಮಾಜಕ್ಕಾಗಿ ದಾಸತ್ವ ಪಡೆದು ಶ್ರೀ ಕೃಷ್ಣನನ್ನೇ ಮೆಚ್ಚಿಸಿ ಅಚ್ಚರಿ ಮೂಡಿಸಿದ ಕನಕದಾಸರು ಎಲ್ಲ ಸಮುದಾಯಗಳು ಗೌರವಿಸುವ ವ್ಯಕ್ತಿತ್ವವುಳ್ಳವರು. ಅವರ ಸಂದೇಶ ಆದರ್ಶಗಳನ್ನ್ನು ಪಾಲಿಸುವ ಮೂಲಕ ಅವರ ಬದುಕು ಬರಹಕ್ಕೆ ಸಾರ್ಥಕತೆ ಸಲ್ಲಬೇಕಾಗಿದೆ ಎಂದರು.
ಶಿಗ್ಗಾಂವಿಯ ಉಪನ್ಯಾಸಕ ಡಾ. ಬಾಲಚಂದ್ರ ತೊಂಡಿಹಾಳ, ಕನಕದಾಸರ ಸಾಹಿತ್ಯ ಸಾರ್ವಕಾಲಿಕ ಸತ್ಯ. ಮೌನ ಕ್ರಾಂತಿ ಮಾಡಿ ಸಾಹಿತ್ಯದ ಮೂಲಕ ಸರ್ವಸ್ವವನ್ನು ಸಾಧಿಸಿದ ಜ್ಞಾನದ ಆಗರವೇ ಆಗಿದ್ದ ಕನಕದಾಸರು ಗುಣಗ್ರಾಹಿಯಾಗಿದ್ದರು. ವ್ಯಕ್ತಿಯನ್ನ್ನು ಬಣ್ಣದಿಂದ ಗುರುತಿಸಬೇಕಾಗಿಲ್ಲ. ಬದುಕಿನ ಗುಣದಿಂದ ಪ್ರೀತಿಸಬೇಕು ಎಂದರು.
ಪ್ರದೇಶ ಕುರುಬರ ಸಂಘದ ತಾಲೂಕು ಅಧ್ಯಕ್ಷ ದಾನಪ್ಪ ಗಂಟೇರ ಮಾತನಾಡಿ, ಕನಕದಾಸರು ಸಾಹಿತ್ಯದ ಮೂಲಕವಾಗಿಯೇ ಒಂದಾಗಿ ಬಾಳುವ ಸಂದೇಶ ನೀಡಿದವರು ಎಂದರು.
ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರು ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಉಪಾಧ್ಯಕ್ಷ ಮಹ್ಮದ್ಜಾಫರ್ ಕೇಣಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಪ್ರಸನ್ನಕುಮಾರ ಬಯಲುಸೀಮೆ ಹಾಗೂ ಸುದೀಪ ಕಡೆಮನಿ ಕನಕದಾಸರ ವೇಷಧಾರಿಗಳಾಗಿ ಗಮನಸೆಳೆದು ವೇದಿಕೆ ಅಲಂಕರಿಸಿದ್ದರು. ಹರ್ಷಿತಾ ಹೊಸಮನಿ ಭರತನಾಟ್ಯದ ಮೂಲಕ ಮೆರಗು ತಂದರು.
ಜನತಾ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ರಂಗ ಕಲಾವಿದ ರವಿ ಲಕ್ಷ್ಮೇಶ್ವರ ಕನಕದಾಸರ ಗೀತೆಗಳನ್ನ್ನು ಹಾಡಿದರು. ಕಲಾವಿದ ಸತೀಶ ಕೊರಮರ ಸಂಗಡಿಗರ ಶಹನಾಯಿವಾದನ ಜರುಗಿತು. ತಹಸೀಲ್ದಾರ್ ಡಾ. ನಾಗೇಂದ್ರ ಹೊನ್ನಳ್ಳಿ ಸ್ವಾಗತಿಸಿದರು. ನಿರಂಜನ ಗುಡಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

