ಸಹಕಾರಿ ಬ್ಯಾಂಕುಗಳು ಕಳೆದ ಹೋದ ವಿಶ್ವಾಸ ಗಳಿಸಬೇಕು
ಧಾರವಾಡ: ಕಳೆದ ಐದು ವರ್ಷಗಳ ಹಿಂದೆ ಹಲವಾರು ಕಾರಣಗಳಿಂದ ಸಹಕಾರಿ ಬ್ಯಾಂಕುಗಳು ಜನತೆಯ ವಿಶ್ವಾಸ ಕಳೆದುಕೊಂಡಿದ್ದವು. ಆದರೆ, ಇತ್ತೀಚೆಗೆ ಸಮೃದ್ಧವಾಗಿ ಬೆಳೆಯುತ್ತಿದ್ದು, ಮತ್ತೆ ಜನತೆಯ ವಿಶ್ವಾಸ ಗಳಿಸಬೇಕಿದೆ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.
ಇಲ್ಲಿನ ಹಳೇ ದಲಾಲ್ ಮಾರ್ಕೇಟ್‌ನಲ್ಲಿ ಆರ್ಯ ವೈಶ್ಯ ಕೋ-ಆಪರೇಟಿವ್ ಬ್ಯಾಂಕ್‌ನ ನೂತನ ಸ್ವಂತ ಕಟ್ಟಡಕ್ಕೆ ಸ್ಥಳಾಂತರದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಲ್ಲಿನ ಕೆಸಿಸಿ ಬ್ಯಾಂಕ್ ಆರ್ಥಿಕ ಪರಿಸ್ಥಿತಿಯ ಬಿಕ್ಕಟ್ಟಿನಿಂದಾಗಿ ಅಧೋಗತಿಗೆ ಇಳಿದಿದ್ದು, ಜೊತೆಗೆ ಈ ಪರಿಸ್ಥಿತಿ ಉಳಿದ ಎಲ್ಲ ಸಹಕಾರಿ ಬ್ಯಾಂಕ್‌ಗಳ ಮೇಲೂ ಪರಿಣಾಮ ಬೀರಿತ್ತು. ಆದರೆ, ಕೆಸಿಸಿ ಬ್ಯಾಂಕ್ ಉತ್ತಮವಾಗಿ ಬೆಳೆಯುತ್ತಿದ್ದು ಜೊತೆಗೆ ಉಳಿದ ಸಹಕಾರಿಗಳು ಜೊತೆಗೆ ಮುನ್ನಡೆಯಬೇಕೆಂದು ಆಶಿಸಿದರು. ಸೇಫ್ ಡಿಪಾಜಿಟ್ ಲಾಕರ್ ಉದ್ಘಾಟಿಸಿದ ಕರ್ನಾಟಕ ಆರ್ಯ ವೈಶ್ಯ ಮಹಾಸಭೆ ಅಧ್ಯಕ್ಷ ಆರ್.ಪಿ. ರವಿಶಂಕರ, 2004ರಲ್ಲಿ ಆರ್ಯ ವೈಶ್ಯ ಕೋ-ಆಪರೇಟಿವ್ ಬ್ಯಾಂಕ್‌ಗೆ ಚಾಲನೆ ನೀಡಲಾಯಿತು. ಕೆಲ ಜನರು ಹಾಸ್ಯವಾಗಿ ಮಾತನಾಡಿದ್ದರು. ಮುಂದೇ ಅವರೇ 2007ರಲ್ಲಿ ಈ ಬ್ಯಾಂಕ್ ಬಗ್ಗೆ ಆಸಕ್ತಿ ಹೊಂದಿದರು ಎಂದರು.
ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಬ್ಯಾಂಕುಗಳು ಶತಮಾನವನ್ನು ಕಾಣಬೇಕಾದರೆ ಬ್ಯಾಂಕಿನ ಸಿಬ್ಬಂದಿ ಮತ್ತು ಗ್ರಾಹಕರ ಮಧ್ಯೆ ಪ್ರಾಮಾಣಿಕತೆ ಇರಬೇಕು. ಇದರ ಜೊತೆಗೆ ಕರ್ತವ್ಯ ಪ್ರಜ್ಞೆಯನ್ನೂ ಅಳವಡಿಸಿಕೊಳ್ಳಬೇಕು ಎಂದರು. ಶಾಸಕ ಅರವಿಂದ ಬೆಲ್ಲದ, ಆರ್ಯ ವೈಶ್ಯ ಕೋ-ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಕೃಷ್ಣಪ್ಪ ಸವಳಕರ, ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ಈರಣ್ಣ ಆಕಳವಾಡಿ, ವಿನಾಯಕ ಆಕಳವಾಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

