ಮೋದಿ ಶಕ್ತಿ ಕುಂದಿಸಲಾಗದು: ಬಳ್ಳಾರಿ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಅ. 29
ನರೇಂದ್ರ ಮೋದಿ ಬಿಹಾರದ ಪಟನಾದಲ್ಲಿ ನಡೆಸಿದ ರ್ಯಾಲಿಯಲ್ಲಿ ನಡೆದ ಬಾಂಬ್ ಸ್ಫೋಟ ಖಂಡಿಸಿ, ಬಿಜೆಪಿ ಯುವ ಮೋರ್ಚಾ ಬ್ಯಾಡಗಿ ತಾಲೂಕು ಘಟಕ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು.
ಪಟ್ಟಣದ ಹಳೇ ಪುರಸಭೆಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ಕಾರ್ಯಕರ್ತರು ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಬಿಹಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ವಿಜಯಭರತ್ ಬಳ್ಳಾರಿ ಮಾತನಾಡಿ, ದೇಶಕ್ಕೆ ಒಳ್ಳೆಯದನ್ನೇ ಮಾಡಬೇಕೆಂದು ನರೇಂದ್ರ ಮೋದಿ ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದಾರೆ. ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಪಟ್ಟಭದ್ರ ಹಿತಾಸಕ್ತಿಗಳು ಅವರ ವೇಗಕ್ಕೆ ಕಡಿವಾಣ ಹಾಕುತ್ತಿದ್ದು, ಯಾವುದೇ ಕಾರಣಕ್ಕೂ ಅವರನ್ನು ತಡೆಯಲು ಸಾಧ್ಯವಿಲ್ಲ ಎಂದರು.
ಮೋದಿ ರ್ಯಾಲಿಯಲ್ಲಿ ಸೇರುತ್ತಿರುವ ಜನಸ್ತೋಮವನ್ನು ಕಂಡು ವಿರೋಧ ಪಕ್ಷಗಳಿಗೆ ನಡುಕ ಹುಟ್ಟಿದೆ. ಹೀಗಾಗಿ, ವಾಮ ಮಾರ್ಗದಲ್ಲಿ ಅವರ ಶಕ್ತಿ ಕುಂದಿಸಲು ಮುಂದಾಗಿವೆ. ಓಡುವ ಕುದುರೆಯನ್ನು ಕಟ್ಟಿಹಾಕುವ ಕೆಲಸದಲ್ಲಿ ವಿರೋಧ ಪಕ್ಷಗಳು ವಿಫಲವಾಗಲಿವೆ ಎಂದರು.
ಜಿತೇಂದ್ರ ಸುಣಗಾರ ಮಾತನಾಡಿ, ನರೇಂದ್ರ ಮೋದಿ ರ್ಯಾಲಿಯ ವೆಚ್ಚವನ್ನು ಕೇಳುತ್ತಿರುವ ಕಾಂಗ್ರೆಸ್, ಈವರೆಗೂ ಸರ್ಕಾರ ನಡೆಸಿದ ರ್ಯಾಲಿಗಳ ವೆಚ್ಚಗಳನ್ನು ಬಹಿರಂಗಪಡಿಸಲಿ. ಅಮಾನವೀಯ ಕೃತ್ಯದ ಹಿಂದಿರುವ ವ್ಯಕ್ತಿಗಳನ್ನು ಬಂಧಿಸಬೇಕು. ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಯಲ್ಲಪ್ಪ ಕುಡುಪಲಿ, ರುದ್ರೇಶ್ ಗೌಡ ಚನ್ನಗೌಡ್ರ, ಚಂದ್ರಣ್ಣ ಬಾರ್ಕಿ, ದಾದಾಪೀರ ಮುಲ್ಲಾ, ಪಿ.ಎಂ. ಬಾಳಪ್ಪನವರ, ಎಸ್.ವಿ. ವಿರಕ್ತಮಠ, ಎಂ. ಬುಳ್ಳಮ್ಮನವರ, ಸಿ.ಎಂ. ಉಪ್ಪುಣಸಿ, ಬಿ.ಕೆ. ಕೋಳೆ, ಮಂಜುನಾಥ ಜಾಧವ ಇದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

